ಗರ್ಭಿಣಿ ರಾಧಿಕಾ ಬಯಕೆ ಈಡೇರಿಸೋಕೆ ಯಶ್ ಮಾಡಿದ್ದೇನು.?
Recommended Video

ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸದ್ಯ ಏಳು ತಿಂಗಳ ಗರ್ಭಿಣಿಯಾಗಿದ್ದು, ಪತಿ ರಾಕಿಂಗ್ಸ್ಟಾರ್ ಯಶ್ ಪತ್ನಿಯ ಎಲ್ಲ ಬಯಕೆಗಳನ್ನು ಈಡೇರಿಸುತ್ತಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ರಾಧಿಕಾ ಪಂಡಿತ್ ಗಾಗಿ ಸ್ನೇಹಿತೆಯರು ರುಚಿ-ರುಚಿಯಾದ ಅಡುಗೆ ಮಾಡಿಕೊಂಡು ಬಂದಿದ್ದರು. ಇದೀಗ, ಪತಿ ಯಶ್ ಸರದಿ.
ರಾಧಿಕಾಗಾಗಿ ರಾಕಿಂಗ್ ಸ್ಟಾರ್ ಅಡುಗೆ ಭಟ್ಟರಾಗಿದ್ದಾರೆ. ಪತ್ನಿಗೆ ಇಷ್ಟವಾದ ತಿಂಡಿ ಮಾಡಿಕೊಡಲು ಮಿಸ್ಟರ್ ರಾಮಾಚಾರಿ ಸ್ವತಃ ಭಟ್ಟರಾಗಿ ಕೆಲಸ ಮಾಡಿದ್ದಾರೆ. ರಾಧಿಕಾಗೋಸ್ಕರ ಯಶ್ ಏನು ಅಡುಗೆ ಮಾಡಿದ್ರೋ ಗೊತ್ತಿಲ್ಲ. ಇದನ್ನ ರಾಧಿಕಾ ಕೂಡ ಬಿಟ್ಟುಕೊಟ್ಟಿಲ್ಲ. ಆದ್ರೆ, ಯಶ್ ಕೆಟ್ಟ ಶೆಫ್ ಅಂತೂ ಅಲ್ಲ ಎಂದು ಮೆಚ್ಚಿಕೊಂಡಿದ್ದಾರೆ.

ಇದನ್ನ ಖುದ್ದು ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ನನ್ನ ಪತಿ ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ, ನನಗಾಗಿ ಅಡುಗೆ ಮಾಡಲು ಟ್ರೈ ಮಾಡಿದಾಗ... ಮಿಸ್ಟರ್ ರಾಕಿಂಗ್ ಸ್ಟಾರ್ 'ಬ್ಯಾಡ್ ಶೆಫ್' ಏನು ಅಲ್ಲ' ಎಂದು ಸ್ಟೇಟಸ್ ಹಾಕಿದ್ದಾರೆ.
ಇನ್ನು ಗರ್ಭಿಣಿಯ ಆಸೆ ಪೂರೈಸುತ್ತಿರುವ ಯಶ್ ಈ ಹಿಂದೆ 'ಬೇಬಿ ಮೂನ್' ನೆಪದಲ್ಲಿ 'ಪ್ರವಾಸಿಗರ ಸ್ವರ್ಗ' ಮಾಲ್ದೀವ್ಸ್ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದರು.
ಸ್ವತಃ ಯಶ್ ಅವರೇ ಹೇಳಿಕೊಂಡಿರುವ ಪ್ರಕಾರ ಡಿಸೆಂಬರ್ ನಲ್ಲಿ ರಾಧಿಕಾಗೆ ವೈದ್ಯರು ದಿನಾಂಕ ಕೊಟ್ಟಿದ್ದಾರಂತೆ. ಮತ್ತೊಂದೆಡೆ ಅದೇ ತಿಂಗಳಲ್ಲಿ ಕೆಜಿಎಫ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.


Click it and Unblock the Notifications











