KGF 2 Advance Ticket Booking :1 ತಿಂಗಳು ಮೊದಲೇ ಶುರುವಾಯ್ತು KGF 2 ಟಿಕೆಟ್ ಬುಕ್ಕಿಂಗ್!
ಸದ್ಯ ಸಾಲು ಸಾಲು ಬಿಗ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಕನ್ನಡದ ನಿರೀಕ್ಷಿತ ಚಿತ್ರಗಳು ಒಂದಾದ ಬಳಿಕ ಒಂದು ತೆರೆಗೆ ಬರುತ್ತಿವೆ. ಮಾರ್ಚ್‌ನಲ್ಲಿ 'ಜೇಮ್ಸ್' ಅಬ್ಬರ ಇದ್ದರೆ. ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಚಿತ್ರದ ಬಿರುಗಾಳಿ ಏಳಲಿದೆ. 'ಕೆಜಿಎಫ್ 2' ಚಿತ್ರದ ಮೇಲೆ ಅಷ್ಟೇ ನಿರೀಕ್ಷೆಗಳು ಮನೆ ಮಾಡಿವೆ.
Recommended Video

'ಕೆಜಿಎಫ್' ಮೊದಲ ಭಾಗದ ಯಶಸ್ಸು, ಭಾಗ ಎರಡರ ಮೇಲೆ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ರಾಕಿ ಭಾಯ್ ಅವರತಾರವನ್ನು ನೋಡಲು ಜನ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಚಿತ್ರದ ಟೀಸರ್ ಹುಟ್ಟು ಹಾಕಿರುವ ಹೈಪ್ ಸಿನಿಮಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸೂಚನೆ ಕೊಟ್ಟಿದೆ.
ಸಿನಿಮಾದ ಮೇಲೆ ಜನರಿಗೆ ಎಷ್ಟರ ಮಟ್ಟಿಗೆ ಕ್ರೇಜ್ ಇದೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಆದರೆ ಆ ಕ್ರೇಜ್ ಮತ್ತೊಂದು ಹಂತ ಮೇಲೆ ಏರಿದೆ. ಸಿನಿಮಾ ನೋಡಲು ಈ ಹಿಂದೆಯೇ ಸಜ್ಜಾಗಿದ್ದ ಮಂದಿ, ಈಗ ಒಂದು ತಿಂಗಳು ಮುಂಚಿತವಾಗಿ ಸಿನಿಮಾ ಟಿಕೆಟ್ ಪಡೆದುಕೊಳ್ಳಲು ಜನ ಮುಂದಾಗಿದ್ದಾರೆ.

ತಿಂಗಳಿಗೂ ಮೊದಲೇ 'ಕೆಜಿಎಫ್ 2' ಟಿಕೆಟ್‌ಗೆ ಬೇಡಿಕೆ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಅಗಲಿದೆ. ಈಗಾಗಲೇ ಹಲವು ಬಾರಿ ಚಿತ್ರದ ರಿಲೀಸ್ ಮುಂದೂಡಿದ ಚಿತ್ರತಂಡ ಈಗ ಕೊನೆಯದಾಗಿ ಏಪ್ರಿಲ್ 14ಕ್ಕೆ ತೆರೆಗೆ ಬರ್ತಿದೆ. ಸಿನಿಮಾ ಮೊದಲಿನಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆದರೆ ಒಂದು ತಿಂಗಳಿಗೂ ಮೊದಲೇ ಸಿನಿಮಾ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, 'ಕೆಜಿಎಫ್ 2' ಟಿಕೆಟ್ ಬುಕ್ಕಿಂಗ್ ಅವಕಾಶ ಎಲ್ಲಿದೆ? ನೀವೂ ಕೂಡ ಕಿಟೆಕ್ ಬುಕ್ಕಿಂಗ್ ಮಾಡಬಹುದಾ? ಎನ್ನುವುದನ್ನು ತಿಳಿಯಲು ಮುಂದೆ ಓದಿ...
ಕೇರಳದಲ್ಲಿ ಟಿಕೆಟ್ ಬುಕ್ಕಿಂಗ್‌ಗೆ ಹೆಚ್ಚಿನ ಬೇಡಿಕೆ!
'ಕೆಜಿಎಫ್ 2' ಚಿತ್ರದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಆದರೆ ಅದು ಕೇರಳದಲ್ಲಿ ಮಾತ್ರ. ಅದು ಕೂಡ ಅಭಿಮಾನಿಗಳಿಗಾಗಿ ಮಾತ್ರ. ಅಂದರೆ ಫ್ಯಾನ್ ಶೋಗಳಿಗಾಗಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಕೇರಳದ ಹಲವು ನಗರಗಳಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಕೇರಳದ ಕ್ಯಾಲಿಕಟ್, ತಿರುವನಂತಪುರಂ, ಕೊದುನ್ಗಲ್ಲುರ್, ಕೊಟ್ಟಾಯಂನಲ್ಲಿ ಸಿನಿಮಾ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಅಲ್ಲಿನ ಅಭಿಮಾನಿ ಸಂಘಗಳು ಈ ಕಾರ್ಯಕ್ಕೆ ಮುಂದಾಗಿವೆ.
KRG ಕನೆಟ್ಸ್ ಟ್ವೀಟ್‌ನಲ್ಲೂ ಕಂಡ ಪೋಸ್ಟರ್‌ಗಳು!
ಇನ್ನು ಟಿಕೆಟ್ ಬುಕ್ಕಿಂಗ್ ಬಗ್ಗೆ ಸಿನಿಮಾ ತಂಡವೇ ಹಂಚಿಕೊಂಡಿದೆ. ಕೆಆರ್‌ಜಿ ಸಂಸ್ಥೆ ಟ್ವೀಟ್ ಮಾಡಿ, ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಟಿಕೆಟ್ ಬುಕ್ಕಿಂಗ್ ಬಗ್ಗೆ ಅಭಿಮಾನಿಗಳು ಹರಿ ಬಿಟ್ಟಿರುವ ಹಲವು ಪೋಸ್ಟರ್‌ಗಳನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲಾಗಿದೆ. ಸದ್ಯದಲ್ಲೇ ಇದು ಬೇರೆ ಪ್ರದೇಶಗಳಿಗೂ ಹಬ್ಬುವ ಸೂಚನೆ ಕೊಟ್ಟಿದೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಅದಷ್ಟು ಬೇಗ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ.

ಮಾರ್ಚ್ 27ಕ್ಕೆ 'ಕೆಜಿಎಫ್ 2' ಟ್ರೈಲರ್!
ಸಿನಿಮಾ ರಿಲೀಸ್‌ಗೂ ಮುನ್ನ ಮಾರ್ಚ್ 27ಕ್ಕೆ 'ಕೆಜಿಎಫ್ 2' ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸಿನಿಮಾ ತಂಡ ಈಗಾಗಲೇ ಪ್ರಕಟ ಮಾಡಿದೆ. ಟ್ರೈಲರ್ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಹಾಗಾಗಿ ಸಿನಿಮಾದ ಟ್ರೈಲರ್ ಮೇಲು ಕೂಡ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿದೆ. ಸಿನಿಮಾಗೂ ಮೊದಲು ಟ್ರೇಲರ್ ಅಬ್ಬರ ಹೇಗೆ ಇರಲಿದೆ ಎನ್ನುವುದು ಕುತೂಹಲ ಮೂಡಿದೆ.


Click it and Unblock the Notifications