KGF 2 Records: ರಿಲೀಸ್‌ಗೂ ಮುನ್ನ 'KGF 2' ಮಾಡಿದ ಭರ್ಜರಿ ದಾಖಲೆಗಳಿವು!

ಕೆಜಿಎಫ್, ಕೆಜಿಎಫ್, ಕೆಜಿಎಫ್ ಎಲ್ಲೆಲ್ಲೂ ಈಗ ಕೆಜಿಎಫ್ ಮೇನಿಯಾ. 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ಚಿತ್ರದ ಮೇಲಿನ ಕ್ರೇಜ್ ದಿನೇ, ದಿನೇ ಹೆಚ್ಚಾಗುತ್ತಲೇ ಇದೆ.‌ ಕೆಜಿಎಫ್ ಅಂದರೆ ಸಾಕು ಸಾಲು, ಸಾಲು ದಾಖಲೆಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಈಗ 'ಕೆಜಿಎಫ್ 2' ಕೂಡ ಅಂತದ್ದೇ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯುತ್ತಿದೆ.

'ಕೆಜಿಎಫ್ 2' ರಿಲೀಸ್ ಬಳಿಕ ಅದೆಷ್ಟು ದಾಖಲೆ ಮಾಡುತ್ತೋ ಗೊತ್ತಿಲ್ಲ. ಆದರೆ ರಿಲೀಸ್ ಗೂ ಮುನ್ನವೇ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ. ಒಂದಾದ ಬಳಿಕ ಒಂದರಂತೆ ದಾಖಲೆ ಮಾಡುವ ಮೂಲಕ ಸುದ್ದಿ ಆಗುತ್ತಿದೆ‌. 'ಕೆಜಿಎಫ್ 2' ಯಶ್ ಸಿನಿ ಕರಿಯರ್‌ನಲ್ಲೇ ಅತ್ಯಂತ ವಿಶೇಷವಾಗಿ ನಿಲ್ಲುವುದು ಪಕ್ಕಾ.

'ಕೆಜಿಎಫ್ 2' ನೋಡ ನೋಡುತ್ತಿದ್ದ ಹಾಗೆ ನಾನಾ‌ ವಿಚಾರಗಳಲ್ಲಿ ದಾಖಲೆ ಮಾಡಿದೆ. ಚಿತ್ರ ಮಂದಿರಗಳ ಸಂಖ್ಯೆ, ಪ್ರಿ- ರಿಲೀಸ್ ಬ್ಯುಸಿನೆಸ್‌, ರಾಕಿ ವರ್ಸ್ ಪ್ರಪಂಚ, ಅಭಿಮಾನಿಗಳಿಗೆ ಚಾಲೆಂಜ್, ಕಟೌಟ್ ಹೀಗೆ ಹತ್ತು ಹಲವು ವಿಚಾರಗಳಲ್ಲಿ 'ಕೆಜಿಎಫ್ 2' ದೊಡ್ಡ ಮಟ್ಟದ ದಾಖಲೆ ಬರೆಯುತ್ತಿದೆ. ಈ ಚಿತ್ರದ ಪ್ರಿ ರಿಲೀಸ್ ದಾಖಲೆಗಳ ಬಗ್ಗೆ ಮುಂದೆ ಓದಿ...

6 ಸಾವಿರ ಚಿತ್ರಮಂದಿರಗಳಲ್ಲಿ 'ಕೆಜಿಎಫ್ ‌2' ಅಬ್ಬರ!

6 ಸಾವಿರ ಚಿತ್ರಮಂದಿರಗಳಲ್ಲಿ 'ಕೆಜಿಎಫ್ ‌2' ಅಬ್ಬರ!

ಇನ್ನು ವಿಶ್ವದಾದ್ಯಂತ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಹೊರ ದೇಶಗಳಲ್ಲೂ ಕೆಜಿಎಫ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ವಿಶ್ವದಾದ್ಯಂತ ಈ ಚಿತ್ರ ಒಟ್ಟು 6 ಸಾವಿರ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಾ ಇದೆ‌. ವಿದೇಶಗಳಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರ 'ಕೆಜಿಎಫ್ 2' ಎನ್ನಲಾಗಿದೆ.

ಟಿಕೆಟ್ ಬುಕ್ಕಿಂಗ್‌ನಲ್ಲೂ 'KGF 2' ರೆಕಾರ್ಡ್!

ಟಿಕೆಟ್ ಬುಕ್ಕಿಂಗ್‌ನಲ್ಲೂ 'KGF 2' ರೆಕಾರ್ಡ್!

