ಮಗಳಿಗೆ ಅ,ಆ,ಇ,ಈ ಕಲಿಸಿದ ರಾಕಿಂಗ್ ಸ್ಟಾರ್ ಯಶ್: ವಿಡಿಯೋ ವೈರಲ್!
ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಂತೆಯೇ ಅವರ ಮಕ್ಕಳು ಕೂಡ ಫೇಮಸ್. ಐರಾ ಮತ್ತು ಯಥರ್ವ್ ಇಬ್ಬರು ಕೂಡ ಕರುನಾಡ ಜನರ ಮುದ್ದಿನ ಮಕ್ಕಳು. ತಮ್ಮ ಮಕ್ಕಳು ಫೋಟೊ ಮತ್ತು ವಿಡಿಯೋಗಳನ್ನು ಯಶ್ ಹಾಗು ರಾಧಿಕ ಪಂಡಿತ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.
Recommended Video
ಐರಾ ಮತ್ತು ಯಥರ್ವ್ ಇಬ್ಬರ ಮುದ್ದಾದ ಫೋಟೊ ಮತ್ತು ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಮಕ್ಕಳ ಹೊಸ ವಿಡಿಯೋಗಳು ರಿವೀಲ್ ಆಗುತ್ತಲೇ, ಸಿಕ್ಕಪಟ್ಟೆ ವೈರಲ್ ಆಗಿ ಬಿಡುತ್ತವೆ. ಅಂತೆಯೇ ಈಗ ಯಶ್ ಮತ್ತು ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಈ ವಿಡಿಯೋ ವಿಶೇಷತೆ ಇಂದ ಕೂಡಿದೆ. ಯಾಕೆಂದರೆ ಯಶ್ ಈ ವಿಡಿಯೋದಲ್ಲಿ ತಮ್ಮ ಮಗಳಿಗೆ ಕನ್ನಡ ಪಾಠ ಮಾಡಿದ್ದಾರೆ. ಐರಾ ಕೂಡ ಮುದ್ದಾಗಿ ಕನ್ನಡ ಅಕ್ಷರಗಳನ್ನು ಹೇಳಿದ್ದಾಳೆ.
ಮಗಳಿಗೆ ಕನ್ನಡ ಪಾಠ ಮಾಡಿದ ರಾಕಿಂಗ್ ಸ್ಟಾರ್ ಯಶ್!
ಯಶ್ ಮಗಳು ಐರಾ ಜೊತೆಗಿನ ವಿಡಿಯೋ ಒಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ರಾಧಿಕಾ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಅವರು ತಮ್ಮ ಮಗಳು ಐರಾಗೆ ಅ,ಆ,ಇ,ಈ ಹೇಳಿ ಕೊಡುತ್ತಿದ್ದಾರೆ. ಐರಾ ಕೂಡ ಈಗಾಗಲೇ ಕೊಂಚ ಕೊಂಚ ಕಲಿತಿದ್ದು, ಅಪ್ಪನ ಜೊತೆಗೆ ಅ,ಆ,ಇ,ಈ ಯನ್ನು ಹೇಳಿದ್ದಾಳೆ.
ರಾಧಿಕಾ ಕೊಂಕಣಿ ಕಲಿಸಿದ್ದಕ್ಕೇ ಗರಂ ಆಗಿದ್ದ ನೆಟ್ಟಿಗರು!
ಈ ಹಿಂದೆ ರಾಧಿಕಾ ಅವರು ಮಗಳು ಐರಾಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಐರಾ ಅಪ್ಪಾ ಮತ್ತು ಅಮ್ಮನ್ನು ಗುರುತಿಸಿದ್ದಳು. ವಿಡಿಯೋದಲ್ಲಿ ರಾಧಿಕಾ ಅವರು ಅಪ್ಪಾ ಎಲ್ಲಿ ಹೇಳು, ಅಮ್ಮ ಎಲ್ಲಿ ಹೇಳು ಎಂದು ಮಗಳನ್ನು ಕೊಂಕಣಿಯಲ್ಲಿ ಕೇಳಿದ್ದರು. ಆಗ ಸಾಕಷ್ಟು ಜನ ಇದನ್ನು ವಿರೋಧಿಸಿದ್ದರು. ಮಗುವಿಗೆ ಮೊದಲು ಕನ್ನಡ ಕಲಿಸಿ ಎಂದು ಕಮೆಂಟ್ ಮಾಡಿದ್ದರು. ಆದರೆ ಈಗ ಐರಾ ಸರಾಗವಾಗಿ ಕನ್ನಡ ಮಾತನಾಡುವುದನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
ಮ್ಯೂಜಿಕ್ ಹಾಕಿ ಡಾನ್ಸ್ ಮಾಡಿದ ಯಥರ್ವ್!
ಐರಾ ಮತ್ತು ಯಥರ್ವ್ ಇಬ್ಬರ ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚೆಗೆ ಪುಟ್ಟ ಪೋರ ಯಥರ್ವ್ ಮ್ಯೂಜಿಕ್ ಹಾಕಿ ಡಾನ್ಸ್ ಮಾಡಿದ ವಿಡಿಯೋ ಕೂಡ ಈ ಹಿಂದೆ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಗೂಗಲ್‌ಗೆ ಮ್ಯೂಜಿಕ್ ಪ್ಲೇ ಮಾಡಲು ಹೇಳಿ ಯಥರ್ವ್ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಡಾನ್ಸ್ ಮಾಡಿದ್ದ. ಯಥರ್ವ್ ಜೊತೆಗೆ ಐರಾ ಕೂಡ ಡಾನ್ಸ್ ಮಾಡಿದ್ದಳು. ಈ ವಿಡಿಯೋಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಯಶ್ ಕೆಜಿಎಫ್ 2ಗಾಗಿ ಕಾಯುತ್ತಿದೆ ಅಭಿಮಾನಿ ಬಳಗ!
ಯಶ್ ಅವರ ಸಿನಿಮಾ ವಿಚಾರಕ್ಕೆ ಬಂದರೆ. ಯಶ್ ಅವರ ಮುಂದಿನ ಚಿತ್ರ ಕೆಜಿಎಫ್ 2. ಈ ಚಿತ್ರದ ರಿಲೀಸ್ ದಿನಾಂಕವನ್ನು ಏಪ್ರಿಲ್ 14ಕ್ಕೆ ನಿಗದಿ ಮಾಡಲಾಗಿದೆ. ಇಲ್ಲಿಯ ತನಕ ಈ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಒಂದು ವೇಳೆ ಕೊರೋನಾ ಹಾವಾಳಿ ಹೆಚ್ಚಾದರೆ ಮಾತ್ರ ಬದಲಾವಣೆ ಸಾಧ್ಯತೆ ಇದೆ. ಆದರೆ ಅಭಿಮಾನಿಗಳು ಸಿನಿಮಾ ಈಗ ನಿಗದಿ ಆಗಿರುವ ದಿನಾಂಕಕ್ಕೆ ರಿಲೀಸ್ ಆಗಲಿ ಎಂದು ಆಶಿಸುತ್ತಿದ್ದಾರೆ.


Click it and Unblock the Notifications











