'ಕಾಟೇರ' ಕಲೆಕ್ಷನ್ ನಂಬರ್‌ ಗೇಮ್‌ಗೆ ನನಗೆ 4 ನೋಟಿಸ್ ಬಂದಿದೆ": ರಾಕ್‌ಲೈನ್ ವೆಂಕಟೇಶ್

'ಕಾಟೇರ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಎಲೆಕ್ಷನ್ ಮಾಡಿದೆ ಎಂದು ಭಾರೀ ಸುದ್ದಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ಭಾರೀ ಚರ್ಚೆ ನಡೆದಿತ್ತು. ಕೆಲವರು 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿಲ್ಲ ಎಂದರು. ಆದರೆ ಸಿನಿಮಾ ಸೂಪರ್ ಹಿಟ್ ಆಗಿರುವುದಂತೂ ನಿಜ. ಕಲೆಕ್ಷನ್ ಬಗ್ಗೆ ಮಾತ್ರ ನಿಖರ ಮಾಹಿತಿ ಇಲ್ಲ.

ಪ್ರಸನ್ನ ಚಿತ್ರಮಂದಿರದಲ್ಲಿ 'ಕಾಟೇರ' 50 ದಿನಗಳ ಸಂಭ್ರಮಾಚರಣೆ ನಡೀತು. ನಟ ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ವೇದಿಕೆಯಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಮತ್ತೊಮ್ಮೆ ಸಿನಿಮಾ ಕಲೆಕ್ಷನ್ ಲೆಕ್ಕದ ಬಗ್ಗೆ ಮಾತನಾಡಿದ್ದಾರೆ.

Rockline Venkatesh once again Reacts over Darshans Kaatera collection on 50 days celebration

"216 ಕೋಟಿ ರೂ. 316 ಕೋಟಿ ರೂ.ನಾ? ಕಾಟೇರ ಕಲೆಕ್ಷನ್ ಬಗ್ಗೆ ಮಾಡಿದ ನಂಬರ್‌ ಗೇಮ್‌ಗೆ ನನಗೆ 4 ನೋಟಿಸ್ ಬಂದಿದೆ. ಮುಂಚೆ ಇನ್‌ಕಂ ಟ್ಯಾಕ್ಸ್‌ನವರು ಮಾತ್ರ ಬರ್ತಿದ್ರು. ಈಗ ಎನ್‌ಫೋರ್ಸಿಸ್‌ ಅಧಿಕಾರಿಗಳು ಬರುತ್ತಿದ್ದಾರೆ ಎಂದು ನಕ್ಕರು. ನಾನು ಅದಕ್ಕೆ ಏನು ಮಾಡ್ದೆ ಅಂದ್ರೆ, ಯಾರು ಈ ರೀತಿ ಕಲೆಕ್ಷನ್ ನಂಬರ್ ಕೊಟ್ಟರೋ ಅವರ ಹೆಸರು, ನಂಬರ್ ಅವರಿಗೆ ಕೊಟ್ಟಿದ್ದೀನಿ. ಕೂಡಲೇ ಅವರನ್ನು ಕರೆಸಿ ಅಧಿಕಾರಿಗಳು ಲೆಕ್ಕ ಕೇಳ್ತಾರೆ"

"ನಾನು ಕೊಡಬೇಕಾದ ಲೆಕ್ಕ ಕೊಟ್ಟೇ ಕೊಡುತ್ತೇನೆ. ನನ್ನ ಕಚೇರಿ ಯಾವಾಗಲೂ ತೆರೆದಿರುತ್ತದೆ. ಯಾರು ಬೇಕಾದರೂ ಬಂದು ನನ್ನ ಸಿನಿಮಾ ಕಲೆಕ್ಷನ್ ಎಲ್ಲೆಲ್ಲಿ ಎಷ್ಟೆಷ್ಟು ಆಗಿದೆ? ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನೀವು ಬಂದು ನೋಡಬಹುದು" ಎಂದರು.

