ನಿರೀಕ್ಷೆಯಂತೆ ರಾಕ್ ಲೈನ್ ನಿರ್ಮಾಣದಲ್ಲಿ 'ಅರ್ಜುನ್ ರೆಡ್ಡಿ' ನಟನೆ.!

By Bharath Kumar

ತೆಲುಗು ನಟ ವಿಜಯ ದೇವರಕೊಂಡ ಕನ್ನಡ ಚಿತ್ರರಂಗದ ಜೊತೆ ಹೆಚ್ಚು ನಂಟು ಬೆಳಸಿಕೊಳ್ಳುತ್ತಿದ್ದಾರೆ. ಗಣೇಶ್ ಅಭನಯದ 'ಚಮಕ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿದ್ದರು. ಇನ್ನೋವೆಟಿವ್ ಫಿಲ್ಮ್ ಸಿಟಿ ಅಯೋಜಿಸುತ್ತಿರುವ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿದ್ದಾರೆ. 'ಕನ್ನಡ ಬಿಗ್ ಬಾಸ್' ವೇದಿಕೆ ಹಂಚಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದರು.

ಇಷ್ಟೆಲ್ಲಾ ಬೆಳವಣಿಗೆಗಳನ್ನ ನೋಡಿದ ಮಂದಿಗೆ ಒಂದು ಕುತೂಹಲವಿತ್ತು. ವಿಜಯ ದೇವರಕೊಂಡ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನ ಸಂಪಾದಿಸುತ್ತಿದ್ದಾರೆ. ಇಷ್ಟರಲ್ಲೇ ಸಿನಿಮಾ ಮಾಡಿದ್ರು, ಅಚ್ಚರಿಯಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.

ಬಹುಶಃ ಈ ನಿರೀಕ್ಷೆ ಈಗ ನಿಜವಾಗಿದೆ. ವಿಜಯ ದೇವರಕೊಂಡ ಅವರ ಜೊತೆ ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಿನಿಮಾ ಮಾಡ್ತಿದ್ದಾರೆ. ಅರೇ, ರಾಕ್ ಲೈನ್ ಅಂದಾಕ್ಷಣ ಇದು ಕನ್ನಡ ಸಿನಿಮಾ ಎಂದುಕೊಳ್ಳಬೇಡಿ. ವಿಜಯ ದೇವರಕೊಂಡ ಮತ್ತು ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಮೂಡಿಬರಲಿರುವುದು ತೆಲುಗು ಸಿನಿಮಾ.

Rockline Venkatesh film with Vijaya Devarakoda

ಅಂದ್ಹಾಗೆ, ವಿಜಯ ದೇವರಕೊಂಡ ಮತ್ತು ರಾಕ್ ಲೈನ್ ಸಂಬಂಧ ತುಂಬ ಹಳೆದು. ದೇವರಕೊಂಡ ಅವರ ಚೊಚ್ಚಲ ಸಿನಿಮಾ 'ಪೆಳ್ಳಿಚೂಪುಲು' ಚಿತ್ರದ ವೇಳೆಯೇ ಒಂದು ಸಿನಿಮಾ ಮಾಡುವ ಬಗ್ಗೆ ಮಾತುಕತೆ ಆಗಿತ್ತಂತೆ. ಆದ್ರೆ, ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಅದಾದ ಬಳಿಕ 'ಅರ್ಜುನ್ ರೆಡ್ಡಿ' ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಇದೀಗ, ವಿಜಯ ದೇವರಕೊಂಡ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿಕೊಂಡಿರುವ ನಟ ಆಗಿದ್ದಾರೆ.

ಸದ್ಯ, ಈ ಚಿತ್ರದ ಕೆಲಸ ನಡೆಯುತ್ತಿದ್ದು, ಈ ವರ್ಷವೇ ಸೆಟ್ಟೇರುವ ಸಾಧ್ಯತೆ ಇದೆ. ಇನ್ನುಳಿದಂತೆ ಚಿತ್ರದ ನಿರ್ದೇಶಕ ಯಾರು? ನಾಯಕಿ ಯಾರು ಎಂಬುದರ ಬಗ್ಗೆ ಮಾಹಿತಿ ಇನ್ನು ಸಿಕ್ಕಿಲ್ಲ.

More from Filmibeat

English summary
Kannada producer Rockline Venkatesh, a film is planned with Vijaya Devarakoda, which he says was an old commitment, done before 'Arjun Reddy'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X