»   » ರಾಕಿಂಗ್ ಸ್ಟಾರ್ 'ಗೂಗ್ಲಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್

ರಾಕಿಂಗ್ ಸ್ಟಾರ್ 'ಗೂಗ್ಲಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ 'ಗೂಗ್ಲಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗುವ ಸಮಯ ಹತ್ತಿರವಾಗಿದೆ. ಈ ಚಿತ್ರದ ಹಾಡುಗಳಿಗೆ ಕೇಳುಗರು ಈಗಾಗಲೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇನ್ನೇನಿದ್ದರೂ ಚಿತ್ರಮಂದಿರದಲ್ಲಿ ಗೂಗ್ಲಿ ಆಟ ನೋಡುವುದೊಂದು ಬಾಕಿ ಇದೆ. ಇದೇ ಜು.19ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಗೂಗ್ಲಿ' ಆಟ.

ಪವನ್ ಒಡೆಯರ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ ಅವರ ನಿರ್ದೇಶನದ 'ಗೋವಿಂದಾಯ ನಮಃ' ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿತ್ತು. ಈಗ 'ಗೂಗ್ಲಿ' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.


ಗೂಗ್ಲಿ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿವೆ. ಈಗ ಚಿತ್ರ ಸರಿಸುಮಾರು 120 ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿದೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ.  ಚಿತ್ರದಲ್ಲಿ ಒಂದೇ ಒಂದು ಪದಕ್ಕಷ್ಟೇ ಸೆನ್ಸಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಉಳಿದಂತೆ 2.15 ಗಂಟೆ ಚಿತ್ರಕ್ಕೆ ತುಟಿಪಿಟಿಕ್ ಎಂದಿಲ್ಲ.

ಚಿತ್ರದಲ್ಲಿ ಯಶ್ ಅವರು ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸುತ್ತಾರೆ. ಇನ್ನು ಕಾಲೇಜು ಅಂದ್ರೆ ಲವ್ವು ಗಿವ್ವು ನೋವು ಇಲ್ಲದೆ ಇರಲು ಸಾಧ್ಯವೆ? ಶರತ್ ಮತ್ತು ಸ್ವಾತಿ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಇನ್ನೇನು ಒಂದಾಗಬೇಕು ಅನ್ನುವಷ್ಟರಲ್ಲಿ 'ಗೂಗ್ಲಿ' ತರಹ ಕಥೆ ತಿರುವು ಪಡೆದುಕೊಳ್ಳುತ್ತದೆ. ಅದೇನು ಎಂಬುದನ್ನು ತೆರೆಯ ಮೇಲಿ ನೋಡಿ ಎನ್ನುತ್ತಿದ್ದಾರೆ ನಿರ್ದೇಶಕ ಪವನ್ ಒಡೆಯರ್.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರವಿದು. ಚಿತ್ರಕ್ಕೂ ವಿಭಿನ್ನ ಪ್ರಚಾರ ನೀಡಲಾಗಿದೆ. ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಮೂಡಬಿದಿರೆ, ಮಂಗಳೂರು ಮುಂತಾದಕಡೆ ಚಿತ್ರೀಕರಣ ನಡೆದಿದೆ.

ಚಿತ್ರದಲ್ಲಿ ಯಶ್ ಅವರಿಗೆ ಜೋಡಿ ಕೃತಿ ಖರಬಂದ. ಪಾತ್ರವರ್ಗದಲ್ಲಿ ಅನಂತ್ ನಾಗ್, ಸುಧಾಬೆಳವಾಡಿ, ಸಾಧು ಕೋಕಿಲಾ, ನೀನಾಸಂ ಅಶ್ವತ್ ಮುಂತಾದವರಿದ್ದಾರೆ. ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವ ಶ್ರೀಧರ್ ಸಂಗೀತ ನೀಡಿದ್ದಾರೆ. ಸನತ್ ಸುರೇಶ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪವನ್ ಒಡೆಯರ್, ಯೋಗರಾಜ್‍ಭಟ್, ಜಯಂತಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rocking Star Yash and Kriti Kharabanda lead Kannda film Googly slated for release on 19th July. The action-romance film directed by Pawan Wadeyar and produced by Jayanna combines.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada