ದಾವಣಗೆರೆಯಲ್ಲಿ ನಟ ಯಶ್ ಅಭಿಮಾನಿಗಳ ಸಂಘ ಉದ್ಗಾಟನೆ
ರಾಕಿಂಗ್ ಸ್ಟಾರ್ ಯಶ್ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟ. ಕರ್ನಾಟಕದ ಸಾಕಷ್ಟು ಊರುಗಳಲ್ಲಿ ಈಗಾಗಲೇ ಯಶ್ ಅಭಿಮಾನಿಗಳ ಸಂಘಗಳು ಇವೆ. ಈಗ ದಾವಣಗೆರೆಯಲ್ಲಿಯೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಶುರುವಾಗುತ್ತಿದೆ.
'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ(ರಿ)' ಉದ್ಗಾಟನೆಯ ಕಾರ್ಯಕ್ರಮ ಇದೇ ತಿಂಗಳು ನಡೆಯಲಿದೆ. ಡಿಸೆಂಬರ್ 24ಕ್ಕೆ ಭಾನುವಾರ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ದಾವಣಗೆರೆಯ ಜಯದೇವ ವೃತ್ತದ ಬಳಿಯ ಇರುವ ಶಿವಯೋಗಿ ಮಂದಿರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೋಟಗಾರಿಕ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮದ ಉದ್ಗಾಟನೆ ಮಾಡಲಿದ್ದಾರೆ.

ಅಂದಹಾಗೆ, ಶಬರಿ ಮಂಜು ಎಂಬುವವರು 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ, ರಾಕೇಶ್ ಅಧ್ಯಕ್ಷ ಮತ್ತು ಸತೀಶ್ ಗೌರವಾಧ್ಯಕ್ಷ ಆಗಿದ್ದಾರೆ. ಡಿಸೆಂಬರ್ 24ರ ಸಂಜೆ 6 ಗಂಟೆಗೆ ಕಾರ್ಯಕ್ರಮ ಶುರು ಆಗಲಿದೆ.
English summary
Kannada actor Yash's 'Akhila karnataka Rocking Star Yash yuva abhimanigala sangha Davanagere' will be inaugurating on December 24th.


Click it and Unblock the Notifications