ಇದಕ್ಕೂ ಮುನ್ನ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ರಾಕ್‌ಲೈನ್ ವೆಂಕಟೇಶ್ ಮಾತನಾಡಿದರು. "ಬೇರೆ ನಟರು, ಪ್ಯಾನ್ ಇಂಡಿಯಾ ಸಬ್ಜೆಕ್ಟ್ ನನ್ನ ಬಳಿ ಕಳುಹಿಸುತ್ತಾರೆ. ಆದರೆ ದರ್ಶನ್ ಮಾತ್ರ ಪ್ಯೂರ್ ಕನ್ನಡ ಸಬ್ಜೆಕ್ಟ್ ಬೇಕು. ಕನ್ನಡ ಜನಕ್ಕೆ ಮಾತ್ರ ಮೊದಲು ಸಿನಿಮಾ ಮಾಡೋಣ ಎನ್ನುತ್ತಾರೆ. ಇವರಿಗೆ ಇಷ್ಟವಾದರೆ ಇಡೀ ದೇಶಕ್ಕೆ ಇಷ್ಟವಾಗುತ್ತದೆ ಎನ್ನುತ್ತಾರೆ" ಎಂದು ರಾಕ್‌ಲೈನ್ ವೆಂಕಟೇಶ್ ವಿವರಿಸಿದರು.

Rockline Venkatesh once again Reacts over Darshans Kaatera collection on 50 days celebration

"ಮೊದಲು ಮದಕರಿ ಸಿನಿಮಾ ಮಾಡಲು ಮುಂದಾಗಿದ್ದೆವು. ಬಳಿಕ ಕಾಟೇರ ಮಾಡುವಂತಾಯಿತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು" ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದರು. ಬಳಿಕ ದರ್ಶನ್ ಮೈಕ್ ತೆಗೆದುಕೊಂಡು ' ರಾಜವೀರ ಮದಕರಿ ನಾಯಕ' ಸಿನಿಮಾ ನಿಂತಿದ್ದು ಯಾಕೆ ಎಂದು ಹೇಳಿದರು.

"ಮದಕರಿ ಬದಲು 'ಕಾಟೇರ' ಸಿನಿಮಾ ಮಾಡಿದ್ದು. ಆ ಸಿನಿಮಾ ಮಾಡ್ತಿದ್ವಿ. ಯಾಕೋ ಅದು ನಮ್ಮ ಹಿಡಿತಕ್ಕೆ ಸಿಗಲಿಲ್ಲ. ಬೇಸರ ಮಾಡಿಕೊಳ್ಳಬೇಡಿ. ಒಬ್ಬ ಮಹಾನ್ ನಾಯಕನ ಬಗ್ಗೆ ಸಿನಿಮಾ ಮಾಡುವಾಗ ಆ ಕಥೆ ಹಿಡಿತಕ್ಕೆ ಸಿಗಬೇಕು. ಆಗ ಮಾತ್ರ ಸಿನಿಮಾ ಮಾಡಲು ಸಾಧ್ಯ. ನಿರ್ಮಾಪರನ್ನು ಒಮ್ಮೆ ಕರೆದು ಕೇಳಿದೆ. ನೀವು ಒಪ್ಪಿದರೆ ಮಾಡೋಣ, ಇಲ್ಲ ಅಂದ್ರೆ ಬೇಡ ಎಂದೆ" ಹಾಗಾಗಾಗಿ ಆ ಸಿನಿಮಾ ನಿಲ್ತು ಎಂದು ದರ್ಶನ್ ಸ್ಪಷ್ಟನೆ ನೀಡಿದರು.

ಡಿಸೆಂಬರ್ 29ಕ್ಕೆ ತೆರೆಕಂಡಿದ್ದ 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು. ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಶಕ್ತಿ ತುಂಬಿತ್ತು.

More from Filmibeat

English summary
Rockline Venkatesh opens upa again Kaatera collection reports;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X