»   » ಟ್ರೆಂಡ್ ಸೆಟ್ ಮಾಡುತ್ತಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್'

ಟ್ರೆಂಡ್ ಸೆಟ್ ಮಾಡುತ್ತಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ 'ಕೆ.ಜಿ.ಎಫ್' ತೆರೆಗೆ ಬರೋದಕ್ಕೆ ಸಿದ್ದವಾಗುತ್ತಿದೆ. ಸುದ್ದಿ ಬಿಟ್ಟುಕೊಡದೆ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡ ಚಿತ್ರೀಕರಣ ಎಷ್ಟಾಗಿದೆ ಅನ್ನೋದರ ಬಗ್ಗೆಯೂ ಸುಳಿವು ಬಿಟ್ಟುಕೊಡ್ತಿಲ್ಲ. ಡಿಸೆಂಬರ್ ಗೆ ಬರಬೇಕಾದ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡ್ತಿದೆ.

'ಕೆ.ಜಿ.ಎಫ್' ಚಿತ್ರದ ಬಗ್ಗೆ ನೀವ್ ಸುದ್ದಿ ಕೊಟ್ಟಿಲ್ಲ ಅಂದ್ರೂ ಓಕೆ... ನಾವ್ ಮಾತ್ರ ನಮ್ಮ ಸ್ಟೈಲ್ ನಲ್ಲಿ ಸಿನಿಮಾವನ್ನ ಪ್ರಮೋಷನ್ ಮಾಡ್ತೀವಿ ಅಂತಿದ್ದಾರೆ ಅಭಿಮಾನಿಗಳು. ಸದ್ಯ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಟ್ರೆಂಡ್ ಸೆಟ್ ಮಾಡ್ತಿದೆ. ಅದ್ಹೇಗೆ ಅಂತೀರಾ.... ಮುಂದೆ ಓದಿ.

ನಂಬರ್ ಪ್ಲೇಟ್ ಮೇಲೆ 'ಕೆ.ಜಿ.ಎಫ್'

ಇಲ್ಲಿಯವರೆಗೂ 'ಕೆ.ಜಿ.ಎಫ್' ಸಿನಿಮಾತಂಡದಿಂದ ಎರಡು ಪೋಸ್ಟರ್ ಬಿಟ್ಟರೇ ಮತ್ತೇನೂ ರಿಲೀಸ್ ಆಗಿಲ್ಲ. ಅದನ್ನ ಇಷ್ಟಪಟ್ಟಿರುವ ಯಶ್ ಅಭಿಮಾನಿಗಳು ತಮ್ಮ ಕಾರ್ ಗಳ ಮೇಲೇ ಯಶ್ ಫಸ್ಟ್ ಲುಕ್ ಅನ್ನ ಹಾಕಿಸಿಕೊಂಡಿದ್ದಾರೆ. ಕಾರ್ ಇಲ್ಲದ ಅಭಿಮಾನಿಗಳು ತಮ್ಮ ಬೈಕ್ ನಂಬರ್ ಪ್ಲೇಟ್ ಮೇಲೆ 'ಕೆ.ಜಿ.ಎಫ್' ಪೋಸ್ಟರ್ ನಿಂದ ಡಿಸೈನ್ಸ್ ಮಾಡಿಸಿಕೊಂಡಿದ್ದಾರೆ.

ಮಕ್ಕಳು ಈಗ ರಾಕಿಂಗ್ ಸ್ಟಾರ್ ಫ್ಯಾನ್ಸ್

ಕಾರ್ ಮತ್ತು ಬೈಕ್ ಗಳಷ್ಟೇ ಅಲ್ಲದೆ ಹೇರ್ ಸ್ಟೈಲ್ ನಲ್ಲೂ 'ಕೆ.ಜಿ.ಎಫ್' ಟೈಟಲ್ ಹಾಕಿಸಿಕೊಳ್ಳುವುದಕ್ಕೆ ಅಭಿಮಾನಿಗಳು ಪ್ರಾರಂಭಿಸಿದ್ದಾರೆ. ಯುವಕರಷ್ಟೇ ಅಲ್ಲದೇ ಸಣ್ಣ ಸಣ್ಣ ಮಕ್ಕಳ ಹೇರ್ ಸ್ಟೈಲ್ ನಲ್ಲಿಯೂ 'ಕೆ.ಜಿ.ಎಫ್' ಟೈಟಲ್ ರಾರಾಜಿಸುತ್ತಿದೆ. ವಿಶೇಷ ಅಂದ್ರೆ ಅದೆಷ್ಟೋ ಕಡೆಯಲ್ಲಿ 'ಕೆ.ಜಿ.ಎಫ್' ಕಟ್ಟಿಂಗ್ ಅಂತಲೇ ಫೇಮಸ್ ಆಗೋಗಿದೆ.

ಮಹಿಳಾ ಅಭಿಮಾನಿಗಳಿಗೂ ಸಿನಿಮಾ ಕ್ರೇಜ್

ಹೊಸ ನೋಟು ಸಿಕ್ಕಿದ್ರೆ ಸಾಕಪ್ಪ ಅಂತ ಕೆಲವರು ಇದ್ದರೆ ಯುವತಿಯೊಬ್ಬಳು 200 ರೂಪಾಯಿ ನೋಟುಗಳನ್ನ ಪಡೆದುಕೊಂಡು 'ಕೆ.ಜಿ.ಎಫ್' ಸಿನಿಮಾ ಪ್ರಮೋಷನ್ ಮಾಡಿದ್ದಾರೆ. ಹದಿಮೂರು ಸಾವಿರ ಹಣವನ್ನ ಉಪಯೋಗಿಸಿ ಇನ್ನೂರು ರೂಪಾಯಿಯ ನೋಟಿನಲ್ಲಿ ಈ ಡಿಸೈನ್ ಮಾಡಿದ್ದಾರೆ.

ಸಿಂಗಲ್ ಫೋಟೋ ಆಯ್ತು ವೈರಲ್

'ಕೆ.ಜಿ.ಎಫ್' ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಗೌಡ ತಮ್ಮ instagram ನಲ್ಲಿ ಯಶ್ ಸಿನಿಮಾದಲ್ಲಿ ಬಳಸಿರೋ ಬೈಕ್ ಫೋಟೋವನ್ನ ಶೇರ್ ಮಾಡಿದ್ರು. ಅದೊಂದು ಫೋಟೋ ಸಖತ್ ವೈರಲ್ ಆಗಿದ್ದು ಅಭಿಮಾನಿಗಳು ರಾಕಿ ಬೈಕ್ ಅನ್ನ ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡಿದ್ದಾರೆ.

English summary
Rocking Star Yash's look in KGF Movie is trending in Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada