'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್

By Bharath Kumar

Recommended Video

Nagarahaavu 2018 : ನಾಗರಹಾವು ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು...? | Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಡಾ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದರು. ಇದೀಗ, ಮತ್ತೆ ಅದೇ ವಿಷ್ಣುವರ್ಧನ್ ಗಾಗಿ ಯಶ್ ಮತ್ತೊಮ್ಮೆ ಅಭಿಮಾನಿಯಾಗಿದ್ದಾರೆ.

ಹೌದು, ಸಾಹಸ ಸಿಂಹ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ನಾಗರಹಾವು' ಇದೇ ವಾರ (ಜುಲೈ 20) ರಂದು ಹೊಸ ತಂತ್ರಜ್ಞಾನದಲ್ಲಿ, ಸಿನಿಮಾಸ್ಕೋಪ್ ಅವತಾರದಲ್ಲಿ ರಿ-ರಿಲೀಸ್ ಆಗ್ತಿದೆ. ಈ ಸಿನಿಮಾವನ್ನ ನೋಡಲು ರಾಕಿಂಗ್ ಸ್ಟಾರ್ ಮತ್ತೆ ಫ್ಯಾನ್ ಆಗಿದ್ದಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ.

'ನಾಗರಹಾವು' ಚಿತ್ರದ ಬಗ್ಗೆ ಹಾಗೂ ವಿಷ್ಣುದಾದಾ ಬಗ್ಗೆ ಮಾತನಾಡಿರುವ ಯಶ್ ಆ ರಾಮಾಚಾರಿಯ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ. ಪುಟ್ಣಣ್ಣ ಅವರ ನಾಗರಹಾವಿನ ಬಗ್ಗೆ ಹೊಸ ರಾಮಾಚಾರಿ ಏನಂದ್ರು ಎಂಬುದನ್ನ ಮುಂದೆ ಓದಿ....

ನನ್ನಲ್ಲಿರುವ ಅಭಿಮಾನಿ ಮತ್ತೆ ಬರ್ತಾನೆ

ನನ್ನಲ್ಲಿರುವ ಅಭಿಮಾನಿ ಮತ್ತೆ ಬರ್ತಾನೆ

''ನಾಗರಹಾವು ಸಿನಿಮಾ ಮತ್ತೆ ಬರ್ತಿದೆ ಅಂದ್ರೆ ನಾನು ಮತ್ತೆ ಫ್ಯಾನ್ ಆಗ್ತೀನಿ. ನನ್ನಲ್ಲಿರುವ ಅಭಿಮಾನಿ ಮತ್ತೆ ಬರ್ತಾನೆ. ಚಿಕ್ಕ ವಯಸ್ಸಿನಿಂದಲೂ ಈ ಸಿನಿಮಾ ನೋಡಿದ್ದೀನಿ. ಈಗಲೂ ಅಷ್ಟು ಬೋಲ್ಡ್ ಆಗಿ ಯಾರೂ ಆಕ್ಟ್ ಮಾಡೋಕೆ ಆಗಲ್ಲ.''

ಅಭಿಮಾನಿಗಳು ಹಬ್ಬ ಮಾಡ್ಬೇಕು

ಅಭಿಮಾನಿಗಳು ಹಬ್ಬ ಮಾಡ್ಬೇಕು

''ಈ ಸಿನಿಮಾ ಬರ್ತಿರೋದು ತುಂಬಾ ಖುಷಿ. ಇಂದಿನ ಅನೇಕ ವಿಷ್ಯಗಳು ಆ ಚಿತ್ರದಲ್ಲಿದೆ. ವಿಷ್ಣು ಸರ್ ಮತ್ತೆ ತೆರೆಮೇಲೆ ಬರ್ತಿರೋದು ಮತ್ತೆ ನಮಗೆ ಹಬ್ಬ. ಅದನ್ನ ಆಚರಿಸಬೇಕು ಅಷ್ಟೇ. ಬರಿ ವಿಷ್ಣು ಸರ್ ಫ್ಯಾನ್ಸ್ ಮಾತ್ರವಲ್ಲ, ಇಡೀ ಕರ್ನಾಟಕದ ಜನ ಇದನ್ನ ಹಬ್ಬ ಮಾಡ್ಬೇಕು''.

'ರಾಮಾಚಾರಿ' ಕಥೆ ಹೇಳಿದಾಗ...

'ರಾಮಾಚಾರಿ' ಕಥೆ ಹೇಳಿದಾಗ...

