»   » ಯಶ್ ಮದುವೆ ಬಗ್ಗೆ ಅವರ ತಾಯಿ ಏನಂತಾರೆ?

ಯಶ್ ಮದುವೆ ಬಗ್ಗೆ ಅವರ ತಾಯಿ ಏನಂತಾರೆ?

By: ಜೀವನರಸಿಕ
Subscribe to Filmibeat Kannada

ಸದ್ಯ ಸ್ಯಾಂಡಲ್ ವುಡ್ ನ ಗೆಲ್ಲೋ ಕುದುರೆ ರಾಕಿಂಗ್ ಸ್ಟಾರ್ ಯಶ್. ಪ್ರೇಕ್ಷಕರನ್ನ ಸಲೀಸಾಗಿ ಕ್ಯಾಚ್ ಹಾಕಬಲ್ಲ ತಾಕತ್ತಿರೋ ನಟ ರಾಕಿಂಗ್ ಸ್ಟಾರ್ ಯಶ್ ಎಂದು ನಿಸ್ಸಂದೇಹವಾಗಿ ಹೇಳಬಹುದು. ಯಶ್ ಮದುವೆ ಬಗ್ಗೆ, ರಾಧಿಕಾ ಯಶ್ ಲವ್ ನಲ್ಲಿದ್ದಾರೆ ಅಂತ ಆಗಾಗ ಗಾಸಿಪ್ ಪ್ರಿಯರು ಬಾಯಿ ಚಪ್ಪರಿಸಿಕೊಳ್ತಿರ್ತಾರೆ.

ಆದ್ರೆ ನಿಮ್ಮ ಮಗನ ಮದ್ವೆ ಮಾಡ್ತೀರಾ? ಯಾವಾಗ ಮದುವೆ ಅಂತ ಅಣ್ತಮ್ಮ ಯಶ್ ಅಮ್ಮ ಶ್ರೀಮತಿ ಪುಷ್ಪಾ ಅರುಣ್ ಕುಮಾರ್ ಅವರನ್ನು ಕೇಳಿದ್ರೆ ಅವರು ಹೇಳೋದೇನು ಗೊತ್ತಾ? ಅವನಿಗೆ ಇಷ್ಟ ಆಗ್ಲಿಲ್ಲ ಅಂದ್ರೆ ಆಮೇಲೆ ನಾವೇ ನೋಡ್ಕೋಬೇಕು. ಅವನಿಗೆ ಮದ್ವೆ ಮಾಡಿ ಹೆಂಡ್ತೀನಾ ನಾವ್ ನೋಡ್ಕೊಳ್ಳೋ ಹಂಗಾದ್ರೆ? [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

Rocking Star Yash marrige, what his mother says?

ಬೇಡಪ್ಪಾ ಫಸ್ಟ್ ಅವ್ನು ಯಾರನ್ನ ಒಪ್ತಾನೋ ಒಪ್ಪಲಿ. ಆಮೇಲೆ ಮದುವೆ ಬಗ್ಗೆ ಯೋಚ್ನೆ ಮಾಡ್ತೀವಿ. ಇಷ್ಟ ಆಗ್ಲಿಲ್ಲ ಅಂದ್ರೆ ಅದೆಷ್ಟೇ ಕಾಸ್ಟ್ ಲೀ ಬಟ್ಟೇನೇ ಆದ್ರೂ ಕಸದ ತರಹ ಬಿಸಾಕೋನು ಅವನು, ಅವನಿಷ್ಟದಂತೆಯೇ ಆಗ್ಲಿ ಅಂತ ಗೂಗ್ಲಿ ಬಿಡ್ತಾರೆ.

ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಶ್ (29) ಮದುವೆ ಯಾವಾಗ ಎಂದು ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ. ಇಡೀ ಭಾರತೀಯ ಚಿತ್ರರಂಗದ ಮಟ್ಟಿಗೆ ಅವರ ಮದುವೆ ರಾಯಲ್ ಆಗಿಯೇ ಇರುತ್ತದೆ. ಆ ದಿನ ಯಾವಾಗ ಬರುತ್ತದೋ ಕಾದುನೋಡೋಣ.

English summary
Rocking Star Yash fans are eagerly waiting for his wedding bells. But the actor is not ready to marriage in the near future. What his mother Pushpa Arun Kumar says about Yash marriage?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada