ಬಾಂಗ್ಲಾದೇಶದಲ್ಲೂ ರಾಕಿಂಗ್ ಸ್ಟಾರ್ ಯಶ್ ಗಿದ್ದಾರೆ ಅಭಿಮಾನಿ ದೇವರು.!

By Harshitha

ದಶಕದ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಇಂದು ಬಹು ಬೇಡಿಕೆಯ ನಟ. ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟ ಯಶ್ ಕಾಲ್ ಶೀಟ್ ಗಾಗಿ ಇವತ್ತು ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ.

'ಮೊಗ್ಗಿನ ಮನಸ್ಸು', 'ಲಕ್ಕಿ', 'ಗೂಗ್ಲಿ', 'ರಾಜಾ ಹುಲಿ', 'ಗಜಕೇಸರಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಮಾಸ್ಟರ್ ಪೀಸ್'... ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ ಯಶ್ ಗೆ ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತದಾದ್ಯಂತ... ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ.

ಯಶ್ ಲುಕ್ ಮತ್ತು ಸ್ಟೈಲ್ ಗೆ ಫಿದಾ ಆಗಿರುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. 'ಅಣ್ತಮ್ಮ' ಅಂತ ಬಾಯ್ತುಂಬ ಕರೆಯುವ ಯಶ್ ಗೆ ಎಷ್ಟೋ ಹುಡುಗರು ಹಿಂಬಾಲಕರಾಗಿದ್ದಾರೆ. ಅದರಲ್ಲಿ ಬಾಂಗ್ಲಾದೇಶದ ಓರ್ವ ಯುವಕ ಕೂಡ ಒಬ್ಬರು.! ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ ವಿಡಿಯೋನ ನಿನ್ನೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಬಾಂಗ್ಲಾದೇಶದ ಪ್ರಜೆ ಆಗಿರುವ ಯಶ್ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನು ಅಂತ ನೀವೇ ನೋಡ್ಬಿಡಿ...

ಯಶ್ ರವರ ಬಹುದೊಡ್ಡ ಅಭಿಮಾನಿ

ಯಶ್ ರವರ ಬಹುದೊಡ್ಡ ಅಭಿಮಾನಿ

ಯಶ್ ಮೇಲೆ ಅಭಿಮಾನ ವ್ಯಕ್ತ ಪಡಿಸಿ ಬಾಂಗ್ಲಾದೇಶದ ಓರ್ವ ಯುವಕ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. ''ನಾನು ಬಾಂಗ್ಲಾದೇಶದವನು. ನಾನು ಯಶ್ ರವರ ಬಹು ದೊಡ್ಡ ಅಭಿಮಾನಿ. ಲವ್ ಯು ಮೈ ಬಾಸ್ ರಾಕಿಂಗ್ ಸ್ಟಾರ್ ಯಶ್'' ಎಂದು ಆ ಯುವಕ ಬರೆದುಕೊಂಡಿದ್ದಾರೆ.

ಜೈಕಾರ ಹಾಕಿದ ಯಶ್ ಫ್ಯಾನ್ಸ್

ಜೈಕಾರ ಹಾಕಿದ ಯಶ್ ಫ್ಯಾನ್ಸ್

ಯಶ್ ಮೇಲೆ ಬಾಂಗ್ಲಾದೇಶದ ಯುವಕ ತೋರಿರುವ ಅಭಿಮಾನಕ್ಕೆ 'ರಾಜಾಹುಲಿ' ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಆ ಯುವಕನಿಗೆ ಯಶ್ ಫ್ಯಾನ್ಸ್ ಜೈಕಾರ ಹಾಕುತ್ತಿದ್ದಾರೆ.

ಆತನಿಗೆ ಕನ್ನಡ ಗೊತ್ತಿಲ್ಲ

ಆತನಿಗೆ ಕನ್ನಡ ಗೊತ್ತಿಲ್ಲ

ಹಾಗ್ನೋಡಿದ್ರೆ, ಬಾಂಗ್ಲಾದೇಶದ ಆ ಯುವಕನಿಗೆ ಕನ್ನಡ ಭಾಷೆ ಗೊತ್ತಿಲ್ಲ. ಬಾಂಗ್ಲಾ, ಇಂಗ್ಲೀಷ್, ಹಿಂದಿ ಬಿಟ್ಟರೆ ಆತನಿಗೆ ಬೇರೆ ಯಾವ ಭಾಷೆಯೂ ಬರಲ್ಲ. ಆದರೂ, ಯಶ್ ರವರ ಚಿತ್ರಗಳನ್ನು ನೋಡಿ... ಯಶ್ ಗೆ ಆತ ಅಭಿಮಾನಿ ಆಗಿದ್ದಾರೆ.

ದೊಡ್ಡದಾಗಲಿದೆ ಅಭಿಮಾನಿ ಬಳಗ

ದೊಡ್ಡದಾಗಲಿದೆ ಅಭಿಮಾನಿ ಬಳಗ

ಅಂತೂ 'ಕೆ.ಜಿ.ಎಫ್' ಚಿತ್ರದ ಚಿತ್ರೀಕರಣವನ್ನ ನಟ ಯಶ್ ಕಂಪ್ಲೀಟ್ ಮಾಡಿದ್ದಾರೆ. ಅಕ್ಟೋಬರ್ ಹೊತ್ತಿಗೆ 'ಕೆ.ಜಿ.ಎಫ್' ರಿಲೀಸ್ ಆಗುವ ಸಾಧ್ಯತೆ ಇದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 'ಕೆ.ಜಿ.ಎಫ್' ಬಿಡುಗಡೆ ಆಗಲಿದೆ. ಇದರಿಂದ ಯಶ್ ಜನಪ್ರಿಯತೆ ಹಾಗೂ ಫ್ಯಾನ್ ಫಾಲೋವಿಂಗ್ ಮತ್ತಷ್ಟು ದೊಡ್ಡದಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

More from Filmibeat

English summary
Rocking Star Yash's biggest fan from Bangladesh has taken his Facebook page to express his admire towards Kannada Actor Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X