ಯಶ್ ಮನೆಯಲ್ಲಿ ಸಂಭ್ರಮ: ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನ

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಯಶ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಹೌದು, ಯಶ್ ಸಹೋದರಿ ನಂದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೆ ಮಗುವಿಗೆ ಜನ್ಮ ನೀಡಿರುವ ಬಗ್ಗೆ ನಂದಿನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

Recommended Video

KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

ಮುದ್ದಾದ ಮಗುವಿನ ಪಾದಗಳ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. "ಎರಡನೆ ಮಗುವಿಗೆ ತಾಯಿಯಾಗಿದ್ದೀನಿ. ಎರಡನೆ ಮಗು ಕೂಡ ಗಂಡು ಮಗು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮೊದಲ ಮಗುವಿನ ಹೆಸರು ಚಿರಾಗ್.

ಯಶ್ ಮತ್ತು ರಾಧಿಕಾ 2018 ಡಿಸೆಂಬರ್ ನಲ್ಲಿ ಮೊದಲ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಒಂದು ವರ್ಷದೊಳಗೆ ಅಂದರೆ 2019 ಅಕ್ಟೋಬರ್ ನಲ್ಲಿ ಯಶ್ ಗಂಡು ಮಗುವಿನ ಅಪ್ಪನಾಗಿದ್ದಾರೆ. ಮುದ್ದಿನ ಸಹೋದರಿ ನಂದಿನಿ ಎಂದರೆ ಯಶ್ ಗೆ ತುಬಾ ಪ್ರೀತಿ. ಪ್ರತೀವರ್ಷ ರಕ್ಷಾಬಂಧನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಾರೆ. ನಂದಿನಿ ಸಹೋದರ ಯಶ್ ಗೆ ರಾಕಿ ಕಟ್ಟಿ ಸಂಭ್ರಮಪಡುತ್ತಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Rocking Star Yash Sister Nandini Blessed With Baby Boy

ಅಂದ್ಹಾಗೆ ನಂದಿನಿ ಮದುವೆಯಾಗಿ 8 ವರ್ಷ ಕಳೆದಿದೆ. ಇತ್ತೀಚಿಗಷ್ಟೆ ಅಂದರೆ ಏಪ್ರಿಲ್ ತಿಂಗಳಲ್ಲಿ ನಂದಿನಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಯಶ್ ಮನೆಗೆ ಮತ್ತೊಂದು ಮಗು ಆಗಮಿಸಿದ್ದಕ್ಕೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Rocking Star Yash sister Nandini blessed with baby boy. She shares Photo in Instagram.
Read more about: yash baby ಯಶ್ ಮಗು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X