»   » ಕೊಚ್ಚಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿದ ರಾಕಿಂಗ್ ಸ್ಟಾರ್ ಯಶ್

ಕೊಚ್ಚಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿದ ರಾಕಿಂಗ್ ಸ್ಟಾರ್ ಯಶ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ..ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಯಶ್ ಗೆ ಅಭಿಮಾನಿ ಬಳಗ ದೊಡ್ಡದಿದೆ. ಆದ್ರೆ, ಕರ್ನಾಟಕದ ಆಚೆ..?? ಸ್ಯಾಂಡಲ್ ವುಡ್ ಗಡಿ ದಾಟಿದರೆ ಯಶ್ ಗೆ ಸಿಗುವ ಪ್ರತಿಕ್ರಿಯೆ ಏನು..? ಈ ಪ್ರಶ್ನೆ ಬಹುಶಃ ಯಶ್ ಗೆ ಕಾಡ್ತಿತ್ತೇನೋ...ಅದನ್ನ ತಿಳಿದುಕೊಳ್ಳುವುದಕ್ಕೆ ಒಂದು ಪ್ರಯೋಗ ಮಾಡಿದ್ದಾರೆ ಯಶ್.

ಮೊನ್ನೆಯಷ್ಟೇ ಕೆಲಸದ ಮೇಲೆ ಯಶ್ ಕೊಚ್ಚಿಗೆ ಹೋಗಿದ್ರಂತೆ. ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡೋಣ ಅಂತ ಅವರಿಗೆ ಅನಿಸಿಬಿಟ್ಟಿದೆ. ಅಲ್ಲೇ ಪಕ್ಕದಲ್ಲೇ ಇದ್ದ ಗ್ರೌಂಡ್ ಗೆ ತೆರಳಿ, ಆಟ ಆಡ್ತಿದ್ದ ಹುಡುಗರನ್ನ ಬ್ಯಾಟಿಂಗ್ ಚಾನ್ಸ್ ಕೇಳಿದ್ದಾರೆ. ಅವರು ಓಕೆ ಅಂದಿದ್ದಾರೆ.

Rocking Star Yash selfie with Kochi fans

ಕೊಚ್ಚಿ ಹುಡುಗರಿಗೆ ಯಶ್ ಹಿಂದೆ ಮುಂದೆ ಗೊತ್ತಿಲ್ಲದ ಕಾರಣ, ಸಾಮಾನ್ಯ ಹುಡುಗನಂತೆ ಟ್ರೀಟ್ ಮಾಡಿದ್ದಾರೆ. ಅಲ್ಲದೇ ಬ್ಯಾಟಿಂಗ್ ನಲ್ಲಿ ಕೊನೆಗೆ ಚಾನ್ಸ್ ಕೊಟ್ಟಿದ್ದಾರೆ.

'ಕೊಚ್ಚಿ ಹುಡುಗರಲ್ಲಿ ನಾನೂ ಒಬ್ಬ' ಅಂತ ಯಶ್ ಸನ್ನಿವೇಶವನ್ನ ಎಂಜಾಯ್ ಮಾಡುವಷ್ಟರಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಮುಗಿಯುವ ಹೊತ್ತಿಗೆ, ಗ್ರೌಂಡ್ ಗೆ ಬಂದ ಕನ್ನಡಿಗರೊಬ್ಬರು ಯಶ್ ರನ್ನ ಕಂಡುಹಿಡಿದು ಬಿಟ್ಟಿದ್ದಾರೆ. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

ಆಗ್ಲೇ ನೋಡಿ, ಗ್ರೌಂಡ್ ನಲ್ಲಿ 'ರಾಮಾಚಾರಿ' ಹವಾ ಶುರುವಾಗಿದ್ದು. ಯಶ್ ಹೀರೋ ಅಂತ ಗೊತ್ತಾಗ್ತಿದ್ದಂತೆ ಬ್ಯಾಟ್ ಬಿಸಾಕಿದ ಎಲ್ಲಾ ಕೊಚ್ಚಿ ಯುವಕರು ಸೆಲ್ಫಿ ತೆಗಿಸಿಕೊಳ್ಳುವುದಕ್ಕೆ ಮುಂದಾದರು.

Post by Yash.

ಈ ಬಗ್ಗೆ ಯಶ್, ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ. ಅಲ್ಲದೇ ಈ ಘಟನೆಯಿಂದ ಅವರ ವೃತ್ತಿ ಮೇಲಿನ ಭಕ್ತಿ, ಗೌರವ ಮತ್ತು ಜವಾಬ್ದಾರಿ ಡಬಲ್ ಆಗಿದೆ ಅಂತ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

English summary
Rocking Star Yash was in Kochi recently. Without revealing his identity, Yash played cricket with the local boys. But later when a Kannadiga in Kochi recognized Yash, the localities went gaga over the hero.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada