Yash : ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಸಿದ್ಧ!?

ಸದ್ಯ ಎಲ್ಲೆಲ್ಲೂ ಕೆಜಿಎಫ್ 2 ಚಿತ್ರದ ಹವಾ ಜೋರಾಗಿದೆ. ಭಾರತದಾದ್ಯಂತ ಅಬ್ಬರಿಸುತ್ತಿದೆ ಕೆಜಿಎಫ್ 2. ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್‌ ದಾಖಲೆಗಳೇ ಪುಡಿ-ಪುಡಿ ಆಗಿ ಬಿಟ್ಟಿವೆ. ಕೋಟಿ, ಕೋಟಿ ಹಣ ಸಂಪಾದನೆ ಮಾಡುತ್ತಿರುವ ಕೆಜಿಎಫ್ ಚಿತ್ರ ಒಂದು ಇತಿಹಾಸವೇ ಆಗಿ ಬಿಟ್ಟಿದೆ.

ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ 'KGF 2'.

ಕೆಜಿಎಫ್ ಸಕ್ಸಸ್ ಖುಷಿಯಲ್ಲಿ ಈಗ ಮತ್ತೊಂದು ಸುದ್ದಿ ಸಂಚಲನ ಮೂಡಿಸಿದೆ. ನಟ ಯಶ್ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ. ಯಶ್ ಮುಂದೇನು ಮಾಡುತ್ತಾರೆ? ಅವರ ಗುರಿ ಏನು? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ರಾಜಕೀಯಕ್ಕೆ ಯಶ್ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮುಂದೆ ಓದಿ...

 'ಕೆಜಿಎಫ್' ಯಶ್‌ಗೆ ಏನೇನು ಅಲ್ಲ ಮಾಡುವುದು ಬಾಕಿ ಇದೆ!

'ಕೆಜಿಎಫ್' ಯಶ್‌ಗೆ ಏನೇನು ಅಲ್ಲ ಮಾಡುವುದು ಬಾಕಿ ಇದೆ!

ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ. ಈ ಮೂಲಕ ನಟ ಯಶ್ ಗ್ರಾಫ್ ಮತ್ತಷ್ಟು ಮೇಲೇರಿದೆ. ಸೌತ್ ಚಿತ್ರರಂಗದ ಜೊತೆಗೆ ಬಾಲಿವುಡ್‌ನಲ್ಲೂ ಕೂಡ ‌ಸಂಚಲನ ಮೂಡಿಸಿದ್ದಾರೆ ಯಶ್. ಹಾಗಾಗಿ ಯಶ್ ಮುಂದಿನ ನಡೆಯ ಮೇಲೆ ಹೆಚ್ಚಿನ ಕುತೂಹಲ ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಸದ್ಯದಲ್ಲೇ ಉತ್ತರ ಸಿಗಬಹುದು. ಆದರೆ ಈಗ ಮತ್ತೊಂದು ಹೊಸ ಚರ್ಚೆ ಶುರುವಾಗಿದೆ. ಸಿನಿಮಾ ಸಾಧನೆ ಯಶ್ ಗುರಿಯಲ್ಲ ಎನ್ನುವ ಗುಸು, ಗುಸು ಸ್ಯಾಂಡಲ್ ವುಡ್ ನಲ್ಲಿ ಹಬ್ಬಿದೆ.

 ರಾಜಕೀಯಕ್ಕೆ ಯಶ್ ಎಂಟ್ರಿ!?

ರಾಜಕೀಯಕ್ಕೆ ಯಶ್ ಎಂಟ್ರಿ!?

