ವಿಶಾಲ್ ನಟನೆಯ 'ಚಕ್ರ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಯಶ್

By Avani Malnad

ತಮಿಳಿನ ಖ್ಯಾತ ನಟ ವಿಶಾಲ್ ಅಭಿನಯದ 'ಚಕ್ರ' ಚಿತ್ರದ ಟ್ರೇಲರ್ ಶನಿವಾರ (ಜೂನ್ 27) ಬಿಡುಗಡೆಯಾಗಲಿದೆ. ಎಂಎಸ್ ಆನಂದನ್ ನಿರ್ದೇಶನದ ಮೊದಲ ಚಿತ್ರದ ಫಸ್ಟ್ ಲುಕ್ ಕಳೆದ ವರ್ಷದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

Recommended Video

ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

ಶ್ರದ್ಧಾ ಶ್ರೀನಾಥ್ ಮತ್ತು ರೆಜಿನಾ ಕ್ಯಾಸ್ಸಂದ್ರ ನಾಯಕಿಯರಾಗಿರುವ ಈ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ತೆರೆಕಾಣಲಿದೆ. ಶನಿವಾರ ಸಂಜೆ 5 ಗಂಟೆಗೆ ಎಲ್ಲ ಭಾಷೆಗಳಲ್ಲಿಯೂ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಕನ್ನಡದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಲೋಕಾರ್ಪಣೆ ಮಾಡಲಿದ್ದಾರೆ.

ಮಲಯಾಳಂ ಆವೃತ್ತಿಯ ಟ್ರೇಲರ್‌ಅನ್ನು ಹಿರಿಯ ನಟ ಮೋಹನ್ ಲಾಲ್ ಮತ್ತು ತೆಲುಗಿನ ಆವೃತ್ತಿಯ ಟ್ರೇಲರ್ಅನ್ನು ರಾಣಾ ದಗ್ಗುಬಾಟಿ ಬಿಡುಗಡೆ ಮಾಡಲಿದ್ದಾರೆ. ಕಾರ್ತಿ ಮತ್ತು ಆರ್ಯ ತಮಿಳಿನ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

Rocking Star Yash Will Be Launching Vishals Chakra Kannada Trailer Tomorrow @ 5 PM

'ಚಕ್ರ' ಸೈಬರ್ ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಸೈಬರ್ ಕ್ರೈಂ ಕುರಿತಾಗಿ ತಮಿಳಿನಲ್ಲಿ 'ಇರುಂಬು ಥಿರೈ' ಚಿತ್ರ ಬಂದಿತ್ತು. ಆದರೆ ಈ ಎರಡೂ ಸಿನಿಮಾಗಳಿಗೆ ಯಾವುದೇ ಹೋಲಿಕೆ ಇಲ್ಲ ಎಂದು ನಿರ್ದೇಶಕ ಆನಂದನ್ ತಿಳಿಸಿದ್ದಾರೆ.

ತಂದೆಯ ಅಶೋಕ ಚಕ್ರ ಪದಕವನ್ನು ಕಳೆದುಕೊಂಡ ವ್ಯಕ್ತಿ ಅದನ್ನು ಹುಡುಕುತ್ತಾ ಹೋದಾಗ ತನ್ನ ಇಡೀ ಜೀವನವನ್ನು ಹ್ಯಾಕ್ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಮತ್ತು ಅದನ್ನು ಭೇದಿಸುವುದು ಚಿತ್ರದ ಕಥೆ. ಶ್ರದ್ಧಾ ಶ್ರೀನಾಥ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರೆ, ವಿಶಾಲ್ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಶಾಲ್ ಫಿಲ್ಮ್ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಿಸಿದ್ದು, ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಸೃಷ್ಟಿ ದಾಂಗೆ, ಮನೋಬಲ ಮತ್ತು ರೋಬೋ ಶಂಕರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Rocking Star Yash will be launching Vishal's Chakra Kannada trailer tomorrow At 5 PM. The movie will be releasing in all four South Indian languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X