''ನಾಗರಹಾವು ಚಿತ್ರದ ರಾಮಾಚಾರಿ ಪಾತ್ರವನ್ನಿಟ್ಟು ಕಥೆ ಮಾಡಿರುವ ಪಾತ್ರ ಅಂದಾಗ, ಫಸ್ಟ್ ಹಾವಿನ ದ್ವೇಷ ಹಾಡು ತಲೆಗೆ ಬಂತು, ನನಗೆ ಆ ರಾಮಾಚಾರಿ ತುಂಬಾ ಕಾಡಿರುವ ಪಾತ್ರ. ಆವತ್ತು ಮಾಡಿರುವ ಪಾತ್ರ ಇವತ್ತು ಎಲ್ಲರಿಗೂ ಸಂಬಂಧ ಕಲ್ಪಿಸುತ್ತೆ, ಇನ್ನು 20 ವರ್ಷ ಬಿಟ್ರು ರಿಲೇಟ್ ಆಗುತ್ತೆ. ಯಾಕಂದ್ರೆ ಅದು ಅಷ್ಟು ತೂಕವಿರುವ ಕ್ಯಾರೆಕ್ಟರ್'' - ಯಶ್

ತುಂಬಾ ಎಂಜಾಯ್ ಮಾಡಿದ್ದೀನಿ

ತುಂಬಾ ಎಂಜಾಯ್ ಮಾಡಿದ್ದೀನಿ

''ನಾನೊಬ್ಬ ಪ್ರೇಕ್ಷಕನಾಗಿ ವಿಷ್ಣು ಸರ್ ಅವರ ಸಿನಿಮಾ ನೋಡಿ ಎಂಜಾಯ್ ಮಾಡಿದ್ದೀವಿ. ಅದು ಆ ಸಿನಿಮಾಗೆ ಇರೋ ಪವರ್. ಆ ಚಿತ್ರ ಅಂಶ ನಮ್ಮ ಚಿತ್ರದಲ್ಲಿದೆ ಅಂದಾಗ ಬಹಳ ಖುಷಿ ಆಯ್ತು. ಆಗೊಂದು ನಿರ್ಧಾರ ಮಾಡಿದ್ವಿ. ಅಲ್ಲಿರೋದನ್ನ ಎಲ್ಲೋ ಬಳಕೆ ಮಾಡಿಕೊಂಡ್ವಿ ಅಂತ ಬರಬಾರದು, ವಿಷ್ಣು ಸರ್ ಗೆ ಆ ಚಿತ್ರಕ್ಕೆ ನಾವು ಕೊಡೋ ಗೌರವ ಸಿಗಬೇಕು ಅಂತ'' - ಯಶ್

ನಮ್ಮ ಚಿತ್ರದಲ್ಲಿ ಟ್ಯಾಟೋ ಹಾಕಿದ್ದು ಯಾಕೆ.?

ನಮ್ಮ ಚಿತ್ರದಲ್ಲಿ ಟ್ಯಾಟೋ ಹಾಕಿದ್ದು ಯಾಕೆ.?

''ಪ್ರತಿಯೊಬ್ಬ ಕಲಾವಿದನೂ ಹೀರೋ ಆಗೋ ಮುಂಚೆ ಇನ್ನೊಬ್ಬ ಹೀರೋಗೆ ಫ್ಯಾನ್. ವಿಷ್ಣು ಸರ್ ಗೆ ನನ್ನ ಎದೆಯಲ್ಲಿ ಸ್ಥಾನ. ನಾನೊಬ್ಬ ಅಭಿಮಾನಿ ಅಂತ ಸಂಭ್ರಮಿಸೋಕೆ ಅದು ಬೇಕಿತ್ತು.''

ನಮಗೆ ಸಿಕ್ಕಿರುವ ಗಿಫ್ಟ್

ನಮಗೆ ಸಿಕ್ಕಿರುವ ಗಿಫ್ಟ್

''ನಾನು ರಾಧಿಕಾ ಈಗಲೂ ಎಲ್ಲೇ ಹೋದ್ರು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಅಂತಾಲೆ ಕರೆಯುತ್ತಾರೆ. ಅದು ಹಾಗೆ ಉಳಿದುಕೊಂಡಿದೆ. ಅದು ಈ ಚಿತ್ರದಿಂದ. ತುಂಬಾ ಖುಷಿ ಇದೆ''.

More from Filmibeat

English summary
Kannada actor Rocking star Yash spoke about dr vishnuvardhan's first movie 'nagarahavu'. the movie re releasing on july 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X