»   » ರಾಕಿಂಗ್ ಸ್ಟಾರ್ ಯಶ್ ರವರ ಡೇರಿಂಗ್ ಸೆಲ್ಫಿ..!

ರಾಕಿಂಗ್ ಸ್ಟಾರ್ ಯಶ್ ರವರ ಡೇರಿಂಗ್ ಸೆಲ್ಫಿ..!

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ರಾಕಿಂಗ್ ಪರ್ಫಾಮೆನ್ಸ್ ನೀಡಿದ ಬಳಿಕ 'ಮಾಸ್ಟರ್ ಪೀಸ್' ಮತ್ತು 'ಕೆ.ಜಿ.ಎಫ್' ಸಿನಿಮಾಗಳಲ್ಲಿ ಯಶ್ ಬಿಜಿಯಾಗಿದ್ದಾರೆ.

ಕಳೆದ ವರ್ಷ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ಯಶ್, ಈ ವರ್ಷ ಇನ್ನೂ ಖಾತೆ ಓಪನ್ ಮಾಡಿಲ್ಲ. ಬೆಳ್ಳಿತೆರೆ ಮೇಲೆ ಯಶ್ ರನ್ನ ಅಭಿಮಾನಿಗಳು ಮಿಸ್ ಮಾಡಿಕೊಳ್ತಿದ್ದಾರೆ. [ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?]

Rocking Star Yash's Daring selfie goes viral

ಶೂಟಿಂಗ್ ಶೆಡ್ಯೂಲ್ ನಲ್ಲೇ ಬಿಜಿಯಾಗಿದ್ರೂ, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಯಶ್ ಸರ್ ಪ್ರೈಸ್ ನೀಡ್ತಾನೇ ಇರ್ತಾರೆ.

ಹೊಸ ಲುಕ್ಸ್ ನಿಂದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸದಾ ಸದ್ದು ಮಾಡುವ ಯಶ್, ಈ ಬಾರಿ ಅಪ್ ಡೇಟ್ ಮಾಡಿರುವ ಸೆಲ್ಫಿ ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]

ವಿದೇಶದಲ್ಲಿ, ಗಾಜಿನ ಮನೆಯ ತುತ್ತ ತುದಿಯಲ್ಲಿ ನಿಂತು ಯಶ್ ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿ ರೋಮಾಂಚನಕಾರಿಯಾಗಿದೆ. ಇದಕ್ಕೆ ಸಿಕ್ಕಿರುವ ಲೈಕ್ಸ್ ಎಷ್ಟು ಗೊತ್ತಾ? ಬರೋಬ್ಬರಿ 33 ಸಾವಿರಕ್ಕೂ ಅಧಿಕ.!

ಈ ಸೆಲ್ಫಿ ನೋಡಿ ಅಭಿಮಾನಿಗಳಂತೂ ಸೂಪರ್ರೋ..ಸೂಪರ್ ಅಂತಿದ್ದಾರೆ. ಮೇಲ್ನೋಟಕ್ಕೆ ಮೈನವಿರೇಳಿಸುವ ಸಾಹಸ ಮಾಡುವ ತಯಾರಿಯಲ್ಲಿ ತೊಡಗಿದ ಹಾಗೆ ಕಾಣುವ ಯಶ್, ಯಾವ ಚಿತ್ರ ಶೂಟಿಂಗ್ ನಲ್ಲಿ ಈ ಸೆಲ್ಫಿ ಕ್ಲಿಕ್ ಮಾಡಿದ್ದಾರೆ ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

English summary
Kannada Actor Yash has posted a daring selfie clicked in abroad on Facebook. This Photo has gone viral in Facebook with more than 33,000 likes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada