ಯಶ್ ಕಣ್ಣೀರಾಕಿದ್ದನ್ನ ರಾಧಿಕಾ ಇದೇ ಮೊದಲ ಬಾರಿ ನೋಡಿದ್ದಂತೆ
Recommended Video
ರಾಧಿಕಾ ಪಂಡಿಂತ್ ಅಭಿಮಾನಿಗಳಿಗೊಂದು ಶಾಕಿಂಗ್ ಸುದ್ದಿ ನೀಡಿದ್ದಾರೆ. ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ಕಣ್ಣೀರಾಕಿರುವ ಬಗ್ಗೆ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಕೆಜಿಎಫ್-2 ನಲ್ಲಿ ಬ್ಯುಸಿ ಇರುವ ಯಶ್ ಕಣ್ಣೀರಾಕಿದ್ದಾದ್ದರು ಯಾಕೆ ಅಂತೀರಾ? ಯಶ್ ಗಳಗಳನೆ ಅತ್ತಿದ್ದು ಮುದ್ದು ಮಗಳಿಗಾಗಿ.
ಯಶ್ ಮತ್ತು ರಾಧಿಕಾ ಮುದ್ದು ಮಗಳು ಅಯಿರಾಗೆ 9 ತಿಂಗಳಾಗಿದೆ. 9ನೇ ತಿಂಗಳಲ್ಲಿ ಮಗಳಿಗೆ ಕಿವಿಚುಚ್ಚಿದ್ದಾರೆ. ಮಕ್ಕಳಿಗೆ ಕಿವಿಚುಚ್ಚುವಾಗ ಆಗುವ ವಿಪರೀತ ನೋವು, ಕಿರುಚಾಟವನ್ನು ನೋಡಲು ಯಾವ ತಂದೆ ತಾಯಿಯು ಇಷ್ಟಪಡುವುದಿಲ್ಲ. ಅಯಿರಾಗೆ ಕಿವಿ ಚುಚ್ಚುವಾಗ ಯಶ್ ಮತ್ತು ರಾಧಿಕಾ ಇಬ್ಬರು ಭಾವುಕರಾಗಿದ್ದಾರೆ.

ಅಲ್ಲದೆ ಮಗಳು ನೋವನ್ನು ನೋಡಲಾಗದೆ ಯಶ್ ಕಣ್ಣೀರಾಕಿದ್ದಾರಂತೆ.
ಈ ಬಗ್ಗೆ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ನಾವು ಅಯಿರಾ ಕಿವಿ ಚುಚ್ಚಿದ್ದೇವೆ. ಪೋಷಕರಾಗಿ ಈ ಸಂಧರ್ಭಕ್ಕೆ ಸಾಕ್ಷಿಯಾಗುವುದು ನಿಜಕ್ಕು ಕಷ್ಟಕರ. ಮಗಳು ತುಂಬ ಅಳುವುದನ್ನು ನೋಡಿ ನಮ್ಮ ಹೃದಯವೆ ಒಡೆದು ಹೋದ ಹಾಗೆ ಆಗಿತ್ತು. ನಾನು ಮೊದಲ ಬಾರಿಗೆ ಯಶ್ ಕಣ್ಣಲ್ಲಿ ನೀರು ನೋಡಿದೆ. ಈ ಬಂಧ ಎಷ್ಟು ಅಮೂಲ್ಯವಾದುದು ಎಂದು ಅರ್ಥವಾಯಿತು. ಚಿಂತಿಸ ಬೇಡಿ ಅಪ್ಪ ಮಗಳು ಇಬ್ಬರು ಆರಾಮಾಗಿದ್ದಾರೆ" ಎಂದು ಮಗಳ ಕಿವಿ ಚುಚ್ಚಿದ ಅನುಭವ ಮತ್ತು ರಾಕಿಂಗ್ ಸ್ಟಾರ್ ಅತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಮೊನ್ನೆ ಮೊನ್ನೆಯಷ್ಟೆ ರಾಕಿಂಗ್ ದಂಪತಿ ಮಗಳು ಅಯಿರಾಗೆ ಕೃಷ್ಣನ ವೇಷ ಧರಿಸಿ ತರಹೇವಾರಿ ಫೊಟೋಗಳನ್ನು ಕ್ಲಿಕ್ಕಿಸಿದ್ದರು. ಮುದ್ದು ಮುದ್ದಾದ ಅಯಿರಾ ಕೃಷ್ಣಗೆ ಲೈಕ್ಸ್ ಗಳ ಸುರಿಮಳೆಯೆ ಹರಿದು ಬಂದಿತ್ತು.


Click it and Unblock the Notifications











