twitter
    For Quick Alerts
    ALLOW NOTIFICATIONS  
    For Daily Alerts

    ಕಲಾವಿದರ ಭವನ ಕುರಿತು ಅಣ್ಣಾವ್ರ ಅಭಿಮಾನಿಗಳ ಗೊಂದಲ ಬಗೆಹರಿಸಿದ ರಾಕ್ಲೈನ್ ವೆಂಕಟೇಶ್

    |

    ಕನ್ನಡ ಸಿನಿಮಾ ಕಲಾವಿದರ ಭವನಕ್ಕೆ 'ಡಾ ರಾಜ್ ಕುಮಾರ್ ಭವನ' ಎಂದು ಹೆಸರಿಡಲಾಗಿದೆ. ಕನ್ನಡ ಚಿತ್ರರಂಗಕ್ಕೊಂದು ಕಲಾವಿದರ ಭವನ ಇರಬೇಕು ಎನ್ನುವುದು ಡಾ ರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರ ಬಹುವರ್ಷಗಳ ಆಸೆಯಾಗಿತ್ತು.

    ಆ ಆಸೆಯನ್ನ ರೆಬೆಲ್ ಸ್ಟಾರ್ ಅಂಬರೀಶ್ ಸಾರಥ್ಯದಲ್ಲಿ ಇಂದಿನ ಚಿತ್ರರಂಗ ನೆರವೇರಿಸಿತ್ತು. ಚಾಮರಾಜಪೇಟೆಯಲ್ಲಿ ಕಲಾವಿದರ ಅನೂಕೂಲಕ್ಕೆ ತಕ್ಕಂತೆ ದುಬಾರಿ ಭವನವನ್ನ ನಿರ್ಮಿಸಲಾಯಿತು. ಈ ಭವನಕ್ಕೆ ಅಣ್ಣಾವ್ರ ಹೆಸರು ಕೂಡ ಇಡಲಾಯಿತು.

    ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರುಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು

    ಆದ್ರೀಗ, ರಾಜ್ ಕುಮಾರ್ ಭವನಕ್ಕೆ ಮರುನಾಮಕರಣ ಮಾಡಲಾಗುತ್ತಿದೆ. ರಾಜ್ ಕುಮಾರ್ ಬದಲು ಅಂಬರೀಶ್ ಅವರ ಹೆಸರು ಇಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ನಿರ್ಮಾಪಕ ಹಾಗೂ ಅಂಬರೀಶ್ ಅವರ ಆಪ್ತ ರಾಕ್ಲೈನ್ ವೆಂಕಟೇಶ್ ಅವರು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ರಾಜ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

    ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್ ಅವರು, 'ರಾಜ್ ಕುಮಾರ್ ಅಭಿಮಾನಿಗಳು ನಮ್ಮ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಂಬಿ ಹೆಸರು ಇಡುವುದು ಭವನಕ್ಕಲ್ಲ

    ಅಂಬಿ ಹೆಸರು ಇಡುವುದು ಭವನಕ್ಕಲ್ಲ

    ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಅವರು ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದರು. ''ಕಲಾವಿದರ ಭವನದಲ್ಲಿರುವ ಆಡಿಟೋರಿಯಂಗೆ ಅಂಬರೀಶ್ ಅವರ ಹೆಸರು ಇಡಲು ನಿರ್ಧರಿಸಿದ್ದೇವೆ'' ಎಂದು. ಇದೇ ಮಾತನ್ನು ರಾಕ್ಲೈನ್ ಮತ್ತೆ ಫಿಲ್ಮಿಬೀಟ್ ಕನ್ನಡದ ಜೊತೆ ವಿವರಿಸುತ್ತಾ ''ಭವನದ ಒಳಗಡೆ ಇರುವ ಆಡಿಟೋರಿಯಂಗೆ ಅಂಬಿ ಹೆಸರು ಇಡುತ್ತಿರುವುದು'' ಎಂದು ಸ್ಪಷ್ಟಿಕರಿಸಿದ್ದಾರೆ.

