ನನ್ನ ಸಾಧನೆಗೆ ದೊಡ್ಡಮನೆ ಮಕ್ಕಳೇ ಸ್ಪೂರ್ತಿ ಎಂದ ಯಶ್!

ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ನಟ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ . ಈ ಮೂರು ಜನ ಭಜರಂಗಿ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದು ಒಂದು ವಿಶೇಷ. ಇದೇ ವೇಳೆ ಯಶ್ ರಾಜ್‌ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಯಶ್ ಒಂದಷ್ಟು ವಿಚಾರಗಳನ್ನು ವೇದಿಕೆ ಮೇಲೆ ರಿವಿಲ್ ಮಾಡಿದ್ದಾರೆ.

ಶಿವರಾಜ್‌ ಕುಮಾರ್, ಪುನೀತ್‌ ನೋಡಿ ಸಾಕಷ್ಟು ಕಲಿತ ಯಶ್!

ರಾಕಿಂಗ್ ಸ್ಟಾರ್ ಯಶ್ ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಯಶ್‌ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಕನ್ನಡದ ಹಳ್ಳಿ ಹುಡುಗ ಯಶ್ ಇಂದು ವಿಶ್ವವೆ ತಲೆ ಎತ್ತಿ ನೋಡುವ ಹಾಗೆ ಬೆಳೆದು ನಿಂತಿದ್ದಾರೆ. ಅದು ಅವರ ಅದೃಷ್ಟ ಅಂತಲೂ ಸಾಕಷ್ಟು ಜನ ಹೇಳುತ್ತಾರೆ. ಆದರೆ ಯಶ್‌ ತಮ್ಮ ಸಾಧೆಯ ಸ್ಪೂರ್ತಿ ಯಾರು ಎಂಬುದನ್ನು ಈಗ ರಿವೀಲ್‌ ಮಾಡಿದ್ದಾರೆ. ಯಶ್ ಅವರನ್ನು ಸಿನಿಮಾರಂಗದಲ್ಲಿ ಲಕ್ಕಿ ಸ್ಟಾರ್ ಅಂತಲೇ ಕರೆಯುತ್ತಾರೆ. ಯಾಕೆಂದರೆ ನೋಡನೋಡುತ್ತಲೇ ಕನ್ನಡ ಸಿನಿಮಾಗಳನ್ನು ಮಾಡುತ್ತಲೇ, ಯಶ್‌ ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ. ವಿಶ್ವಮಟ್ಟದಲ್ಲಿ ತಲುಪುವ ಹಾಗೆ ಬೆಳೆದಿದ್ದಾರೆ. ಆದರೆ ಯಶ್ ತಮ್ಮ ಈ ಬೆಳವಣಿಗೆಗೆ ಮೊದಲು ಸ್ಪೂರ್ತಿಯಾಗಿದ್ದೆ ದೊಡ್ಡ ಮನೆ ಮಕ್ಕಳು ಅಂತಾರೆ.

'ನಮಗಿಂತ ಮೊದಲು ಲಕ್ ಅಂದ್ರೆ ಏನು? ಅದೃಷ್ಟ ಅಂದ್ರೆ ಏನು? ಅನ್ನೋದನ್ನು ಶಿವರಾಜಕುಮಾರ್ ಅವರು ಯಾವಾಗಲೋ ನೋಡಿ ಬಿಟ್ಟಿದ್ದಾರೆ. ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಾನಿಂದು ನಡೆಯುತ್ತಿದ್ದೇನೆ. ಶಿವರಾಜ್ ಕುಮಾರ್ ಅವರ ಜೀವನ ನನಗೆ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ'.

Rocking Stra Yash Film Journy Inspaired From Shiva Rajkumar And Puneeth Rajkumar

ಇನ್ನು ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಿದ ಯಶ್ 'ಪುನೀತ್ ಸಿನಿಮಾಗಳನ್ನು ನೋಡಿ ಅವರಂತೆಯೇ ಡಾನ್ಸ್‌ ಮಾಡಬೇಕು, ಅವರಂತೆಯೇ ಫೈಟ್ ಮಾಡಬೇಕು ಅಂತ ಸದಾ ಅಂದುಕೊಳ್ಳುತ್ತಿದ್ದೆ' ಎಂದಿದ್ದಾರೆ ನಟ ಯಶ್. ಶಿವಣ್ಣ ಮತ್ತು ಪುನೀತ್ ರಾಜಕುಮಾರ್ ಅವರ ಸಿನಿಮಾಗಳನ್ನು ಹೆಚ್ಚಾಗಿಯೇ ಸ್ಪೂರ್ತಿಯಾಗಿ ಪಡೆದುಕೊಂಡು ತನ್ನ ಸಿನಿಮಾ ಜರ್ನಿ ಶುರು ಮಾಡಿರೋ ವಿಚಾರವನ್ನು ಹಂಚಿಕೊಂಡಿರೋ ಯಶ್ ಇಂದಿನ ತಮ್ಮ ಸಾಧನೆಗೆ ದೊಡ್ಡಮನೆ ಮಕ್ಕಳು ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ. ಸಿನಿಮಾ ರಂಗದ ಜರ್ನಿ ಆರಂಭದಲ್ಲಿ ಮತ್ತು ಸಿನಿಮಾರಂಗದಲ್ಲಿ ಬೆಳೆದ ಮೇಲೂ ದೊಡ್ಡಮನೆ ಮಕ್ಕಳಿಂದ ಒಂದೇ ರೀತಿಯ ಗೌರವ ಸಿಕ್ಕಿದೆ ಎಂದಿದ್ದಾರೆ. ಅವರು ಬದಲಾಗುವುದಿಲ್ಲ ಮತ್ತೊಬ್ಬರಿಗೆ ಒಳ್ಳೆಯ ಮಾರ್ಗದರ್ಶನ ನೀಡುವವರು ಎಂದು ಯಶ್ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ.

Rocking Stra Yash Film Journy Inspaired From Shiva Rajkumar And Puneeth Rajkumar

ಕೆಜಿಎಫ್2ಗಾಗಿ ಕಾಯುತ್ತಿರೋ ಯಶ್!

ಯಶ್‌ ಸದ್ಯ ಕೆಜಿಎಫ್2 ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಕೆಜಿಎಫ್2 ಸಿನಿಮಾ 2022ರ ಏಪ್ರಿಲ್ 14ಕ್ಕೆ ರಿಲೀಸ್‌ ಆಗಲಿದೆ. ಈ ಚಿತ್ರಕ್ಕಾಗಿ ಇಡೀ ಚಿತ್ರರಂಗವೇ ಎದುರು ನೋಡುತ್ತಿದೆ. ಕೆಜಿಎಫ್‌ ಭಾಗ ಒಂದರ ಮೂಲಕ ಸಾಲು ಸಾಲು ದಾಖಲೆಗಳನ್ನು ಮುರಿದಿರುವ ಯಶ್ ಈಗ ಕೆಜಿಎಫ್2 ಮೂಲಕ ಇನ್ನೇನು ಜಾದು ಮಾಡುತ್ತಾರೆ ಅನ್ನೋ ಕುತೂಹಲ ಸದ್ಯಕ್ಕಿದೆ. ಅದಕ್ಕೂ ಮೊದಲು ಅಷ್ಟೇ ನಿರೀಕ್ಷೆ ಹೊತ್ತಿರೋ ಭಜರಂಗಿಗೆ ಯಶ್‌ ಶುಭ ಕೋರಿದ್ದಾರೆ. ಜೊತೆಗೆ ಸಿನಿಮಾರಂಗದಲ್ಲಿ ಸ್ಟಾರ್‌ಗಳ ನಡುವಿನ ಮುನಿಸು ಅನ್ನೋದೆಲ್ಲಾ ಗಾಳಿಸುದ್ದಿ ಅಷ್ಟೇ ಅನ್ನೋದು ಭಜರಂಗಿ ವೇದಿಕೆ ಮೇಲೆ ಸಾಬೀತಾಗಿದೆ.

More from Filmibeat

English summary
Actor Yash Reveal Intesting Matter About Raj Family,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X