Happy Birthday Yash: ರಾಕಿಂಗ್ ಸ್ಟಾರ್ ಯಶ್ 36ನೇ ಹುಟ್ಟು ಹಬ್ಬ: ಪತ್ನಿ, ಮಕ್ಕಳಿಂದ ವಿಶೇಷ ಉಡುಗೊರೆ!

ನಟ ರಾಕಿಂಗ್ ಸ್ಟಾರ್‌ ಯಶ್‌ಗೆ ಹುಟ್ಟು ಹಬ್ಬದ ಸಂಭ್ರಮ. ಯಶ್ ಹುಟ್ಟುಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ಪ್ರತಿ ವರ್ಷ ಯಶ್ ತಮ್ಮ ಅಭಿಮಾನಿಗಳ ಜೊತೆಗೆ ಸೇರಿ ಕೇಕ್‌ ಕಟ್‌ ಮಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಿಲ್ಲ.

Recommended Video

ಕಲರ್ ಫುಲ್ ಆಗಿತ್ತು ರಾಧಿಕಾ, ಯಶ್ ಹೊಸ ವರ್ಷದ ಆಚರಣೆ

ಇನ್ನು ಯಶ್‌ ಹುಟ್ಟ ಹಬ್ಬಕ್ಕೆ ಅವರ ಹೆಸರು ಸಾಮಾಜಿಕ ಜಾತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ಅವರ ಅಭಿಮಾನಿಗಳು, ಪ್ರೀತಿ ಪಾತ್ರರು ಎಲ್ಲರೂ ಯಶ್‌ ಅವರಿಗೆ ಹುಟ್ಟು ಹಬ್ಬದ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ. ಟ್ವಿಟ್ಟರ್‌ನಲ್ಲೂ ಕೂಡ ಯಶ್ ಬರ್ತ್‌ಡೇ ಸದ್ದು ಮಾಡುತ್ತಿದೆ.

ಈ ಬಾರಿ ಯಶ್‌ ಅವರು 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಈ ವರ್ಷವೂ ಕೂಡ ಯಶ್ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಮನೆಯವರ ಸಮ್ಮುಖದಲ್ಲಿ ಸರಳವಾಗಿ ಬರ್ತ್‌ ಡೇ ಮಾಡಿಕೊಳ್ಳುತ್ತಿದ್ದಾರೆ.

ಮಧ್ಯರಾತ್ರಿ ವಿಶೇಷ ಕೇಕ್ ಕತ್ತರಿಸಿದ ಯಶ್: ವಿಡಿಯೋ ಹಂಚಿಕೊಂಡ ಪತ್ನಿ ರಾಧಿಕಾ!

ಮಧ್ಯರಾತ್ರಿ ವಿಶೇಷ ಕೇಕ್ ಕತ್ತರಿಸಿದ ಯಶ್: ವಿಡಿಯೋ ಹಂಚಿಕೊಂಡ ಪತ್ನಿ ರಾಧಿಕಾ!

ನಟ ಯಶ್ ಈ ಬಾರಿ ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಕೇಕ್‌ ಕಟ್‌ ಮಾಡುತ್ತಿಲ್ಲ. ಬದಲಿಗೆ ಅವರು ಕುಟುಂಬದ ಜೊತೆಗೆ ಕೇಕ್‌ ಮಾಡಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಧ್ಯರಾತ್ರಿ ಕೇಕ್‌ ಕಟ್ ಮಾಡಿದ್ದಾರೆ. ಯಶ್‌ಗಾಗಿ ಕುಟುಂಬಸ್ಥರು ವಿಶೇಷವಾದ ಕೇಕ್ ರೆಡಿ ಮಾಡಿದ್ದಾರೆ. ಕೆಜಿಎಫ್2ನಲ್ಲಿ ಇರುವ ಅಂಶಗಳನ್ನು ಒಳಗೊಂಡ ಕೇಕ್ ಕಟ್ ಮಾಡಿದ್ದಾರೆ ಯಶ್. ಈ ಬಗ್ಗೆ ಸಣ್ಣದೊಂದು ವೀಡಿಯೊ ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್!

ಯರ್ಥವ್, ಆಯ್ರಾ ಕಡೆಯಿಂದ ಅಪ್ಪನಿಗೆ ವಿಶೇಷ ಉಡುಗೊರೆ!

