For Quick Alerts
  ALLOW NOTIFICATIONS  
  For Daily Alerts

  ವಿಶಾಲ್ ನಟನೆಯ 'ಚಕ್ರ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಯಶ್

  By Avani Malnad
  |

  ತಮಿಳಿನ ಖ್ಯಾತ ನಟ ವಿಶಾಲ್ ಅಭಿನಯದ 'ಚಕ್ರ' ಚಿತ್ರದ ಟ್ರೇಲರ್ ಶನಿವಾರ (ಜೂನ್ 27) ಬಿಡುಗಡೆಯಾಗಲಿದೆ. ಎಂಎಸ್ ಆನಂದನ್ ನಿರ್ದೇಶನದ ಮೊದಲ ಚಿತ್ರದ ಫಸ್ಟ್ ಲುಕ್ ಕಳೆದ ವರ್ಷದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

  ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

  ಶ್ರದ್ಧಾ ಶ್ರೀನಾಥ್ ಮತ್ತು ರೆಜಿನಾ ಕ್ಯಾಸ್ಸಂದ್ರ ನಾಯಕಿಯರಾಗಿರುವ ಈ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ತೆರೆಕಾಣಲಿದೆ. ಶನಿವಾರ ಸಂಜೆ 5 ಗಂಟೆಗೆ ಎಲ್ಲ ಭಾಷೆಗಳಲ್ಲಿಯೂ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಕನ್ನಡದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಲೋಕಾರ್ಪಣೆ ಮಾಡಲಿದ್ದಾರೆ.

  ಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜುಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  ಮಲಯಾಳಂ ಆವೃತ್ತಿಯ ಟ್ರೇಲರ್‌ಅನ್ನು ಹಿರಿಯ ನಟ ಮೋಹನ್ ಲಾಲ್ ಮತ್ತು ತೆಲುಗಿನ ಆವೃತ್ತಿಯ ಟ್ರೇಲರ್ಅನ್ನು ರಾಣಾ ದಗ್ಗುಬಾಟಿ ಬಿಡುಗಡೆ ಮಾಡಲಿದ್ದಾರೆ. ಕಾರ್ತಿ ಮತ್ತು ಆರ್ಯ ತಮಿಳಿನ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

  'ಚಕ್ರ' ಸೈಬರ್ ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಸೈಬರ್ ಕ್ರೈಂ ಕುರಿತಾಗಿ ತಮಿಳಿನಲ್ಲಿ 'ಇರುಂಬು ಥಿರೈ' ಚಿತ್ರ ಬಂದಿತ್ತು. ಆದರೆ ಈ ಎರಡೂ ಸಿನಿಮಾಗಳಿಗೆ ಯಾವುದೇ ಹೋಲಿಕೆ ಇಲ್ಲ ಎಂದು ನಿರ್ದೇಶಕ ಆನಂದನ್ ತಿಳಿಸಿದ್ದಾರೆ.

  ದೊಡ್ಡ ಸ್ಟಾರ್‌ಗಳನ್ನು ಹಿಂದಿಕ್ಕಿ ಹೊಸದೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ದೊಡ್ಡ ಸ್ಟಾರ್‌ಗಳನ್ನು ಹಿಂದಿಕ್ಕಿ ಹೊಸದೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್

  ತಂದೆಯ ಅಶೋಕ ಚಕ್ರ ಪದಕವನ್ನು ಕಳೆದುಕೊಂಡ ವ್ಯಕ್ತಿ ಅದನ್ನು ಹುಡುಕುತ್ತಾ ಹೋದಾಗ ತನ್ನ ಇಡೀ ಜೀವನವನ್ನು ಹ್ಯಾಕ್ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಮತ್ತು ಅದನ್ನು ಭೇದಿಸುವುದು ಚಿತ್ರದ ಕಥೆ. ಶ್ರದ್ಧಾ ಶ್ರೀನಾಥ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರೆ, ವಿಶಾಲ್ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

  ವಿಶಾಲ್ ಫಿಲ್ಮ್ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಿಸಿದ್ದು, ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಸೃಷ್ಟಿ ದಾಂಗೆ, ಮನೋಬಲ ಮತ್ತು ರೋಬೋ ಶಂಕರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Rocking Star Yash will be launching Vishal's Chakra Kannada trailer tomorrow At 5 PM. The movie will be releasing in all four South Indian languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X