»   » ಮತ್ತೆ ಒಂದಾದ್ರು ರಾಕಿಂಗ್ ಸ್ಟಾರ್ ಯಶ್ ಮತ್ತು ಜಯಣ್ಣ

ಮತ್ತೆ ಒಂದಾದ್ರು ರಾಕಿಂಗ್ ಸ್ಟಾರ್ ಯಶ್ ಮತ್ತು ಜಯಣ್ಣ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ನಾಳೆ(ಜನವರಿ 8) ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್ ಗಳ ಬರ್ತಡೇ ಅಂದರೆ ಹೊಸ ಚಿತ್ರಗಳು ಅನೌನ್ಸ್ ಆಗುವುದು ಕಾಮನ್ ವಿಚಾರ. ಯಶ್ ಬರ್ತಡೇ ವಿಶೇಷವಾಗಿ ನೃತ್ಯ ನಿರ್ದೇಶಕ ಹರ್ಷ ಹಾಗೂ ಯಶ್ ಕಾಂಬಿನೇಷನ್ ನ 'ರಾಣ' ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಆಗಿದೆ.

'ಗಜಕೇಸರಿ', 'ಗೂಗ್ಲಿ', 'ರಾಮಾಚಾರಿ' ಚಿತ್ರಗಳನ್ನ ನಿರ್ಮಾಣ ಮಾಡಿದ ಜಯಣ್ಣ ಹಾಗೂ ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಜಯಣ್ಣ ಮತ್ತು ಯಶ್ ಕಾಂಬಿನೇಶನ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳು ಬಂದಿವೆ. ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

rocking star Yash is again starring in the production of Jayanna Combines movie

ರಾಣ ಚಿತ್ರದಲ್ಲಿ ಯಶ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಈ ಹಿಂದೆ ಹರಿದಾಡಿತ್ತು. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕೆ ಜಿ ಎಫ್ ಲುಕ್ ನಲ್ಲೇ ಇದ್ದಾರೆ ಯಶ್. ಆದರೆ ಪೋಸ್ಟರ್ ಲುಕ್ ನೋಡಿದ್ರೆ ರಾನ ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನ್ ಮೆಂಟ್ ಚಿತ್ರ ಆಗುವುದು ಗ್ಯಾರೆಂಟಿ.

rocking star Yash is again starring in the production of Jayanna Combines movie

ಹರ್ಷ ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡುವ ಸ್ವಾಮಿ ಈ ಪೋಸ್ಟರ್ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಸಕ್ಸಸ್ ಫುಲ್ ಜೋಡಿ ಒಂದಾಗಿರುವುದು ಮತ್ತೊಂದು ಹಿಟ್ ಸಿನಿಮಾ ನೀಡುವುದಂತು ಪಕ್ಕಾ ಆಗಿದೆ.

English summary
kannada actor rocking star Yash is again starring in the production of Jayanna Combines movie .Jayanna is producing Rana film and A Harsha is directing the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X