ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್

Recommended Video

ಸಂಗೊಳ್ಳಿ ರಾಯಣ್ಣ, ದುರ್ಯೋಧನ ಆದ್ಮೇಲೆ ಮತ್ತೊಂದು ವಿಶೇಷ ಪಾತ್ರದಲ್ಲಿ ದರ್ಶನ್..! | Filmibeat Kannada

ಕನ್ನಡದಲ್ಲಿ ಸದ್ಯ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಅಂದರೆ ಮೊದಲು ನೆನಪಿಗೆ ಬರುವ ನಟ ದರ್ಶನ್ ಇರಬೇಕು. ಯಾಕೆಂದರೆ, ಈಗ ಅವರಿಗೆ ಬರುತ್ತಿರುವ ಆಫರ್ ಗಳಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳು ಹೆಚ್ಚಾಗುತ್ತಿವೆ.

ಈಗಾಗಲೇ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮಾಡಿ ಕನ್ನಡಿಗರಿಂದ ಜೈಕಾರ ಹಾಕಿಸಿಕೊಂಡ ದರ್ಶನ್ ಇದೀಗ 'ಕುರುಕ್ಷೇತ್ರ' ಚಿತ್ರವನ್ನು ಸಹ ಮಾಡುತ್ತಿದ್ದಾರೆ. ಇದರ ಬಳಿಕ ಈಗ ಮತ್ತೆ ದರ್ಶನ್ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.

ಅಂದಹಾಗೆ, ದರ್ಶನ್ ಅವರ ಮುಂದಿನ ಐತಿಹಾಸಿಕ ಸಿನಿಮಾ ಯಾವುದು? ಎಂಬ ವಿವರ ಮುಂದಿದೆ ಓದಿ..

'ವೀರ ಮದಕರಿನಾಯಕ'ನಾದ ಚಾಲೆಂಜಿಂಗ್ ಸ್ಟಾರ್

'ವೀರ ಮದಕರಿನಾಯಕ'ನಾದ ಚಾಲೆಂಜಿಂಗ್ ಸ್ಟಾರ್

ನಟ ದರ್ಶನ್ ಸಂಗೊಳ್ಳಿ ರಾಯಣ್ಣ ಹಾಗೂ ಧುರ್ಯೋಧನನ ಪಾತ್ರಗಳ ಬಳಿಕ ಈಗ 'ವೀರ ಮದಕರಿನಾಯಕ'ನಾಗುವ ಸಮಯ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಮದಕರಿ ನಾಯಕರ ಜೀವನಾಧಾರಿತ ಸಿನಿಮಾ ಬರುತ್ತಿದ್ದು, ಇದಕ್ಕೆ ದರ್ಶನ್ ನಾಯಕರಗುವ ಸಾಧ್ಯತೆ ಇದೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣ

ರಾಕ್ ಲೈನ್ ವೆಂಕಟೇಶ್ ನಿರ್ಮಾಣ

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಮಹಾ ಸಿನಿಮಾವನ್ನು ಮಾಡುವ ಕನಸು ಹೊಂದಿದ್ದಾರೆ. ರಾಕ್ ಲೈನ್ ಸಿನಿಮಾ ಅಂದಮೇಲೆ ಇದೊಂದು ಅದ್ದೂರಿ ಚಿತ್ರ ಆಗಿರಲಿದೆ. ಈ ಚಿತ್ರ ತಮ್ಮ ಬ್ಯಾನರ್ ಹಾಗೂ ದರ್ಶನ್ ಇಬ್ಬರಿಗೆ ಒಳ್ಳೆಯ ಹೆಸರು ತಂದುಕೊಡಲಿದೆ ಎಂಬ ನಂಬಿಕೆಯಲ್ಲಿ ರಾಕ್ ಲೈನ್ ಇದ್ದಾರೆ.

ಚಿತ್ರಕಥೆ ಕೆಲಸ ನಡೆಯುತ್ತಿದೆ

ಚಿತ್ರಕಥೆ ಕೆಲಸ ನಡೆಯುತ್ತಿದೆ

ಈಗಾಗಲೇ ಈ ಸಿನಿಮಾದ ಚಿತ್ರಕಥೆ ಕೆಲಸ ಶುರುವಾಗಿದೆಯಂತೆ. ಬಿ ಆರ್ ಮೇಣು ಚಿತ್ರದುರ್ಗದಲ್ಲಿ ಕುಳಿತು ಸಿನಿಮಾದ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಲಾಂಚ್ ಆಗುವ ಸಾಧ್ಯತೆ ಇದೆ. ಸಿಪ್ಟ್ ಕೆಲಸ ಮುಗಿದ ಮೇಲೆ ಚಿತ್ರದ ಒಂದೊಂದೆ ವಿಷಯ ತಿಳಿಯಲಿದೆ.

ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್

ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್

ಈ ಚಿತ್ರಕ್ಕೆ ಮುಂಚೆ ಭಗತ್ ಸಿಂಗ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅವರ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ದರ್ಶನ್ ಭಗತ್ ಸಿಂಗ್ ಆಗಿ ಆರ್ಭಟಿಸಲಿದ್ದಾರೆ. ಈ ಚಿತ್ರದ ದರ್ಶನ್ ಭಾಗದ ಚಿತ್ರೀಕರಣ ಸದ್ಯ ನಡೆಯುತ್ತಿದೆ.

ದರ್ಶನ್ ಮುಂದಿನ ಸಿನಿಮಾಗಳು

ದರ್ಶನ್ ಮುಂದಿನ ಸಿನಿಮಾಗಳು

ದರ್ಶನ್ ಸದ್ಯ 'ಯಜಮಾನ' ಹಾಗೂ 'ಒಡೆಯ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ತರುಣ್ ಸುಧೀರ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Kannada producer Rockline Venkatesh planning to do 'Veera Madakari Nayaka' bipoc movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X