ಯಶ್ ಕೈಯಲ್ಲಿ 5 ಸಿನಿಮಾ: ಯಾವುದು ಸುದ್ದಿ, ಯಾವುದು ಗಾಳಿ ಸುದ್ದಿ!

ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾವಿರ ಕೋಟಿ ಸರದಾರ ಎನಿಸಿಕೊಂಡಿದ್ದಾರೆ. 'ಕೆಜಿಎಫ್' ನಂತರ ನಟ ಯಶಸ್ಸಿನ ರೇಖೆ ಉತ್ತುಂಗಕ್ಕೆ ಏರಿಬಿಟ್ಟಿದೆ. ಒಂದೇ ಸಿನಿಮಾದ ಮೂಲಕ ಯಶಸ್ಸಿನ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ ಯಶ್.

ನಟ ಯಶ್ ಕೆಜಿಎಫ್ ಮತ್ತು ಕೆಜಿಎಫ್ 2 ಚಿತ್ರದ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎನ್ನುವುದೇ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಲೇ ಇದೆ. ಯಶ್ ಮುಂದಿನ ಸಿನಿಮಾಗೆ ಯಾವಾಗಪ್ಪ ಮುಹೂರ್ತ ಇಡ್ತಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದೇ ಬೆನ್ನಲ್ಲೇ ಯಶ್ ಮುಂದಿನ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೇ ಯಶ್‌ಗೆ ನಿರ್ಮಾಣ ಮಾಡಲು, ನಿರ್ದೇಶನ ಮಾಡಲು ದೊಡ್ಡ ದೊಡ್ಡ ನಿರ್ಮಾಪಕ ನಿರ್ದೇಶಕರ ಹೆಸರು ಕೂಡ ಕೇಳಿ ಬರುತ್ತಿದೆ. ಎಲ್ಲವನ್ನು ಒಟ್ಟುಗೂಡಿಸಿದರೆ ಒಟ್ಟು ಐದು ಸಿನಿಮಾಗಳ ಲೆಕ್ಕ ಸಿಗುತ್ತವೆ. ಈ ಸಿನಿಮಾಗಳಲ್ಲಿ ಯಾವುದರಲ್ಲಿ ಯಶ್ ನಟಿಸ್ತಾರೆ, ಯಾವುದು ಗಾಳಿಸುದ್ದಿ ರೂಪದಲ್ಲಿ ಇದೆ ಎನ್ನುವುದನ್ನು ಮುಂದೆ ಓದಿ...

ಯಶ್ ಮುಂದಿನ ಚಿತ್ರ ನರ್ತನ್ ಜೊತೆ!

ಯಶ್ ಮುಂದಿನ ಚಿತ್ರ ನರ್ತನ್ ಜೊತೆ!

'ಕೆಜಿಎಫ್ 2' ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡ ಬಳಿಕ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸಹಜವಾಗಿ ಕುತೂಹಲ ಹುಟ್ಟಿಕೊಂಡಿದೆ. ಅಲ್ಲದೇ ಯಶ್ ಮುಂದಿನ ಸಿನಿಮಾ ಬಹುತೇಕ ಖಚಿತ ಕೂಡ ಆಗಿದೆ. ಕನ್ನಡದ ನಿರ್ದೇಶಕ ನರ್ತನ್ ಜೊತೆಗೆ ಯಶ್ ಮುಂದಿನ ಸಿನಿಮಾ ಮಾಡುತ್ತಾರೆ. ಈ ಚಿತ್ರಕ್ಕಾಗಿ ಯಶ್ ತಮ್ಮ ಲುಕ್ ಬದಲಾಯಿಸಿಕೊಳ್ಳುತ್ತಾರೆ. ಇತ್ತ ನರ್ತನ್ ಕೂಡ ಸಿನಿಮಾದ ತಯಾರಿಯನ್ನು ಭರ್ಜರಿಯಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ದುಡ್ಡು ಹಾಕುವುದು ಕೂಡ ಖಚಿತ ಎನ್ನಲಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಇರುವ ಮೂಲಗಳ ಮಾಹಿತಿಯ ಪ್ರಕಾರ ಯಶ್ ಮುಂದಿನ ಚಿತ್ರ ನರ್ತನ್ ಜೊತೆ.

ತೆಲುಗಿನಿಂದ ಬಿಗ್ ಆಫರ್!

ತೆಲುಗಿನಿಂದ ಬಿಗ್ ಆಫರ್!