    ಡಾ.ರಾಜ್ ಕಂಡಿದ್ದ ಕನಸನ್ನ ಅಂಬರೀಶ್ ಈಡೇರಿಸಿಬಿಟ್ಟರುಡಾ.ರಾಜ್ ಕಂಡಿದ್ದ ಕನಸನ್ನ ಅಂಬರೀಶ್ ಈಡೇರಿಸಿಬಿಟ್ಟರು

    ರಾಜ್ ಕುಮಾರ್ ಹೆಸರು ಬದಲಾಗಲ್ಲ

    ರಾಜ್ ಕುಮಾರ್ ಹೆಸರು ಬದಲಾಗಲ್ಲ

    ''ಕಲಾವಿದರ ಸಂಘದ ಭವನಕ್ಕೆ ಡಾ ರಾಜ್ ಕುಮಾರ್ ಭವನ ಎಂದು ಹೆಸರಿಟ್ಟಿದ್ದೇ ರೆಬೆಲ್ ಸ್ಟಾರ್ ಅಂಬರೀಶ್ ಅವರು. ಯಾವುದೇ ಸಮಯದಲ್ಲೂ ಮತ್ತೆ ಮರುನಾಮಕರಣ ಮಾಡುವ ಮಾತೇ ಇಲ್ಲ. ಇಂದು ಮುಂದೆ ಎಂದೆಂದೂ ಅದು ರಾಜ್ ಕುಮಾರ್ ಭವನ ಮಾತ್ರ. ಅರ್ಥವಾಗದೆ ಕೆಲವು ರಾಜ್ ಕುಮಾರ್ ಅಭಿಮಾನಿಗಳು ಇದೆಲ್ಲ ಮಾತನಾಡುತ್ತಿದ್ದಾರೆ'' ಎಂದು ಗೊಂದಲಕ್ಕೆ ರಾಕ್ಲೈನ್ ವೆಂಕಟೇಶ್ ತೆರೆ ಎಳೆದರು.

    ತಪ್ಪಾಗಿ ಅರ್ಥೈಸಿಕೊಂಡ ಅಣ್ಣಾವ್ರ ಫ್ಯಾನ್ಸ್

    ತಪ್ಪಾಗಿ ಅರ್ಥೈಸಿಕೊಂಡ ಅಣ್ಣಾವ್ರ ಫ್ಯಾನ್ಸ್

    ನವೆಂಬರ್ 24ನೇ ತಾರೀಖು ಆಡಿಟೋರಿಯಂಗೆ ಅಂಬರೀಶ್ ಹೆಸರು ಇಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೂ, ಕೆಲವು ಅಭಿಮಾನಿಗಳು ಆ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಉಂಟು ಮಾಡಿದ್ದಾರೆ. ಸದ್ಯಕ್ಕೆ ಕಲಾವಿದರ ಭವನದಲ್ಲಿರುವ ಆಡಿಟೋರಿಯಂಗೆ ಯಾರ ಹೆಸರು ಇಲ್ಲ. ಅಂಬಿಯ ಕೊಡುಗೆ ಮತ್ತು ಅವರನ್ನು ಸ್ಮರಿಸುವ ಉದ್ದೇಶದಿಂದ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.

    ಅಂಬಿ ಕೊಡುಗೆ, ಅಣ್ಣಾವ್ರ ಭವನ

    ಅಂಬಿ ಕೊಡುಗೆ, ಅಣ್ಣಾವ್ರ ಭವನ

    ನೀವು ಸರಿಯಾಗಿ ಗಮನಿಸಿದರೆ, ಕಲಾವಿದರ ಭವನದ ಮುಂದೆ ಡಾ ರಾಜ್ ಕುಮಾರ್ ಭವನ ಎಂದು ಮೊದಲು ಹೆಸರಿದೆ. ಅದರ ಕೆಳಗೆ ಕೊಡುಗೆ ರೆಬೆಲ್ ಸ್ಟಾರ್ ಅಂಬರೀಶ್ ಎಂದು ನಾಮಫಲಕ ಹಾಕಲಾಗಿದೆ. ರಾಜ್ ಕುಮಾರ್ ಮೇಲೆ ಅಂಬರೀಶ್ ಅವರಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದಕ್ಕೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ.

    English summary
    Producer rockline venkatesh gave clarification about kalavidara bhavana.
    Wednesday, November 20, 2019, 10:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X