»   » ಪ್ರೀತಿಯ ಪತಿ ಯಶ್ ಹುಟ್ಟುಹಬ್ಬಕ್ಕೆ ಮುದ್ದು ಮಡದಿ ರಾಧಿಕಾ ವಿಶಸ್

ಪ್ರೀತಿಯ ಪತಿ ಯಶ್ ಹುಟ್ಟುಹಬ್ಬಕ್ಕೆ ಮುದ್ದು ಮಡದಿ ರಾಧಿಕಾ ವಿಶಸ್

Posted By:
Subscribe to Filmibeat Kannada

ಪರಸ್ಪರ ಪ್ರೀತಿಸುತ್ತಿದ್ದರೂ, ಅದನ್ನ ಪಬ್ಲಿಕ್ ಮಾಡದೇ... ಇಷ್ಟು ವರ್ಷ ''ನನ್ನ ಬೆಸ್ಟ್ ಫ್ರೆಂಡ್ ಯಶ್ ಗೆ ಹುಟ್ಟುಹಬ್ಬದ ಶುಭಾಶಯ'' ಅಂತ ಫೇಸ್ ಬುಕ್ ಮೂಲಕ ವಿಶ್ ಮಾಡುತ್ತಿದ್ದ ನಟಿ ರಾಧಿಕಾ ಪಂಡಿತ್ ಇಂದು ಅದೇ ಯಶ್ ಗೆ ಮುದ್ದು ಮಡದಿಯಾಗಿ... ಯಶ್ ಪಕ್ಕದಲ್ಲಿ ನಿಂತು... ಪತಿಯ 31ನೇ ಬರ್ತಡೇ ಸೆಲೆಬ್ರೇಷನ್ ಗೆ ಸಾಕ್ಷಿ ಆಗಿದ್ದಾರೆ.

ಮದುವೆ ಆದ ನಂತರ ರಾಕಿಂಗ್ ಸ್ಟಾರ್ ಗಿದು ಮೊದಲ ಹುಟ್ಟುಹಬ್ಬ. ಹೀಗಾಗಿ ಯಶ್ ಗೆ ಇವತ್ತು ತುಂಬಾ ಸ್ಪೆಷಲ್ ದಿನ. ಹಾಗಂತ, ಪತ್ನಿ ರಾಧಿಕಾ ಪಂಡಿತ್ ಇದ್ದಾರೆ ಎಂಬ ಕಾರಣಕ್ಕೆ ಅಭಿಮಾನಿಗಳನ್ನ ಯಶ್ ಮರೆತಿಲ್ಲ. ಪತ್ನಿ ಜೊತೆಯಲ್ಲೇ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.[ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?]

ಹಾಗೇ, ತಮ್ಮ ಎಂದಿನ ಸ್ಟೈಲ್ ನಲ್ಲಿ ರಾಧಿಕಾ ಪಂಡಿತ್ ಕೂಡ 'ಪತಿ ಯಶ್'ಗೆ ಫೇಸ್ ಬುಕ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಮುದ್ದು ಮಡದಿಯ ವಿಶಸ್

''ನನ್ನ ಬೆಸ್ಟ್ ಫ್ರೆಂಡ್... ನನ್ನ ಪತಿ... ನಮ್ಮ ರಾಕಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು'' ಅಂತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.[ಪತ್ನಿ ಜೊತೆ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ಹುಟ್ಟುಹಬ್ಬದ ಸಂಭ್ರಮ]

ರಾಧಿಕಾ ಪಂಡಿತ್ ಕೊಟ್ಟ ಗಿಫ್ಟ್ ಏನು.?

ಮದುವೆ ಬಳಿಕ ಹನಿಮೂನ್ ಗಾಗಿ ಹವಾಯಿಗೆ ತೆರಳಿದ್ದ ಜೋಡಿ ನಿನ್ನೆಯಷ್ಟೇ ವಾಪಸ್ ಮರಳಿದರು. ಹೀಗಾಗಿ, ಯಶ್ ಗೆ ಏನು ಬರ್ತಡೇ ಗಿಫ್ಟ್ ಕೊಡಬೇಕು ಎಂಬುದನ್ನ ಯೋಚಿಸಲು ರಾಧಿಕಾ ಪಂಡಿತ್ ಗೆ ಸಮಯ ಸಿಗ್ಲಿಲ್ವಂತೆ.

ನನಗಿಂತ ಗಿಫ್ಟ್ ಬೇಕಾ.?

''ಈಗಷ್ಟೇ ಮದುವೆ ಆಗಿದೆ. ಬರ್ತಡೇಗೆ ಜೊತೆಯಲ್ಲಿ ಇದ್ದೇನೆ. ಇದಕ್ಕಿಂತ ಗಿಫ್ಟ್ ಬೇಕಾ.?'' ಎಂದು ನಗುತ್ತಾರೆ ಯಶ್ ಪತ್ನಿ ರಾಧಿಕಾ ಪಂಡಿತ್.

ರಾಧಿಕಾ ಕೊಟ್ಟ ಮೊದಲ ಗಿಫ್ಟ್

ತಾವೇ ತಯಾರು ಮಾಡಿದ್ದ ಕಾರ್ಡ್ ಒಂದನ್ನು ಯಶ್ ಗೆ ಗಿಫ್ಟ್ ಮಾಡಿದ್ರಂತೆ ರಾಧಿಕಾ ಪಂಡಿತ್.

ಪ್ರತಿ ವರ್ಷ ರಾಧಿಕಾಗೆ ಮೊದಲ ಫೋನ್

''ಪ್ರತಿ ವರ್ಷ ಬರ್ತಡೇ ದಿನ 12 ಗಂಟೆ ಆಗ್ತಿದ್ದಂತೆ, ನಾನೇ ರಾಧಿಕಾಗೆ ಫೋನ್ ಮಾಡ್ತಿದೆ. ಅವಳು ವಿಶ್ ಮಾಡಿದ ನಂತರ ಹೊರಗೆ ಬಂದು ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡ್ತಿದ್ದೆ. ಈ ವರ್ಷ ರಾಧಿಕಾ ಜೊತೆಗೆ ಇದ್ದಾಳೆ. ಇದಕ್ಕಿಂತ ಖುಷಿ ಇನ್ನೇನು ಬೇಕು?'' ಎನ್ನುತ್ತಾರೆ ಯಶ್.

English summary
Kannada Actress Radhika Pandit has taken her Facebook page to wish her husband Rocking Star Yash on his 31st birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada