ಈ ಫೋಟೊ 'ಯಶ್ 19' ಶೂಟಿಂಗ್‌ನದ್ದಾ? ಕುತೂಹಲಕಾರಿ ಪ್ರಶ್ನೆಗೆ ಕೊನೆಗೂ ಈ ವಿಡಿಯೊ ಕೊಟ್ಟೇಬಿಡ್ತು ಉತ್ತರ!
ರಾಕಿಂಗ್ ಸ್ಟಾರ್ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದು ಸಿನಿ ರಸಿಕರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಕೆಜಿಎಫ್ ಚಿತ್ರ ಸರಣಿ ಮೂಲಕ ದೊಡ್ಡ ಮಟ್ಟದ ಯಶಸ್ಸು ಹಾಗೂ ಖ್ಯಾತಿಯನ್ನು ಪಡೆದುಕೊಂಡಿರುವ ಯಶ್ ತಮ್ಮ ಮುಂದಿನ ಚಿತ್ರದ ಕಥೆಯನ್ನು ಆಯ್ದುಕೊಳ್ಳುವಲ್ಲಿ ತೀವ್ರ ನಿಗಾ ವಹಿಸಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಸಹ ಯಶ್ ತಮ್ಮ ಮುಂದಿನ ಚಿತ್ರ ಯಾವುದು ಎಂಬುದನ್ನು ಘೋಷಿಸಿಯೇ ಇಲ್ಲ. ಹೀಗೆ ಮುಂದಿನ ಚಿತ್ರದ ಕುರಿತು ಯಶ್ ಸ್ವಲ್ಪವೂ ಮಾಹಿತಿ ಬಿಟ್ಟುಕೊಡದ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದು ಹಲವಾರು ಬಾರಿ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಡುವಂತೆ ಟ್ರೆಂಡ್ ಮಾಡಿದ್ದಾರೆ.

ಹೀಗಿದ್ದರೂ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಇನ್ನೂ ಸಹ ಸಿಹಿ ಸುದ್ದಿ ನೀಡದೇ ಇದ್ದು, ಕಳೆದ ಕೆಲ ದಿನಗಳ ಹಿಂದೆ ಯಶ್ 19 ಚಿತ್ರದ ಸ್ಟಿಲ್ ಎನ್ನಲಾದ ಫೋಟೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಹೌದು, ಯಶ್ ಚಿತ್ರೀಕರಣದ ಸ್ಥಳದಲ್ಲಿ ಕೆಜಿಎಫ್ ಲುಕ್‌ನಲ್ಲಿಯೇ ಗಡ್ಡ ಬಿಟ್ಟು ಕುಳಿತುಕೊಂಡಿರುವ ಫೋಟೊ ವೈರಲ್ ಆಗಿತ್ತು. ಚಿತ್ರೀಕರಣ ನಡೆಯುತ್ತಿರುವ ಜಾಗದ ಫೋಟೊ ಇದು ಎಂಬುದನ್ನು ಸುಲಭವಾಗಿ ಮನಗಂಡಿದ್ದ ಯಶ್ ಅಭಿಮಾನಿಗಳು ಇದು ಯಶ್ ಮುಂದಿನ ಚಿತ್ರದ ಶೂಟಿಂಗ್ ಸ್ಟಿಲ್ ಇರಬಹುದಾ ಎಂಬ ಪ್ರಶ್ನೆಯನ್ನು ಹೊರಹಾಕಿದ್ದರು.
ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಯಶ್ ಅವರ ಈ ಫೋಟೊ ಅಭಿಮಾನಿಗಳ ಊಹೆಯಂತೆ ಶೂಟಿಂಗ್ ಸ್ಥಳದ ಫೋಟೊನೇ. ಆದರೆ ಅದು ಚಿತ್ರದ ಶೂಟಿಂಗ್ ಅಲ್ಲ, ಬದಲಾಗಿ ಜಾಹೀರಾತೊಂದರ ಚಿತ್ರೀಕರಣದ ಸಮಯದ್ದು ಎಂಬುದು ಇದೀಗ ತಿಳಿದುಬಂದಿದೆ.