ಇನ್ನು ರಾಕಿಂಗ್ ಸ್ಟಾರ್ ಯಶ್ ಸದ್ಯ ಕನ್ನಡದ ನಟನಾಗಿ ಮಾತ್ರ ಉಳಿದುಕೊಂಡಿಲ್ಲ. ಭಾರತೀಯ ಚಿತ್ರಂಗದಲ್ಲಿ ಸದ್ದು ಮಾಡಿದ್ದಾರೆ. ಹಾಗಾಗಿ ಪರ ಭಾಷೆಗಳಿಂದಲೂ ಸಾಕಷ್ಟು ದೊಡ್ಡ ದೊಡ್ಡ ಆಫರ್‌ಗಳು ಬರುತ್ತಿವೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಯಶ್‌ಗೆ ದೊಡ್ಡಮಟ್ಟದಲ್ಲಿ ಬೇಡಿಕೆ ಇಟ್ಟು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. 100 ಕೋಟಿಯ ಸಂಭಾವನೆಯನ್ನು ಕೊಡುವುದರ ಜೊತೆಗೆ ಯಶ್ ದಿಲ್‌ರಾಜು ಸಿನಿಮಾ ಮಾಡುತ್ತಾರೆ ಎನ್ನುವ ಈ ಸುದ್ದಿ ಇತ್ತೀಚಿಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಆದರೆ ಇದನ್ನು ಅಧಿಕೃತವಾಗಿ ಸಿನಿಮಾ ತಂಡ ಖಚಿತಪಡಿಸಿಲ್ಲ.

ಶಂಕರ್ ಜೊತೆ ಯಶ್ ಸಿನಿಮಾ!

ಶಂಕರ್ ಜೊತೆ ಯಶ್ ಸಿನಿಮಾ!

ತೆಲುಗು ಸಿನಿಮಾ ನಿರ್ಮಾಪಕ ಮಾತ್ರವಲ್ಲ, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಕೂಡ ಯಶ್ ಜೊತೆ ಸಿನಿಮಾ ಮಾಡುವ ಇಂಗಿತವನ್ನು ಹೊಂದಿದ್ದಾರೆ ಎನ್ನಲಾಗಿದೆ. ಶಂಕರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಈ ಚಿತ್ರಗಳ ನಂತ್ರ ಶಂಕರ್ ಯಶ್ ಜೊತೆಗೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆದರೆ ಈ ಸುದ್ದಿ ಕೂಡಾ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಇನ್ನುಳಿದಂತೆ ತೆಲುಗು ನಿರ್ದೇಶಕ ಸುಕುಮಾರ್ ಕೂಡ ಯಶ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನಲಾಗಿದ್ದು, ಇದು ಕೂಡ ಗಾಳಿ ಸುದ್ದಿ ರೂಪದಲ್ಲಿ ಇದೆ.

ಕೆಜಿಎಫ್ 3, ಪ್ರಭಾಸ್ ಜೊತೆ ಯಶ್!

ಕೆಜಿಎಫ್ 3, ಪ್ರಭಾಸ್ ಜೊತೆ ಯಶ್!

ಇನ್ನುಳಿದಂತೆ ಕೆಜಿಎಫ್ 3 ಇದ್ದೇ ಇದೆ. ಕೆಜಿಎಫ್ 3 ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಪ್ರಶಾಂತ್ ನೀಲ್ ಸಣ್ಣದೊಂದು ಸುಳಿವು ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಕೆಜಿಎಫ್ 2 ಸಿನಿಮಾದ ಕ್ಲೈಮಾಕ್ಸ್ ಕೂಡ, ಚಿತ್ರದ ಮುಂದುವರೆದ ಭಾಗ ಬರಲಿದೆ ಎನ್ನುವುದನ್ನು ಹೇಳಿದೆ. ಈ ಐದು ಸಿನಿಮಾಗಳ ಜೊತೆಗೆ ಯಶ್, ಪ್ರಭಾಸ್ ಜೊತೆಗೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ. ಸದ್ಯಕ್ಕೆ ಯಶ್ ಮತ್ತು ನರ್ತನ್ ಸಿನಿಮಾದ ಜೊತೆಗೆ ಕೆಜಿಎಫ್ 3 ಬರೋರುತ್ತದೆ ಎಂದು ಮಾತ್ರ ಹೇಳಲು ಸಾಧ್ಯ. ಮಿಕ್ಕಿ ಸುದ್ದಿಗಳು ಗಾಸಿಪ್ ರೂಪದಲ್ಲಿಯೇ ಇವೆ.

More from Filmibeat

English summary
Rocking Star Yash Have 5 Films In His Kitty, All Pan India Films, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X