ವಿಚಾರಣೆಗಾಗಿ ಐಟಿ ಆಫೀಸ್ ಗೆ ತಾಯಿ ಜೊತೆ ಬಂದ ರಾಕಿಂಗ್ ಸ್ಟಾರ್ ಯಶ್.!
Recommended Video

ವಿಚಾರಣೆಗಾಗಿ ಐಟಿ ಆಫೀಸ್ ಗೆ ತಾಯಿ ಜೊತೆ ಬಂದ ರಾಕಿಂಗ್ ಸ್ಟಾರ್ ಯಶ್.! | FILMIBEAT KANNADA
ಸ್ಯಾಂಡಲ್ ವುಡ್ ನ ಟಾಪ್ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲೆ ಐಟಿ ದಾಳಿ ನಡೆದು ಒಂದು ವಾರ ಕಳೆದ ಮೇಲೆ, ವಿಚಾರಣೆಗಾಗಿ ತಾಯಿ ಪುಷ್ಪ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಐಟಿ ಕಛೇರಿಗೆ ಆಗಮಿಸಿದ್ದಾರೆ.
ವಿಚಾರಣೆಗೆ ಹಾಜರ್ ಆಗಲು ನೋಟೀಸ್ ಜಾರಿ ಆಗಿದ್ದರಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇರುವ ಆದಾಯ ತೆರಿಗೆ ಇಲಾಖೆಗೆ ಇಂದು ನಟ ಯಶ್ ಹಾಗೂ ತಾಯಿ ಪುಷ್ಪ ಭೇಟಿ ನೀಡಿದರು. ಯಶ್ ರವರ ಆದಾಯ ಮೂಲಗಳ ಬಗ್ಗೆ ವಿಚಾರಣೆ ನಡೆಯಲಿದೆ.

ಜನವರಿ 3 ರಂದು ಬೆಳ್ಳಂಬೆಳಗ್ಗೆ ಯಶ್ ಸೇರಿದಂತೆ ಕನ್ನಡ ನಟರು ಹಾಗೂ ನಿರ್ಮಾಪಕರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಮನೆಯಲ್ಲಿ ಸತತ ಮೂರು ದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
''ವಿಜಯ್ ಕಿರಗಂದೂರು ಮತ್ತು ತಿಮ್ಮೇಗೌಡ ವಿಚಾರವಾಗಿ ಐಟಿ ರೇಡ್ ನಡೆದಿದೆ. ವಿಚಾರಣೆಗೆ ಸಹಕಾರ ಕೊಡುವೆ'' ಎಂದು ಐಟಿ ರೇಡ್ ಮುಗಿದ ಬಳಿಕ ಯಶ್ ತಿಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಯಶ್ ಹಾಜರ್ ಆಗಿದ್ದಾರೆ.
English summary
Rocking Star Yash visits IT Office, Bengaluru for enquiry.


Click it and Unblock the Notifications