ಹೌದು, ವಿಲನ್ ಎಂಬ ಬ್ರಾಂಡ್ ಬೀಯರ್ಡ್ ಆಯಿಲ್ ಉತ್ಪನ್ನದ ಜಾಹೀರಾತನ್ನು ಬಿಡುಗಡೆಗೊಳಿಸಿದೆ. ಈ ಜಾಹೀರಾತಿನಲ್ಲಿ ಯಶ್ ನಟಿಸಿದ್ದು, ಈ ಜಾಹೀರಾತಿನ ಚಿತ್ರೀಕರಣದ ಸಂದರ್ಭದ ಫೋಟೊನೇ ಈ ಹಿಂದೆ ಯಶ್ 19 ಚಿತ್ರೀಕರಣದ ಫೋಟೊ ಎಂದು ವೈರಲ್ ಆಗಿತ್ತು ಎಂಬುದೀಗ ಬಹಿರಂಗವಾಗಿದೆ.
ಇನ್ನು ಈ ಜಾಹೀರಾತಿನಲ್ಲಿ ಕೆಲ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರವೊಂದರ ಫೈಟ್ ದೃಶ್ಯದ ಲೆವೆಲ್‌ಗೆ ಮೂಡಿಬಂದಿದೆ. ಈ ಜಾಹೀರಾತಿನ ವಿಡಿಯೊ ಸಹ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಹಾಗೂ ಇದರ ನಡುವೆಯೇ ಯಶ್ 19 ಯಾವಾಗ ಎಂಬ ಪ್ರಶ್ನೆ ಸಹ ಎದ್ದಿದೆ.
ಈ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ಯಶ್ ತಮ್ಮ ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳಲ್ಲಿ ಇರುವ ಕುತೂಹಲದ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದರು.
"ಹೇಳ್ತೀನಿ.. ಹಿಂಗ್ ಹೇಳೋಕಾಗುತ್ತಾ? ಒಂದಂತೂ ನಿಜ, ಜನ ನಮಗೆ ಏನು ಶಕ್ತಿ ಕೊಟ್ಟು ಬೆಳೆಸಿದಾರೆ, ಏನು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ, ನಾನು ನಂಬೋದು ಒಂದೇ. ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡ್ತಾ ಇದೆ. ಆ ಜವಾಬ್ದಾರಿ ನನ್ನ ಮೇಲಿದೆ. ದೇವರ ಸನ್ನಿಧಾನ ಸುಮ್ಮನೆ ಹೇಳೋದು ಬೇಡ. ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಅವರೆಲ್ಲರೂ ಖುಷಿ ಪಡೋ ರೀತಿ ಕೆಲಸ ಆಗುತ್ತೆ. ನಾನ್ ಹೇಳಿದ್ನಲ್ಲ, ನನಗೆ ಜವಾಬ್ದಾರಿ ಇದೆ. ಜನ ಫ್ರೀ ನೋಡೋ ಹಾಗೆ ಇದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರುವುದು, ಅವರು ಖುಷಿಯಿಂದ ಇರುವ ರೀತಿಯ ಕೆಲಸವನ್ನು ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ, ನಾನು ಮಾಡ್ತಾ ಇದ್ದೀನಿ" ಎಂದು ಹೇಳಿಕೆ ನೀಡಿದರು.
ಹೀಗೆ ಹೇಳಿಕೆ ನೀಡಿದ ಯಶ್‌ಗೆ ಸ್ಕ್ರಿಪ್ಟ್ ರೆಡಿಯಾಗಿದೆಯಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಯಶ್ "ಆಗಿದೆ.. ಆಗಿದೆ.. ಎಲ್ಲ ಹೇಳ್ತೀನಿ" ಎಂದು ಹೇಳಿದರು. ಈ ಮೂಲಕ ಯಶ್ ಸ್ಕ್ರಿಪ್ಟ್ ಒಂದನ್ನು ಕೇಳಿ ಮೆಚ್ಚಿಕೊಂಡಿರುವುದನ್ನು ಬಹಿರಂಗಪಡಿಸಿ ಅಭಿಮಾನಿಗಳಲ್ಲಿ ಇದ್ದ ಪ್ರಶ್ನೆಯೊಂದನ್ನು ದೂರ ಮಾಡಿದರು.


Click it and Unblock the Notifications