'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಮಾಡಿದೆ. ಕೇವಲ 12 ಗಂಟೆಯಲ್ಲಿ ಈ ಸಿನಿಮಾದ ಟಿಕೆಟ್‌ಗಳು ಬಿಕರಿಯಾಗಿವೆ. ಕನ್ನಡದ ಯಾವುದೇ ಸಿನಿಮಾ ಬಿಡುಗಡೆಗೆ ಇನ್ನೂ 11 ದಿನಗಳ ಇರುವಾಗಲೇ ಇಂತಹದ್ದೊಂದು ಸಾಧನೆ ಮಾಡಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಪಂಡಿತರು. ಕೇವಲ 12 ಗಂಟೆಯಲ್ಲಿ ವಿದೇಶದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ದಾಖಲೆ ಎಂದೇ ಹೇಳಲಾಗುತ್ತಿದೆ.

'ಕೆಜಿಎಫ್ 2' ವರ್ಸ್ ಮೂಲಕವೂ ದಾಖಲೆ!

'ಕೆಜಿಎಫ್ 2' ವರ್ಸ್ ಮೂಲಕವೂ ದಾಖಲೆ!

'ಕೆಜಿಎಫ್ 2' ವರ್ಸ್ ಎನ್ನುವುದು ಕನ್ನಡದ ಮಟ್ಟಿಗೆ ಹೊಸ ಪರಿಚಯ. ಇದೇ ಮೊದಲ ಬಾರಿಗೆ ಚಿತ್ರವೊಂದು ಈ ರೀತಿಯ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದು ಮೊದಲು ಎನ್ನುವುದೇ ಒಂದು ದಾಖಲೆ.'ಕೆಜಿಎಫ್ ವರ್ಸ್' ಅನ್ನೋದು ಆರ್ಟಿಫಿಷಿಯಲ್ ಆಗಿ ಸೃಷ್ಟಿ ಮಾಡಿದ ರಾಕಿ ಭಾಯ್ ಲೋಕ. ಇದಕ್ಕೆಂದೇ ಸೃಷ್ಟಿ ಮಾಡಿದ ಲೋಕದೊಳಗೆ ಒಂದು ಡಿವೈಸ್ ಮೂಲಕ ತಲುಪಬಹುದು. ಆ ಡಿವೈಸ್ ಕಣ್ಣಿಗೆ ಹಾಕಿಕೊಂಡರೆ, ಕೂತಲ್ಲಿಂದಲೇ ರಾಕಿ ಭಾಯಿ ಪ್ರಪಂಚದೊಳಗೆ ಪ್ರವೇಶ ಮಾಡಬಹುದು.

'Kgf 2' ಪ್ರಿ ರಿಲೀಸ್ ಬ್ಯುಸಿನೆಸ್ 500 ಕೋಟಿ!

'Kgf 2' ಪ್ರಿ ರಿಲೀಸ್ ಬ್ಯುಸಿನೆಸ್ 500 ಕೋಟಿ!

'KGF-2' ಸಿನಿಮಾ ಕರ್ನಾಟಕ ರಾಜ್ಯದಲ್ಲಿ 180 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಿ-ರಿಲೀಸ್ ವ್ಯವಹಾರವನ್ನು ಮಾಡಿದೆ ಅಂತ ಹೇಳಲಾಗುತ್ತಿದೆ. ಇನ್ನು ಚಿತ್ರದ ಒಟ್ಟು ಪ್ರಿ- ರಿಲೀಸ್ ಬ್ಯುಸಿನೆಸ್ 500 ಕೋಟಿ ದಾಟಿದೆ ಅಂತ ಹೇಳಲಾಗುತ್ತದೆ. ಟ್ರೇಡ್ ಮೂಲಗಳ ಪ್ರಕಾರ 'ಕೆಜಿಎಫ್- 2' ಚಿತ್ರ ಬಿಡುಗಡೆಗೂ ಮುನ್ನವೇ RRR ಚಿತ್ರದ 470 ಕೋಟಿಯ ಪ್ರಿ- ರಿಲೀಸ್ ಬ್ಯುಸಿನೆಸ್ ಅನ್ನು ಮುರಿದಿದೆ. 500 ಕೋಟಿ ರೂ.ಗಳ ಪ್ರಿ-ರಿಲೀಸ್ ಬಿಸಿನೆಸ್ ಮಾಡಿ ದಾಖಲೆ ನಿರ್ಮಿಸಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡುವುದು ಮಾತ್ರ ಬಾಕಿ ಇದೆ.

More from Filmibeat

English summary
Rocking Star Yash Starrer KGF 2 Film Pre Release Record List Is Here, Know About Kgf 2 Ticket Booking And More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X