For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಗಣೇಶನ ಅವತಾರದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಪುತ್ರ

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಮಕ್ಕಳ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತವೆ. ಪುತ್ರಿ ಐರಾ ಮತ್ತು ಜೂ.ಯಶ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋವನ್ನು ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

  ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಮಾಡಿಸುವ ಫೋಟೋಶೂಟ್ ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಇತ್ತೀಚಿಗೆ ಕೃಷ್ಣ ಜನ್ಮಾಷ್ಟಮಿ ದಿನ ರಾಧೆ ಕೃಷ್ಣ ಆಗಿ ಮಿಂಚಿದ್ದ ಯಶ್ ಮುದ್ದಾದ ಮಕ್ಕಳು ಎಲ್ಲರ ಗಮನ ಸೆಳೆದಿದ್ದರು.

  <br>ಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನ
  ಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನ

  ಇದೀಗ ಗೌರಿ ಗಣೇಶ ಹಬ್ಬದ ಸಂಭ್ರಮ. ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಣೆ ಮಾಡದಿದ್ದರೂ, ಸರಳವಾಗಿ ಮನೆಯಲ್ಲೇ ಎಲ್ಲರೂ ಆಚರಣೆ ಮಾಡಿದ್ದಾರೆ. ಪುಟ್ಟ ಗಣೇಶನ ಪೂಜಿಸಿ ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ರಾಕಿಂಗ್ ಸ್ಟಾರ್ ಯಶ್ ಪುತ್ರ ಗಣೇಶನ ಅವತಾರದಲ್ಲಿ ಮಿಂಚಿದ್ದಾನೆ. ಯಶ್ ಮಗನ ಫೋಟೋವನ್ನು ಗಣೇಶನ ರೀತಿ ಎಡಿಟ್ ಮಾಡಲಾಗಿದೆ.

  ಪುಟ್ಟ ಗಣೇಶನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಕ್ಕದಲ್ಲಿ ಮೂಷಿಕನನ್ನು ಕೂರಿಸಿಕೊಂಡು, ಕೈಯಲ್ಲಿ ಮೋದಕ ಹಿಡಿದು ಕುಳಿತಿರುವ ಪುಟಾಣಿ ಗಣಪನಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋವನ್ನು ಸ್ವತಹ ಯಶ್ ಶೇರ್ ಮಾಡಿ "ಸೂಪರ್ ನನ್ನ ಪುಟ್ಟ ಗಣೇಶ" ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಇನ್ನೂ ನಟ ಯಶ್ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ನಡೆಯಬೇಕಿದ್ದು ಹಬ್ಬದ ಬಳಿಕ ಚಿತ್ರತಂಡ ಚಿತ್ರೀಕರಣಕ್ಕೆ ಹೊರಡಲಿದೆ. ಕೊರೊನಾ ಬಳಿಕ ಈಗಾಗಲೆ ಸಾಕಷ್ಟು ಸಿನಿಮಾತಂಡ ಚಿತ್ರೀಕರಣ ಪ್ರಾರಂಭಮಾಡಿದೆ. ಇದೀಗ ಕೆಜಿಎಫ್-2 ತಂಡ ಕೂಡ ಚಿತ್ರೀಕರಣಕ್ಕೆ ಹೊರಡುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ.

  English summary
  Rocking star Yash son's Ganesha Chaturthi Photos viral in social media. Yash's son Ganesha avatar for Ganesh Chaturthi special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X