»   » ಮಂಜು ಮಾಂಡವ್ಯ ಆಕ್ಷನ್ ಕಟ್ ನಲ್ಲಿ ರಾಕಿಂಗ್ ಸ್ಟಾರ್

ಮಂಜು ಮಾಂಡವ್ಯ ಆಕ್ಷನ್ ಕಟ್ ನಲ್ಲಿ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ಮಂಡ್ಯ ಶೈಲಿಯ ಸಂಭಾಷಣೆಗೆ ಹೆಸರಾದ ಸಂಭಾಷಣೆಕಾರ ಮಂಜು ಮಾಂಡವ್ಯ. ಈಗವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಅದರಲ್ಲೂ ವಿಶೇಷ ಎಂದರೆ ಅವರು ಆಕ್ಷನ್ ಕಟ್ ಹೇಳಲಿರುವುದು ರಾಕಿಂಗ್ ಸ್ಟಾರ್ ಯಶ್ ಗೆ ಎಂಬುದು.

ಈ ಚಿತ್ರವನ್ನು ವಿಜಯ್ ಕುಮರ್ ಕಿರಗಂದೂರು ಅವರು ತಮ್ಮ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರ ಯಶ್ ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಳಿಕ ಸೆಟ್ಟೇರಲಿದೆ. [ರಾಜಾಹುಲಿ ಚಿತ್ರ ವಿಮರ್ಶೆ]

Manju Mandavya

ಯಶ್ ಅಭಿನಯದ ಅದ್ದೂರಿ ಚಿತ್ರ 'ರಾಜಾಹುಲಿ'ಗೆ ಮಂಜು ಮಾಂಡವ್ಯ ಮಂಡ್ಯ ಶೈಲಿಯಲ್ಲಿ ಸಂಭಾಷಣೆ ಬರೆದಿದ್ದಾರೆ. 'ರಾಜಾಹುಲಿ' ಚಿತ್ರ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಚಿತ್ರ. ಖಾಲಿಯಾಗಿದ್ದ ಕೆ.ಮಂಜು ಅವರ ಜೇಬನ್ನು ಭರ್ತಿ ಮಾಡಿದ ಚಿತ್ರ. ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಮಂಜು ಮಾಂಡವ್ಯ ಅವರ ಸಂಭಾಷಣೆ ಒಂದಾಗಿದೆ.

ಈ ಹೊಸ ಚಿತ್ರಕ್ಕೆ ಮಂಜು ಅವರೇ ಕಥೆ, ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರದ ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ ವಿವರಗಳು ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)

English summary
Kannada dialouge writter Manju Mandavya all set to direct a movie for first time. The untitled movie starring Rocking Star Yash in lead. The film is being produced by Vijay Kumar Kiragandur under the Hombale Films Banner. 
Please Wait while comments are loading...