Toxic Teaser: 'ಟಾಕ್ಸಿಕ್' ಯಶ್ ನಾನಾ ವೇಷ, ನಾನಾ ಸರ್ಕಸ್.. ಈ ಸಲ ಯುದ್ಧಾನೇ ಬೇರೆ

ಸಿನಿರಸಿಕರ ಕಾತುರತೆಗೆ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಪ್ರಪಂಚದ ಸಣ್ಣ ಝಲಕ್ ಹೊರ ಬಂದಿದೆ. 'ಕೆಜಿಎಫ್'-2 ಬಳಿಕ ಮುಂದೇನು ಎನ್ನುತ್ತಿದ್ದರವರಿಗೆ 'ಟಾಕ್ಸಿಕ್' ಮೂಲಕ ಉತ್ತರ ಕೊಡಲು ಯಶ್ ಸಜ್ಜಾಗಿದ್ದಾರೆ. ಸಿನಿಮಾ ಬಿಡುಗಡೆಗೆ ತಿಂಗಳು ಬಾಕಿ ಇರುವಂತೆ ಆಕ್ಷನ್ ಪ್ಯಾಕ್ಡ್ ಟೀಸರ್ ಬಂದು ಧೂಳೆಬ್ಬಿಸಿದೆ.

ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ ಇದು. ನಿರ್ದೇಶಕಿ ಜೊತೆ ಸೇರಿ ಯಶ್ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಹಾಗಾಗಿ ನಿರೀಕ್ಷೆ ಡಬಲ್ ಆಗಿದೆ. ಮಾರ್ಚ್ 19ಕ್ಕೆ 'ಧುರಂಧರ್‌-' ಎದುರು ಈ ಸಿನಿಮಾ ತೆರೆಗೆ ಬರಲಿದೆ. ಇಂಗ್ಲೀಷ್ ಸೇರಿ 6 ಭಾಷೆಗಳಲ್ಲಿ 'ಟಾಕ್ಸಿಕ್' ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ನಾನಾ ಗೆಟಪ್‌ಗಳಲ್ಲಿ ಯಶ್ ದರ್ಶನ ಕೊಟ್ಟಿದ್ದಾರೆ. ಅಭಿಮಾನಿಗಳಿಗಂತೂ ಸಿನಿಮಾ ಹಬ್ಬದೂಟವೇ ಸರಿ.

Rocking starer Yash Starrer Toxic action-packed teaser raises expectations

ಹೆಚ್ಚು ಕಮ್ಮಿ ಎರಡು ನಿಮಿಷಗಳ ಟೀಸರ್ ಹುಬ್ಬೇರಿಸುವಂತಿದೆ. ಚಿತ್ರದ ಜಬರ್ದಸ್ತ್ ಸನ್ನಿವೇಶಗಳನ್ನು ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ಅದಕ್ಕೆ ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸೇರಿಸಲಾಗಿದೆ. ಮೇಕಿಂಗ್, ವಿಷ್ಯುವಲ್ಸ್ ಎಲ್ಲವೂ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಯಶ್ ನಾನಾ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ.

ರೆಟ್ರೋ ಶೈಲಿಯಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರ್ತಿರೋದು ಗೊತ್ತಾಗುತ್ತಿದೆ. 60-70ರ ದಶಕದ ಗೋವಾಗ ಹಿನ್ನೆಲೆಯ ಕಥೆಯನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ರಾಯನಾಗಿ ಯಶ್ ಆರ್ಭಟ ಜೋರಾಗಿದೆ. ಇನ್ನು ಕ್ಲೀನ್ ಶೇವ್‌ನಲ್ಲಿ ಸಿಕ್ಕಾಪಟ್ಟೆ ಯಂಗ್ ಲುಕ್‌ನಲ್ಲಿ ಕೂಡ ಯಶ್ ದರ್ಶನ ಕೊಟ್ಟಿದ್ದಾರೆ. ಟೀಸರ್ ಕೊನೆಗೆ ಅದು ಹೈಲೆಟ್ ಎನಿಸಿಕೊಂಡಿದೆ.

ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿರುವುದು ಸ್ಪಷ್ಟವಾಗುತ್ತಿದೆ. ತಂದೆ(ರಾಯ) ಮಗನಾಗಿ ಯಶ್ ನಟಿಸಿರುವ ಸಾಧ್ಯತೆ ದಟ್ಟವಾಗಿದೆ. 'ಈ ಸಲ ಯುದ್ಧಾನೇ ಬೇರೆ' ಎನ್ನುವ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತದೆ. ಮುಂದೆ ರಾಯಲ್ ಸರ್ಕಸ್ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. "ಎಲ್ಲರನ್ನು ಎದುರಾಕಿಕೊಂಡು ಗೆಲ್ಲೋಕೆ ಆಗಲ್ಲ, ಬಿಟ್ಟುಕೊಟ್ಟುಬಿಡು ರಾಯ.. ಎಲ್ಲಾ ಮುಗೀತು" ಎನ್ನುವ ಹಿನ್ನೆಲೆ ಧ್ವನಿ ಕೇಳಿಸುತ್ತದೆ. ಆಗ ರಾಯ(ಯಶ್)ನ ಪರಿಚಯವಾಗುತ್ತದೆ.

"ಎಲ್ಲಾ ಮುಗೀತು ನಿಜ.. ಆದರೆ ನಾನು ಹೇಳಿದಾಗ.. ಅಲ್ಲಿವರೆಗೂ ಸ್ವಲ್ಪ ಸಭ್ಯತೆ, ಗೌರವ ಇರಲಿ" ಎಂದು ರಾಯನಾಗಿ ಯಶ್ ಅಬ್ಬರಿಸಿದ್ದಾರೆ. ಟೀಸರ್ ಕೊನೆಗೆ ಯಂಗ್ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ದರ್ಶನವಾಗಿದೆ. ಕತ್ತಿ ಹಿಡಿದು ಅಬ್ಬರಿಸಿ, ಮರ ಕತ್ತರಿಸುವ ಯಂತ್ರ ಬಳಸಿ ಮನುಷ್ಯನ ತಲೆ ಕತ್ತರಿಸುವಷ್ಟು ಕಿರಾತಕನಾಗಿ 'ಐ ಯ್ಯಾಮ್ ಹೋಮ್ ಡ್ಯಾಡಿ' ಎನ್ನುವ ಡೈಲಾಗ್ ಹೊಡೆದಿರುವುದನ್ನು ನೋಡಬಹುದು.

'ಜಾನ್ ವಿಕ್' ಮತ್ತು 'ಫಾಸ್ಟ್ & ಫ್ಯೂರಿಯಸ್' ಸಿನಿಮಾಗಳ ಖ್ಯಾತಿಯ ಜೆಜೆ ಪೆರ್ರಿ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಅನ್ಬರಿವ್ ಮತ್ತು ಕೇಚಾ ಖಂಫಕ್ಡೀ ಕೂಡ ಸ್ಟಂಟ್ಸ್ ಡಿಸೈನ್ ಮಾಡಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ಬೇಸರದ ಸಂಗತಿ ಏನಂದ್ರೆ ಟೀಸರ್‌ನಲ್ಲಿ ಕೂಡ ಯಶ್ ಬಿಟ್ಟು ಇತರೆ ಪಾತ್ರಗಳನ್ನು ಪರಿಚಯಿಸಿಲ್ಲ.

ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅದ್ವಾನಿ, ಹುಮಾ ಖುರೇಷಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಪರಿಚಯದ ಪೋಸ್ಟರ್‌ಗಳು ಬಿಡುಗಡೆ ಆಗಿತ್ತು. ಆದರೆ ಟೀಸರ್‌ನಲ್ಲಿ ಅವರನ್ನು ತೋರಿಸಿಲ್ಲ. ಈ ಹಿಂದೆ ಬಂದಿದ್ದ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಆದರೆ ಹೊಸ ಟೀಸರ್‌ನಲ್ಲಿ ಸಾಧ್ಯವಾದಷ್ಟು ಅಂತಹ ಸನ್ನಿವೇಶಗಳು ಇಲ್ಲದಂತೆ ನೋಡಿಕೊಂಡಿದ್ದಾರೆ.

ಟೀಸರ್ ನೋಡುತ್ತಿದ್ದರೆ ಇದೊಂದು ಡಿವೇಂಜ್ ಡ್ರಾಮಾ ಎನ್ನುವುದು ಗೊತ್ತಾಗುತ್ತಿದೆ. ಆದರೆ ಚಿತ್ರಕಥೆ ಹೇಗಿರುತ್ತೆ, ಅದನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಂತೂ ಪವರ್ ಪ್ಯಾಕ್ಡ್ ಟೀಸರ್ ನೋಡಿ ಖುಷಿಯಾಗಿದ್ದಾರೆ. ಟ್ರೈಲರ್ ಯಾವಾಗ ಎಂದು ಕಾಯುವಂತಾಗಿದೆ.

More from Filmibeat

Read more about: yash toxic kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X