'ರಾಮಾಯಣ' ಚಿತ್ರಕ್ಕೆ ಯಶ್ ಹಣ ಹೂಡಿದ್ದೇಕೆ ? 'ರಾಮ'ನ ಬದಲು 'ರಾವಣ'ನ ಪಾತ್ರ ಒಪ್ಪಿಕೊಂಡಿದ್ದೇಕೆ ?
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಯಶ್ ಇತ್ತೀಚೆಗೆ ನೀಡಿರುವ ಸಂದರ್ಶನವೇ ಕೈಗನ್ನಡಿ.
ಹೌದು, 'ಹಾಲಿವುಡ್'ಗೆ ಗಾಳಿ ಹಾಕಿರುವ ಯಶ್ 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಮ್ಯಾಗಜೀನ್‌ನ ಫೋಟೋಶೂಟ್‌ಗಾಗಿ ಕ್ಯಾಮರಾಗೆ ವೆರೈಟಿ ಫೋಸ್ ಕೊಟ್ಟಿದ್ದಾರೆ. ಈ 'ಹಾಲಿವುಡ್ ರಿಪೋರ್ಟರ್'ಗೋಸ್ಕರ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಟಾಕ್ಸಿಕ್ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿಯೇ ಕುಂತು ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ರಾಮಾಯಣ ಚಿತ್ರದ ಕುರಿತು ಮಾತನಾಡಿ ರಾವಣನ ಪಾತ್ರವನ್ನು ತಾವೇ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಹೌದು, ಅಸಲಿಗೆ ರಣ್ಭೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಆರಂಭದಿಂದಲೂ ಹೆಚ್ಚೆಚ್ಚು ಸದ್ದು ಮಾಡುತ್ತಿರುವುದು ಯಶ್ ಕಾರಣಕ್ಕೆ. ಅದಕ್ಕೆ ಯಶ್ ಈ ಚಿತ್ರದ ಸಹ ನಿರ್ಮಾಪಕ ಅನ್ನುವುದು ಒಂದು ಕಾರಣವಾದರೆ, ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿ ಇನ್ನೊಂದು ಕಾರಣ. ಈ ಎರಡು ಸುದ್ದಿಗಳಲ್ಲಿ ಯಶ್ ತಾವು ಚಿತ್ರದ ಸಹ ನಿರ್ಮಾಪಕ ಎಂದು ಹಿಂದೆ ಒಪ್ಪಿಕೊಂಡಿದ್ದರು. ಆದರೆ ಒಪ್ಪಿಕೊಳ್ಳಲು ಕಾರಣವೇನು ಎನ್ನುವುದನ್ನು ಹೇಳಿರಲಿಲ್ಲ. ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಕೂಡ ನೀಡಿರಲಿಲ್ಲ. ಆದರೆ ಈಗ ಯಶ್ ಈ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ರಾಮಾಯಣವನ್ನು ತಾವು ನಿರ್ಮಾಣ ಮಾಡುತ್ತಿರುವುದೇಕೆ ಎಂದು ಹೇಳಿದ್ದಾರೆ. ರಾವಣನ ಪಾತ್ರವನ್ನು ನಾನೇ ಮಾಡುತ್ತಿದ್ದೇನೆ ಎಂದು ಅಧಿಕೃತವಾಗಿ ಹೇಳಿದ್ದಾರೆ.
