»   » ರಾಧಿಕಾ ಪಂಡಿತ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಯಶ್ ಹೇಳಿದ್ದೇನು?

ರಾಧಿಕಾ ಪಂಡಿತ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಯಶ್ ಹೇಳಿದ್ದೇನು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ರೀಲ್ ನಲ್ಲಿ ಮಾತ್ರ ಅಲ್ಲ, ರಿಯಲ್ ನಲ್ಲೂ 'ಮಿಸ್ಟರ್ ಅಂಡ್ ಮಿಸಸ್' ಆಗುವುದಕ್ಕೆ ಹೊರಟಿರುವುದು ನಿಮಗೆಲ್ಲಾ ಗೊತ್ತೇಯಿದೆ. ಈ ವರ್ಷವನ್ನ 'ಪ್ರೇಮ ಪಕ್ಷಿಗಳು' ಒಟ್ಟಾಗಿ ಗೋವಾದಲ್ಲಿ ಬರಮಾಡಿಕೊಂಡಿದ್ದನ್ನೆಲ್ಲಾ ನೀವೇ ಕಣ್ತುಂಬಿಕೊಂಡಿದ್ದೀರಾ.

ಇಬ್ಬರ 'ಫ್ರೆಂಡ್ ಶಿಪ್' ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ, ಅದನ್ನ ಯಾರೂ ಕೇಳೋ ಹಾಗಿಲ್ಲ. ಅವರೂ ಬಾಯಿ ಬಿಟ್ಟು ಹೇಳೋ ಹಾಗಿಲ್ಲ. ಇಲ್ಲಿಯವರೆಗೂ ಯಾರ ಮುಂದೆಯೂ ತಮ್ಮ ಪ್ರೇಮ್ ಕಹಾನಿ ಬಗ್ಗೆ ಯಶ್ ಆಗಲಿ, ರಾಧಿಕಾ ಪಂಡಿತ್ ಆಗಲಿ ಮನಬಿಚ್ಚಿ ಮಾತನಾಡಿಲ್ಲ. 'ಹಾಗಿಲ್ಲವೇ ಇಲ್ಲ' ಅಂತ ಅಲ್ಲಗೆಳೆದೂ ಇಲ್ಲ.

Rocking Star Yash finally reveals about his love life

ಹೀಗಿರುವಾಗ, ಜನಪ್ರಿಯ ದಿನಪತ್ರಿಕೆಯೊಂದಕ್ಕೆ ಯಶ್ ನೀಡಿರುವ ಸಂದರ್ಶನದಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಕಾಮೆಂಟ್ ಮಾಡಿರುವುದು ಹೀಗೆ -

''ಜೀವನದಲ್ಲಿ ಪ್ರೀತಿ-ಮದುವೆ ಎರಡು ಸುಂದರ ಅನುಭವ. ಅದಕ್ಕೆ ಅದರದ್ದೇ ಆದ ಗೌರವ ಇದೆ. ಆ ಸಮಯ ಬರುವ ಮೊದಲು ಅದರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ. ನನಗೆ ನನ್ನ ಅಭಿಮಾನಿಗಳೊಂದಿಗೆ ನನ್ನ ಫ್ಯಾಮಿಲಿ ಕೂಡ ಅಷ್ಟೇ ಮುಖ್ಯ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಕರೆಯುತ್ತೇನೆ.'' [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]

Rocking Star Yash finally reveals about his love life

''ನಾನು ಸೆಲೆಬ್ರಿಟಿ ಆಗಿರುವ ಕಾರಣ, ನಾನು ನಿಂತರೂ-ಕುಂತರೂ ಸುದ್ದಿ ಆಗುತ್ತದೆ. ನನ್ನ ವೈಯುಕ್ತಿಕ ಜೀವನದ ಬಗ್ಗೆ ನಾನು ಡಿಗ್ನಿಟಿ ಮೇನ್ಟೇನ್ ಮಾಡುವುದು ಅಷ್ಟೇ ಮುಖ್ಯ. ಜನಕ್ಕೆ ನನ್ನ ಪರ್ಸನಲ್ ಲೈಫ್ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ, ನಾನು ಅಂತಹ ಸುದ್ದಿಗಳಿಂದ ಸದಾ ದೂರ ಉಳಿಯುತ್ತೇನೆ'' ಅಂತ ಯಶ್ ಹೇಳಿದ್ದಾರೆ. [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

ಅಲ್ಲಿಗೆ, ತಮ್ಮ ಪ್ರೇಮ ಪರ್ವದ ಬಗ್ಗೆ ಯಶ್ 'ಇಲ್ಲ' ಅಂದಿಲ್ಲ. ಅದನ್ನ ಒಪ್ಪಿಕೊಳ್ಳೋಕೆ ಈಗ ಅವರು ತಯಾರಿಲ್ಲ ಅಷ್ಟೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಪ್ರೀತಿ-ಪ್ರೇಮ-ಮದುವೆ ಅಂತ ಸ್ಟಾರ್ ಗಳು ಬಿಜಿಯಾದ್ರೆ, ಅಭಿಮಾನಿಗಳ ಸಂಖ್ಯೆ ಕಮ್ಮಿಯಾಗುತ್ತೆ ಅನ್ನುವ ಫೋಬಿಯಾ ಅವರಿಗೆ.

Rocking Star Yash finally reveals about his love life

ಅದೇನೇಯಿರಲಿ, ಭವಿಷ್ಯದ ಬಗ್ಗೆ ಆಲೋಚನೆಯಲ್ಲಿ ತೊಡಗಿರುವ ಯಶ್ ಆದಷ್ಟು ಬೇಗ ಒಂದು ನಿರ್ಧಾರ ತೆಗೆದುಕೊಂಡರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಫ್ಯಾನ್ಸ್ ಗೆ ಹಬ್ಬದೂಟ ಗ್ಯಾರೆಂಟಿ. (ಏಜೆನ್ಸೀಸ್)

English summary
In a chat with a Leading Daily, Rocking Star Yash has finally spoken about his love life. Here is what the Actor said about his Love and Marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada