twitter
    For Quick Alerts
    ALLOW NOTIFICATIONS  
    For Daily Alerts

    ರಾಕ್ಲೈನ್ ಸುಧಾಕರ್ ಜೀವನ ಬದಲಿಸಿದ್ದು ರಾಕ್ಲೈನ್ ವೆಂಕಟೇಶ್ ಮತ್ತು ಯೋಗರಾಜ್ ಭಟ್

    |

    ಕನ್ನಡದ ಹಿರಿಯ ನಟ ರಾಕ್ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಧಾಕರ್ ಹೆಸರಿನ ಹಿಂದೆ 'ರಾಕ್ಲೈನ್' ಎಂಬ ಹೆಸರು ನೋಡಿ ಇವರು ರಾಕ್ಲೈನ್ ವೆಂಕಟೇಶ್ ಅವರ ಅಣ್ಣನಾ ಅಥವಾ ಅವರ ಸಂಬಂಧಿಕನಾ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ.

    ಸುಧಾಕರ್ ಅವರು ರಾಕ್ಲೈನ್ ವೆಂಕಟೇಶ್ ಸಹೋದರ ಅಲ್ಲ, ಅವರ ಸಂಬಂಧಿಕನೂ ಅಲ್ಲ, ಆದರೆ, ಅವರ ಕುಟುಂಬದಲ್ಲೊಬ್ಬ ಎಂಬಂತೆ ಬೆಳದವರು. ಚಿತ್ರರಂಗದಲ್ಲಿ ರಾಕ್ಲೈನ್ ಸುಧಾಕರ್ ಎಂದು ಹೆಸರು ಸಂಪಾದಿಸಿದ್ದಾರೆ ಅಂದ್ರೆ ಅದರ ಹಿಂದೆ ರಾಕ್ಲೈನ್ ಸಂಸ್ಥೆಯ ಋಣ ಇದೆ. ಇದನ್ನು ಖುದ್ದು ಸುಧಾಕರ್ ಅವರೇ ಹೇಳಿಕೊಂಡಿದ್ದರು. ಮುಂದೆ ಓದಿ...

    ಎಸ್‌ಎಸ್‌ಎಲ್‌ಸಿ ಸಹ ಪಾಸ್ ಆಗಿಲ್ಲ

    ಎಸ್‌ಎಸ್‌ಎಲ್‌ಸಿ ಸಹ ಪಾಸ್ ಆಗಿಲ್ಲ

    ಸುಧಾಕರ್ ಅವರು ಎಸ್‌ಎಸ್‌ಎಲ್‌ಸಿ ಸಹ ಪಾಸ್ ಆಗಿರಲಿಲ್ಲ. ಜೀವನಕ್ಕಾಗಿ ಬೆಂಗಳೂರಿಗೆ ಬಂದ ಅವರು ಆಟೋ ಓಡಿಸಿದ್ರು. ಕಬನ್ ಪಾರ್ಕ್‌ನಲ್ಲಿ ಚಿಪ್ಸ್ ಮಾರಿದ್ರು. ಈ ಮಧ್ಯೆ ರಾಕ್‌ಲೈನ್ ವೆಂಕಟೇಶ್ ಪರಿಚಯ ಆಯ್ತು. ಆ ಸಮಯಕ್ಕೆ ವೆಂಕಟೇಶ್ ಇನ್ನೂ ಸಿನಿಮಾ ಮಾಡಿರಲಿಲ್ಲ. ರಾಕ್ಲೈನ್ ವೆಂಕಟೇಶ್ ಅವರ ತಂದೆಗೆ ನಂಬಿಕಸ್ಥ ಆದ ಸುಧಾಕರ್ ಅವರನ್ನು ತೋಟವನ್ನು (ಇಂದಿನ ರಾಕ್ಲೈನ್ ಸ್ಟುಡಿಯೋ) ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು.

    ಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನ

    ರಾಕ್ಲೈನ್ ಸಂಸ್ಥೆಯಲ್ಲಿ ಕೆಲಸ

    ರಾಕ್ಲೈನ್ ಸಂಸ್ಥೆಯಲ್ಲಿ ಕೆಲಸ

    ರಾಕ್ಲೈನ್ ವೆಂಕಟೇಶ್ ಮೂಲಕ ಅವರ ಕುಟುಂಬಕ್ಕೆ ಹತ್ತಿರವಾದ ಸುಧಾಕರ್, ನಂತರ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವರ ಜೊತೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ರಾಕ್ಲೈನ್ ಸಹ ಕೆಲವು ಜವಾಬ್ದಾರಿಗಳನ್ನು ವಹಿಸಿದ್ದರು. ರಾಕ್ಲೈನ್ ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಆಗಿ ಸುಧಾಕರ್ ಸುಮಾರು ವರ್ಷ ಕೆಲಸ ಮಾಡಿದ್ದಾರೆ.

    ಪರದೆ ಮೇಲೆ ತಂದಿದ್ದು ಯೋಗರಾಜ್ ಭಟ್ಟರು

    ಪರದೆ ಮೇಲೆ ತಂದಿದ್ದು ಯೋಗರಾಜ್ ಭಟ್ಟರು

    ಅಷ್ಟೊತ್ತಿಗಾಲೇ ರಾಕ್ಲೈನ್ ವೆಂಕಟೇಶ್ ಅವರು ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಯೋಗರಾಜ್ ಭಟ್ 'ಮನಸಾರೆ' ಸಿನಿಮಾ ಮಾಡುತ್ತಿದ್ದಾಗ, ಸುಧಾಕರ್ ಅವರಿಂದ ಒಂದು ಪಾತ್ರ ಮಾಡಿಸಲು ನಿರ್ಧರಿಸಿದರು. ಈ ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ನಿರ್ಮಾಪಕ. ವೆಂಕಟೇಶ್ ಅವರ ಬಳಿ ಅನುಮತಿ ಪಡೆದು, ಸುಧಾಕರ್ ಅವರನ್ನು ಈ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದು ಯೋಗರಾಜ್ ಭಟ್. ಈ ಚಿತ್ರದ ಮೂಲಕವೇ ಸುಧಾಕರ್ ಮೊದಲ ಸಲ ತೆರೆಮೇಲೆ ಬಂದ್ರು.

    'ಪ್ರೀತಿಯ ಸುಬ್ಬಿ'ಗೆ ನೋವಿನಿಂದ ವಿದಾಯ ಹೇಳಿದ 'ಡಾಲಿ''ಪ್ರೀತಿಯ ಸುಬ್ಬಿ'ಗೆ ನೋವಿನಿಂದ ವಿದಾಯ ಹೇಳಿದ 'ಡಾಲಿ'

    ಭಿನ್ನಾಭಿಪ್ರಾಯದಿಂದ ಹೊರಗೆ ಬಂದರು

    ಭಿನ್ನಾಭಿಪ್ರಾಯದಿಂದ ಹೊರಗೆ ಬಂದರು

    ವರ್ಷಗಳ ಕಾಲ ರಾಕ್ಲೈನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ನಂತರ ಆ ಸಂಸ್ಥೆಯಿಂದ ಹೊರಗೆ ಬಂದರು. ರಾಕ್ಲೈನ್ ವೆಂಕಟೇಶ್ ಜೊತೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಸುಧಾಕರ್ ಅಲ್ಲಿಂದ ಹೊರಗೆ ಬಂದು ಸ್ವತಂತ್ರವಾಗಿ ಬದುಕಲು ಆರಂಭಿಸಿದರು. ಸತತ ಸಿನಿಮಾಗಳಲ್ಲಿ ನಟಿಸುತ್ತಾ ಬಂದರು.

    Recommended Video

    RocklineSudhakar, ಸುಬ್ಬಿಗೋಸ್ಕರ ಕಣ್ಣೀರಿಟ್ಟ ಡಾಲಿ| Dhananjay | Filmibeat Kannada
    199 ಚಿತ್ರಗಳಲ್ಲಿ ಅಭಿನಯ

    199 ಚಿತ್ರಗಳಲ್ಲಿ ಅಭಿನಯ

    ಹೀಗೆ, ಇಂಡಸ್ಟ್ರಿಯ ಸಂಬಂಧವೇ ಇಲ್ಲದೇ ಬೆಳೆದು ಬಂದ ನಟ ಸುಧಾಕರ್. ಕೊನೆಯ ಘಳಿಗೆಯಲ್ಲೂ ಯೋಗರಾಜ್ ಭಟ್ ಹಾಗೂ ರಾಕ್ಲೈನ್ ವೆಂಕಟೇಶ್ ಅವರನ್ನು ಸ್ಮರಿಸಿಕೊಂಡಿದ್ದರು. ಸುಮಾರು 199 ಚಿತ್ರಗಳಲ್ಲಿ ಸುಧಾಕರ್ ನಟಿಸಿದ್ದರು. 'ಟಾಮ್ ಅಂಡ್ ಜೆರ್ರಿ' ಸಿನಿಮಾ ಅವರ 199 ಚಿತ್ರ. ಆದ್ರೆ, ಸೆಪ್ಟೆಂಬರ್ 24 ರಂದು 'ಶುಗರ್‌ಲೆಸ್' ಚಿತ್ರದ ಶೂಟಿಂಗ್ ವೇಳೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

    English summary
    Director Yogaraj Bhat and Producer Rockline Venkatesh has changed Comedy actor Rockline Sudhakar's life.
    Thursday, September 24, 2020, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X