»   » ರೆಬೆಲ್ ಸ್ಟಾರ್ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್.!

ರೆಬೆಲ್ ಸ್ಟಾರ್ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್.!

Posted By: Pavithra
Subscribe to Filmibeat Kannada
ರೆಬೆಲ್ ಸ್ಟಾರ್ ಅಂಬರೀಷ್ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್ | FIlmibeat Kannada

ಚಿತ್ರರಂಗದ ಪ್ರತಿಯೊಬ್ಬರಿಗೂ ಒಬ್ಬ ರೋಲ್ ಮಾಡೆಲ್ ಅಂತ ಇದ್ದೇ ಇರ್ತಾರೆ. ಗಾಡ್ ಫಾದರ್ ಇಲ್ಲದೇ ಇದ್ರು ಕೂಡ ಇವರಂತೆ ಬೆಳೆಯಬೇಕು ಎಂಬ ಆಸೆಯಂತು ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದೇ ರೀತಿ ಈಗ ರಾಕಿಂಗ್ ಸ್ಟಾರ್ ಯಶ್, ರೆಬೆಲ್ ಸ್ಟಾರ್ ಹಾದಿಯಲ್ಲಿ ಸಾಗೋದಕ್ಕೆ ಮುಂದಾಗಿದ್ದಾರೆ.

ಅಂಬಿಯಂತೆ ಯಶ್ ಕೂಡ ಸಿನಿಮಾರಂಗದಲ್ಲಿ ಬೆಳೆಯಬೇಕು ಹಾಗೂ ಅವರಂತೆ ಜನರಲ್ಲಿ ಬೆರಿಯಬೇಕು ಎಂದು ನಿರ್ಧರಿಸಿದ್ದಾರಂತೆ. ಈ ಮಾತನ್ನ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿಕೊಂಡಿದ್ದಾರೆ.

ಹಾಗಿದ್ರೆ, ಯಶ್ ಈ ಮಾತನ್ನ ಹೇಳಿದ್ದೇಲ್ಲಿ? ಯಾವ ವಿಷಯಕ್ಕೆ ಹೇಳಿದರು ಎಂದು ತಿಳಿಯಲು ಮುಂದೆ ಓದಿ...

ಚಿತ್ರರಂಗದ ಬೆಳವಣಿಗೆಗೆ ರಾಕಿಂಗ್ ಸ್ಟಾರ್ ಸಾಥ್

ಯಶ್ ಚಿತ್ರರಂಗಕ್ಕೆ ಈಗ ಬರುತ್ತಿರುವ ಹೊಸ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೊಸ ನಟರ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರ ಸಿನಿಮಾಗಳ ಪ್ರಚಾರಕ್ಕೆ ಜೊತೆಯಾಗಿದ್ದಾರೆ.

ಆಡಿಯೋ ಕಾರ್ಯಕ್ರಮದಲ್ಲಿ ಯಶ್ ಹೇಳಿಕೆ

'ಸಂಯುಕ್ತ-2' ಚಿತ್ರದ ಆಡಿಯೋ ರಿಲೀಸ್ ಮಾಡಿದ ಯಶ್, ಇದೇ ಸಮಯದಲ್ಲಿ ಹೊಸಬರ ಸಿನಿಮಾಗಳ ಕಾರ್ಯಕ್ರಮಗಳಿಗೆ ಸ್ವಲ್ಪ ಸಮಯ ಕೊಡೋದರಿಂದ ಅವರಿಗೆ ಸಹಾಯ ಆಗುತ್ತೇ ಅನ್ನೋದಾದ್ರೆ ನನಗೆ ನೋ ಪ್ರಾಬ್ಲಂ ಎಂದಿದ್ದಾರೆ. 'ಸಂಯುಕ್ತ-2' ನಟ ಚೇತನ್ ಚಂದ್ರ, ನೇಹಾ ಪಾಟೀಲ್, ಐಶ್ವರ್ಯ ಸಿಂಧೋಗಿ ಅಭಿನಯದ ಸಿನಿಮಾ. ಇದೇ ವಾರ ತೆರೆಗೆ ಬರ್ತಿದೆ.

ರಾಕಿಂಗ್ ಸ್ಟಾರ್‌ ಗಿತ್ತು ರೆಬೆಲ್ ಸ್ಟಾರ್ ಆಶೀರ್ವಾದ

ಆಡಿಯೋ ರಿಲೀಸ್ ಮಾಡಿದ ಯಶ್, ಅಂಬರೀಶ್ ಅವರನ್ನ ನೆನಪು ಮಾಡಿಕೊಂಡರು. ನಾನು ಕಲಾವಿದ ಆಗ್ಬೇಕು ಎಂದುಕೊಂಡಾಗ ನನಗೆ ಅಂಬರೀಶ್ ಅವರ ಸಪೂರ್ಟ್ ಇತ್ತು. ನನ್ನ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದರು .ಈಗ ನಾನು ಈ ಮಟ್ಟಕ್ಕೆ ಬಂದಿದ್ದೇನೆ, ಅಂಬಿ ಅವರಂತೆ ನಡೆದುಕೊಳ್ತೇನೆ ಎಂದಿದ್ದಾರೆ ಆಧುನಿಕ ಭಗೀರಥ.

ಅನೀಶ್ ಸಿನಿಮಾಗೂ ರಾಕಿಂಗ್ ಸಾಥ್

ಹೊಸಬರು ಮತ್ತು ಚಿತ್ರರಂಗದಲ್ಲಿ ಈಗ ತಾನೇ ನೆಲೆಕಾಣ್ತಿರುವ ನಟರಿಗೆ ಯಶ್ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲಾ. ಈ ಹಿಂದೆ ಅನೀಶ್ ಅಭಿನಯದ ಚಿತ್ರದ ಮಹೂರ್ತ ಸಮಾರಂಭಕ್ಕೂ ಬಂದು ಕ್ಲಾಪ್ ಮಾಡಿ ವಿಷ್ ಮಾಡಿದ್ದರು.

ಚಿತ್ರರಂಗದ ಹಲವರಿಗೆ ಮಾದರಿ

ಯಶ್ ಮತ್ತು ರಾಧಿಕಾ ಮದುವೆ ಆದ ನಂತರ ಚಿತ್ರರಂಗದ ಅದೆಷ್ಟೋ ಮಂದಿ ಈ ಜೋಡಿ ಸುಮಲತಾ ಅಂಬರೀಶ್ ರಂತೆ ಇರ್ತಾರೆ ಎಂಬ ಮಾತುಗಳನ್ನಾಡಿದ್ರು. ಅದೇ ರೀತಿ ಯಶ್ ಮತ್ತು ರಾಧಿಕಾ ಲೈಫ್ ಲೀಡ್ ಮಾಡ್ತಿದ್ದಾರೆ. ಇದೇ ರೀತಿ ಅನೇಕರಿಗೆ ಮಾದರಿಯಾಗಿ ಹೊಸಬರಿಗೆ ಸ್ಪೂರ್ತಿಯಾಗಿ ಮತ್ತಷ್ಟು ಕಲಾವಿದರಿಗೆ ಯಶ್ ಸಾಥ್ ನೀಡಲಿ.

English summary
Rocking star yash Encouraging new comers in kannada film indurstey. ಹೊಸಬರ ಸಿನಿಮಾಗಳಿಗೆ ಸಾಥ್ ನೀಡಲು ಮುಂದಾದ ರಾಕಿಂಗ್ ಸ್ಟಾರ್ ಯಶ್
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada