'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?

ಸೈರಾ ನರಸಿಂಹ ರೆಡ್ಡಿ ಟಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್. ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಬಹು ಭಾಷೆಯ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ.

ವಿಶೇಷ ಅಂದ್ರೆ ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಕೂಡ ಬಹು ನಿರೀಕ್ಷೆಯ ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. ಈಗ ಚಿತ್ರದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ರಾಕಿ ಭಾಯ್ ಯಶ್ 'ಸೈರಾ' ಚಿತ್ರದಲ್ಲಿ ಭಾಗವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಸೈರಾ ಚಿತ್ರಕ್ಕೆ ಯಶ್ ಧ್ವನಿ

ಸೈರಾ ಚಿತ್ರಕ್ಕೆ ಯಶ್ ಧ್ವನಿ

ಯಶ್ ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಚಿತ್ರದ ಟೀಸರ್ ಗೆ ಯಶ್ ಧ್ವನಿ ನೀಡಿದ್ದಾರಂತೆ. ಸೈರಾ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ದೊಡ್ಡ ದೊಡ್ಡ ಕಲಾವಿದರ ಬಳಿ ಚಿತ್ರದ ಟೀಸರ್ ಗೆ ಧ್ವನಿ ನೀಡಿಸಿದ್ದಾರಂತೆ. ಕನ್ನಡದ ವರ್ಷನ್ ಗೆ ಯಶ್ ವಾಯ್ಸ್ ನೀಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

ಇದೇ ತಿಂಗಳು ಟೀಸರ್ ರಿಲೀಸ್

ಇದೇ ತಿಂಗಳು ಟೀಸರ್ ರಿಲೀಸ್

ಇಡೀ ದಕ್ಷಿಣ ಭಾರತೀಯ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿರುವ ಸೈರಾ ಚಿತ್ರದ ಟೀಸರ್ ಇದೆ ತಿಂಗಳು 20ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೆ ಚಿತ್ರದಿಂದ ಅದ್ದೂರಿ ಮೇಕಿಂಗ್ ಬಿಡುಗಡೆಯಾಗಿದ್ದು, ಈ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತೆಲುಗಿನಲ್ಲಿ ಪವನ್, ತಮಿಳಿನಲ್ಲಿ ರಜನಿಕಾಂತ್

ತೆಲುಗಿನಲ್ಲಿ ಪವನ್, ತಮಿಳಿನಲ್ಲಿ ರಜನಿಕಾಂತ್

ಸೈರಾ ನರಸಿಂಹ ರೆಡ್ಡಿ ಐದು ಭಾಷೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲೂ ಆಯಾಯ ಭಾಷೆಯ ಕಲಾವಿದರ ಬಳಿಯೆ ಚಿತ್ರಕ್ಕೆ ಧ್ವನಿ ನೀಡಿಸುತ್ತಿದ್ದಾರೆ ಚಿತ್ರತಂಡ. ಕನ್ನಡಕ್ಕೆ ಯಶ್ ಧ್ವನಿ ನೀಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ರೆ ತಮಿಳಿನಲ್ಲಿ ರಜನಿಕಾಂತ್ ಮತ್ತು ಮಲಯಾಳಂನಲ್ಲಿ ಮಮ್ಮುಟ್ಟಿ ಧ್ವನಿ ನೀಡಿದ್ದಾರಂತೆ. ತೆಲುಗಿನಲ್ಲಿ ಈಗಾಗಲೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಧ್ವನಿ ನೀಡಿದ್ದಾರಂತೆ.

ಚಿತ್ರದಲ್ಲಿದ್ದಾರೆ ದೊಡ್ಡ ದೊಡ್ಡ ಕಲಾವಿದರು

ಚಿತ್ರದಲ್ಲಿದ್ದಾರೆ ದೊಡ್ಡ ದೊಡ್ಡ ಕಲಾವಿದರು

ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಚಿತ್ರರಂಗದ ದೊಡ್ಡದೊಡ್ಡ ಕಲಾವಿದರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು ಸೇರಿದಂತೆ ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor rocking star Yash rumored to have voiced for Sye Raa Narasimha Reddy film kannada version
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X