ಅನುಪಮಾ ಚೋಪ್ರಾ ಜೊತೆ ಈ ಸಂದರ್ಶನದಲ್ಲಿ ಮಾತನಾಡಿರುವ ಯಶ್, ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದ ವಿಎಫ್‌ಎಕ್ಸ್ ಕೆಲಸಕ್ಕೆ ನಾನು ಲಾಸ್ ಏಂಜಲೀಸ್‌ನಲ್ಲಿ ಬಿಡಾರ ಹೂಡಿದ್ದೆ. ಇದೇ ಕೆಲಸಕ್ಕೆ ಅಲ್ಲಿನ ಡಿಎನ್‌ಇಜಿ ಮತ್ತು ಪ್ರೈಮ್ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಸಂಪರ್ಕಿಸಿದೆ ಆ ನಂತರ ಅವರನ್ನು ಭೇಟಿಯಾದೆ ಎಂದಿದ್ದಾರೆ. ಇನ್ನೂ ಈ ಭೇಟಿಯಲ್ಲಿ ನಮಿತ್ ರಾಮಾಯಣದ ಬಗ್ಗೆ ನನ್ನ ಜೊತೆ ಮಾತನಾಡಿದರು. ಹಲವಾರು ವರ್ಷಗಳಿಂದ ಈ ಚಿತ್ರದ ಮೇಲೆ ಕೆಲಸ ಮಾಡುತ್ತಿರುವುದಾಗಿ ಹೇಳಿದರು ಎಂದಿರುವ ಯಶ್ ಅವರ ಆಲೋಚನೆ ಮತ್ತು ನನ್ನ ಆಲೋಚನೆ ಎರಡು ಒಂದೇ ಎನ್ನುವ ಭಾವನೆ ನನಗೆ ಈ ಮೊದಲ ಭೇಟಿಯಲ್ಲಿಯೇ ಬಂತು ಈ ಕಾರಣಕ್ಕೆ ನಾನು ಈ ಚಿತ್ರದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ಆ ನಂತರ ಹಿಂಜರಿಕೆಯಿಂದಲೇ ನಮಿತ್ ನೀವು ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ಮಾಡಬಹುದಾ ಎಂದು ನನ್ನನ್ನೂ ಕೇಳಿದರು ಎಂದಿರುವ ಯಶ್ ಆಗ ನಾನು ಪಾತ್ರವನ್ನು ಪಾತ್ರದಂತೆ ಪರಿಗಣಿಸದರೆ.. ಇಂದು ಈ ಚಿತ್ರ ಆಗದಿದ್ದರೆ ಮುಂದೆ ಆಗುವುದಿಲ್ಲ ಎಂದು ಹೇಳಿದ್ದೇ, ಇಂತಹ ಚಿತ್ರಕ್ಕೆ ಎಲ್ಲರು ಸ್ಟಾರ್‌ಡಮ್‌ನ ಪಕ್ಕಕ್ಕೆ ಇಟ್ಟು ಕೈ ಜೋಡಿಸಬೇಕು, ಯೋಜನೆಗಳನ್ನು ನಿರೂಪಿಸಬೇಕು ಎಂದಿದ್ದೆ ಎಂದು ಹೇಳಿದ್ದಾರೆ.
ಮುಂದುವರೆದು ಈ ಚಿತ್ರವನ್ನು ಹೇಗೆ ಕೊಂಡೊಯ್ಯಬೇಕು ಎನ್ನುವದರ ಕುರಿತು ಚರ್ಚೆ ಮಾಡಲು ನಾನು ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಕೂಡ ಭೇಟಿಯಾದೆ ಎಂದಿರುವ ಯಶ್ ನಾನು ಈ ಚಿತ್ರದ ಭಾಗವಾಗುವ ಮುನ್ನವೇ ರಾಮನ ಪಾತ್ರಕ್ಕೆ ರಣ್ಭೀರ್ ಕಪೂರ್ ಆಯ್ಕೆ ನಡೆದು ಹೋಗಿತ್ತು ಎಂದು ಹೇಳಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಅವರೇ ಮಾಡಬೇಕೆನ್ನುವ ಆಶಯ ಇತ್ತು ಅದ್ರಂತೆ ನಾವೆಲ್ಲರು ಸೇರಿ ಸಾಯಿ ಪಲ್ಲವಿ ಅವರನ್ನು ಸೀತೆ ಪಾತ್ರಕ್ಕೆ ಆಯ್ಕೆ ಮಾಡಿದೇವು ಎಂದು ಹೇಳಿದ್ದಾರೆ. ಇನ್ನೂ ರಾಮಾಯಣದಲ್ಲಿ ರಾವಣನ ಪಾತ್ರ ಹೊರತು ಪಡಿಸಿ ಬೇರೆ ಯಾವ ಪಾತ್ರಕ್ಕೆ ನೀವು ರೆಡಿಯಾಗ್ತಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುವ ಯಶ್, ನಾನು ರಾವಣನ ಪಾತ್ರ ಬಿಟ್ಟರೆ ಬೇರೆ ಯಾವ ಪಾತ್ರ ಆಗಿದ್ದರೂ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ರಾವಣನ ಪಾತ್ರಕ್ಕೆ ಜೀವ ತುಂಬುವುದೇ ರೋಚಕ ಅನುಭವ, ಒಬ್ಬ ನಟನಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಈ ರಾಮಾಯಣ ನಿಮಗೆ ವಿಶಿಷ್ಠವಾದ ಅನುಭವವನ್ನು ನೀಡಲಿದೆ ಎಂದು ಭರವಸೆಯನ್ನು ನೀಡಿದ್ದಾರೆ


Click it and Unblock the Notifications











