For Quick Alerts
  ALLOW NOTIFICATIONS  
  For Daily Alerts

  ಆಯ್ರಾ ಬರ್ತಡೇಯಲ್ಲಿ ಯಶ್-ದರ್ಶನ್ ಅಪ್ಪುಗೆಯ ಫೋಟೋ ವೈರಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಮಂಡ್ಯ ಚುನಾವಣೆಯ ನಂತರ ಆಯ್ರಾ ಹುಟ್ಟುಹಬ್ಬದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ದರ್ಶನ್ ಯಾವುದೆ ಕಾರ್ಯಕ್ರಮಕ್ಕೂ ಎಂಟ್ರಿ ಕೊಡುವುದಿಲ್ಲ. ಆದರೆ ನಿನ್ನ ರಾತ್ರಿ ನಡೆದ ಆಯ್ರಾ ಅದ್ದೂರಿ ಹುಟ್ಟುಹಬ್ಬದ ಸಂಭ್ರಮಕ್ಕೆ ದರ್ಶನ್ ನಟಿ ಮತ್ತು ಸಂಸದೆ ಸುಮಲತಾ ಜೊತೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು.

  ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ನಿನ್ನೆ ಸಂಜೆ ಆಯ್ರಾ ಬರ್ತಡೇ ಪಾರ್ಟಿ ನೆರವೇರಿತು. ಆಯ್ರಾ ಜನ್ಮದಿನಕ್ಕೆ ಇಡೀ ಸ್ಯಾಂಡಲ್ ವುಡ್ ಹಾಜರಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ರಾಕ್ ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್, ಅನಿರುದ್ಧ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಆದರೆ ಅಚ್ಚರಿ ಮೂಡಿಸಿದ್ದು ಅಂದರೆ ದರ್ಶನ್ ಹಾಜರಿ.

  ಮಗಳ ಹುಟ್ಟುಹಬ್ಬ ಸಡಗರದಲ್ಲಿ ಮಗುವಾಗಿ ಕುದುರೆ ಸವಾರಿ ಮಾಡಿದ ಯಶ್.!ಮಗಳ ಹುಟ್ಟುಹಬ್ಬ ಸಡಗರದಲ್ಲಿ ಮಗುವಾಗಿ ಕುದುರೆ ಸವಾರಿ ಮಾಡಿದ ಯಶ್.!

  ದರ್ಶನ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಯಶ್ ಆತ್ಮೀಯವಾಗಿ ಸ್ವಾಗತಿಸಿ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಇಬ್ಬರ ಅಪ್ಪುಗೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಡ್ಯ ಚುನಾವಣೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಜೋಡೆತ್ತುಗಳಾಗಿ ಅಬ್ಬರಿಸಿದ್ದರು ದರ್ಶನ್ ಮತ್ತು ಯಶ್. ಇಬ್ಬರ ಸ್ನೇಹ ಸಂಬಂಧ ಚುನಾವಣೆಯ ನಂತರವು ಹಾಗೆ ಮುಂದುವರೆದಿದ್ದು ಆಯ್ರಾ ಹುಟ್ಟುಹಬ್ಬ ಇಬ್ಬರನ್ನು ಮತ್ತೆ ಒಟ್ಟಿಗೆ ಸೇರಿದೆ.

  ಆಯ್ರಾ ಮೊದಲ ಹುಟ್ಟುಹಬ್ಬ ಸಂಭ್ರಮ ಅದ್ದೂರಿಯಾಗಿತ್ತು. ಇಡೀ ರಾಕಿಂಗ್ ಕುಟುಂಬ ಸಮಂಭ್ರಮದಲ್ಲಿ ಭಾಗಿಯಾಗಿತ್ತು. ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದ ಸದಸ್ಯರು, ಬಂಧು-ಮಿತ್ರರು ಸೇರಿದಂತೆ ಹಲವರು ಆಗಮಿಸಿ ಆಯ್ರಾಗೆ ಶುಭ ಕೋರಿದರು. ಫನ್ ವರ್ಲ್ಡ್ ನಲ್ಲಿ ನಿನ್ನೆ ಆಯ್ರಾ ಹುಟ್ಟುಹಬ್ಬಕ್ಕೆ ಜನ ಸಾಗರವೇ ಹರಿದುಬಂದಿತ್ತು.

  English summary
  Kannada actor Darshan participate in Yash daughter Ayra birthday party. Yash and Darshan hugging photo viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X