ಯರ್ಥವ್, ಆಯ್ರಾ ಕಡೆಯಿಂದ ಅಪ್ಪನಿಗೆ ವಿಶೇಷ ಉಡುಗೊರೆ!

ಇನ್ನು ಯಶ್‌ಗೆ ಮಕ್ಕಳ ಕಡೆಯಿಂದಲೂ ವಿಶೇಷವಾದ ಉಡುಗೊರೆ ಸಿಕ್ಕಿದೆ. ಯಥರ್ವ್ ಮತ್ತು ಆಯ್ರಾ ಇಬ್ಬರು ಅಪ್ಪನಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಹ್ಯಾಪಿ ಬರ್ತ್ ಡೇ ಡಾಡಾ ಎಂದು ಬರೆದಿರುವ ಗ್ರೀಟಿಂಗ್‌ ಮೇಲೆ, ಇಬ್ಬರು ಮಕ್ಕಳ ಕೈ ಅಚ್ಚು ಇದೆ. ನೀಲಿ ಮತ್ತು ಹಸಿರು ಬಣ್ಣದಲ್ಲಿ ಕೈ ಅಚ್ಚು ಒತ್ತಾಗಿದೆ. ಇದನ್ನು ಕೂಡ ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೆಜಿಎಫ್2 ವತಿಯಿಂದ ವಿಶೇಷ ಉಡುಗೊರೆ!

ಇನ್ನು ಯಶ್ ಹುಟ್ಟು ಹಬ್ಬ ಅಂದರೆ ಅವರ ಸಿನಿಮಾದ ಕಡೆಯಿಂದ ಏನಾದರೂ ಒಂದು ಅಪ್ಡೇಟ್‌ಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿರುತ್ತಾರೆ. ಅಂತೆಯೇ ಕೆಜಿಎಫ್ 2 ಚಿತ್ರ ತಂಡದಿಂದ ಯಾವ ಅಪ್ಡೇಟ್ ಹೊರ ಬರದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ ನಿಂದ ಸರ್ಪ್ರೈಸ್ ಬರಿದೆ ಎನ್ನುವುದನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾತಾಣದಲ್ಲಿ ಖಚಿತ ಪಡಿಸಿದೆ.

20 ದಿನಕ್ಕೂ ಮೊದಲೇ ಅಭಿಯಾನ ಆರಂಭಿಸಿದ್ದ ಅಭಿಮಾನಿಗಳು!

20 ದಿನಕ್ಕೂ ಮೊದಲೇ ಅಭಿಯಾನ ಆರಂಭಿಸಿದ್ದ ಅಭಿಮಾನಿಗಳು!

ಸ್ಟಾರ್ ನಟರ ಹುಟ್ಟು ಹಬ್ಬ ಬಂತು ಅಂದ್ರೆ ಸಾಕು ಅದು ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಕ್ಯಾಲೆಂಡರ್‌ನಲ್ಲಿ ಹಬ್ಬಗಳನ್ನು ಮನೆಯಲ್ಲಿ ಮಾಡುತ್ತಾರೋ ಇಲ್ಲವೋ, ಆದರೆ ತಮ್ಮ ನೆಚ್ಚಿನ ಸಿನಿಮಾ ನಟರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕೊರೊನಾ ಕಾರಣಕ್ಕೆ ಈ ಎರಡು ವರ್ಷಗಳಿಂದ ಕನ್ನಡ ಸ್ಟಾರ್‌ ನಟರು ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡಿಲ್ಲ. ಯಶ್ ಅಭಿಮಾನಿಗಳೂ ಕೂಡ ಯಶ್‌ ಅವರ ಜೊತೆಗೆ ಅವರ ಹುಟ್ಟು ಹಬ್ಬ ಆಚರಿಸಲು ಕಾತರರಾಗಿದ್ದರು. ಆದರೆ ಅದು ಈ ಬಾರಿಯೂ ಸಾಧ್ಯ ಆಗಿಲ್ಲ. ಈ ಹಿಂದೆಯೇ ಯಶ್ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ ಎಂದು ಹೇಳಿದ್ದರು. ಇನ್ನೂ 20 ದಿನಕ್ಕೂ ಮೊದಲೇ ಯಶ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಿದ್ದರು.

More from Filmibeat

English summary
Rocking Star Yash Birthday Special: Radhika Pandith Share A Quet Video And Kgf2 New Update Will Out Today,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X