ಇನ್ನು ನಟ ಯಶ್ ರಾಜಕೀಯಕ್ಕೆ ಬರುವ ದೂರದ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ರಾಜಕೀಯದಲ್ಲಿ ದೊಡ್ಡದಾದ ಸಾಧನೆ ಮಾಡುವುದೇ ಯಶ್ ಮೂಲ ಉದ್ದೇಶ, ಅದಕ್ಕೆ ಸಿನಿಮಾ ಯಶ್‌ಗೆ ಒಂದು ಮೆಟ್ಟಿಲು ಮಾತ್ರ ಆಗಿದೆ. ಇತ್ತೀಚೆಗೆ ನಟ ಯಶ್ ಈ ಬಗ್ಗೆ ತಮ್ಮ ಆಪ್ತರೊಬ್ಬರ ಬಳಿ ಈ ಕುರಿತು ಕೇಳಿಕೊಂಡಿರುವುದನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬರೆದುಕೊಂಡಿದ್ದು ಹೀಗೆ. "ಇದು ಏನು ಅಲ್ಲ, ಗುರಿ ಬೇರೆನೆ ಇದೆ‌. ಮಾಡುವುದು ತುಂಬಾ ಇದೆ. ಅದಕ್ಕೆ ಸಿನಿಮಾ ಒಂದು ಮೆಟ್ಟಿಲು ಮಾತ್ರ". ಎಂದಿದ್ದಾರೆ.

 ಸ್ವಂತ ಪಕ್ಷ ಕಟ್ಟುತ್ತಾರ ನಟ ಯಶ್?

ಸ್ವಂತ ಪಕ್ಷ ಕಟ್ಟುತ್ತಾರ ನಟ ಯಶ್?

ನಟ ಯಶ್ ಬಗ್ಗೆ ಹೀಗೊಂದು ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹಬ್ಬುತ್ತಾ ಇರುವಾಗಲೇ, ಯಶ್ ರಾಜಕೀಯಕ್ಕೆ ಇಳಿಯುತ್ತಾರೆ, ಆದರೆ ಅವರು ತಮ್ಮ ಸ್ವಂತ ಪಕ್ಷವನ್ನು ಕಟ್ಟುವ ಯೋಜನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಯಶ್ ನಾಯಕ ನಟನಾಗಿ ಫೇಮ್ ಪಡೆದುಕೊಂಡರೂ, ಒಂದಷ್ಟು ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಯಶೋ ಮಾರ್ಗದ ಮೂಲಕ ಯಶ್ ರೈತರಿಗೆ ಒಂದಷ್ಟು ಸಹಾಯ ಮಾಡಿದ್ದಾಗಿದೆ. ಇನ್ನು ಮುಂದೆ ಸಾಗಲು ಯಶ್ ಏನೆಲ್ಲಾ ಮಾಡುತ್ತಾರೆ ಅಂತ ನೋಡಬೇಕಿದೆ.

 ಯಶ್ ರಾಜಕೀಯ ಎಂಟ್ರಿಗೆ ತಕ್ಕ ಸಮಯ ಇದಲ್ಲ!

ಯಶ್ ರಾಜಕೀಯ ಎಂಟ್ರಿಗೆ ತಕ್ಕ ಸಮಯ ಇದಲ್ಲ!

ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡ ನಟ ಉಪೇಂದ್ರ, ತನ್ನ ಹಲವು ವರ್ಷಗಳ ಸಿನಿಮಾ ಪಯಣದ ನಂತರ ರಾಜಕೀಯಕ್ಕೆ ಇಳಿದು ಪ್ರಜಾಕೀಯ ಕಟ್ಟಿದ್ದಾರೆ. ಈಗ ಯಶ್ ಸರದಿ. ಸದ್ಯ ನಟ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವುದು ಗಾಳಿ ಸುದ್ದಿಯಾಗಿ ಉಳಿದಿದೆ. ಈ ಬಗ್ಗೆ ಯಶ್ ಮಾತನಾಡಬೇಕು ಅಷ್ಟೆ. ಹಾಗೊಂದು ವೇಳೆ ಯಶ್ ರಾಜಕೀಯಕ್ಕೆ ಎಂಟ್ರಿ ಆಗುವುದಾದರೆ ಇದು ಅಷ್ಟು ಸೂಕ್ತ ಸಮಯ ಅಲ್ಲ ಎನಿಸುತ್ತದೆ. ಬಹುಶಃ ಯಶ್ ಕೂಡ ರಾಜಕೀಯಕ್ಕೆ ಬರಲು ಸಮಯ ತೆಗೆದುಕೊಳ್ಳಲಿದ್ದಾರೆ. ಅವರ ಸಿನಿಮಾ ಪಯಣ ಇನ್ನು ಬಹಳ ಮುಂದೆ ಸಾಗಬೇಕಿದೆ.

More from Filmibeat

English summary
Rocking Star Yash Is Ready To Enter Politics Know The Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X