Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಕುಮಾರಸ್ವಾಮಿ ವಿರುದ್ಧ ರಾಕ್ ಲೈನ್ ಗರಂ
ನಟಿ, ಮಂಡ್ಯ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಜಗಳ ತಾರಕಕ್ಕೇರಿದೆ. ಕೆ ಆರ್ ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಗೆ ವಿಚಾರವಾಗಿ ಸುಮಲತಾ ಮತ್ತು ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿದೆ. ಇದೀಗ ನಿರ್ಮಾಪಕ, ಅಂಬರೀಶ್ ಕುಟುಂಬದ ಅತ್ಯಾಪ್ತ ರಾಕ್ ಲೈನ್ ವೆಂಕಟೇಶ್ ಮಧ್ಯಪ್ರವೇಶ ಮಾಡಿದ್ದಾರೆ.
ಅಂಬರೀಶ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕುಮಾರಸ್ವಾಮಿ ವಿರುದ್ಧ ರಾಕ್ ಲೈನ್ ವೆಂಕಟೇಶ್ ಗರಂ ಆಗಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, 'ಕುಮಾರಸ್ವಾಮಿ ನನಗೆ ರಾಜಕೀಯದಿಂದ ಪರಿಚಯ ಆದವರಲ್ಲ, ಸಿನಿಮಾದಿಂದ ಪರಿಚಯ. ಅವರನ್ನು ನಾನು ಕುಮಾರಣ್ಣ ಎಂದು ಕರೆಯುತ್ತೇನೆ, ಅವರು ನನಗೆ ವೆಂಕಟೇಶ್ ಅಣ್ಣ ಎಂದು ಕರೆಯುತ್ತಾರೆ. ನಾನು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ. ಆದರೆ ಅಂಬರೀಶ್ ಬಗ್ಗೆ ಮಾತನಾಡುವುದು ಸರಿಯಲ್ಲ' ಎಂದಿದ್ದಾರೆ.
ಸುಮಲತಾ
v/s
ಕುಮಾರಸ್ವಾಮಿ:
ಅಂಬರೀಶ್
ಹೆಸರು
ಬಳಕೆ
ಕುಮಾರಸ್ವಾಮಿ ಅವರೇ ನಿಮಗೆ ಒಳ್ಳೆ ಹೆಸರಿದೆ, ಸಾವಿನ ರಾಜಕಾರಣ ಮಾಡಿ ಹೆಸರು ಕೆಡಿಸಿಕೊಳ್ಳಬೇಡಿ ಎಂದು ರಾಕ್ ಲೈನ್ ಸಲಹೆ ನೀಡಿದ್ದಾರೆ. ಮುಂದೆ ಓದಿ..

ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ
ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ಏನು ಮೋಸ ಮಾಡಿದೆ ನಿಮಗೆ. ಚಿತ್ರರಂಗದಿಂದ ಏನು ಲಾಭ ಪಡಿದ್ದೀರಿ ಎನ್ನುವುದು ನಿಮಗೆ ಗೊತ್ತು. ನಿಮ್ಮ ಮನೆಯವರು ಸಹ ಚಿತ್ರರಂಗದಲ್ಲಿ ಸುಮಾರು ಜನ ಇದ್ದಾರೆ. ಅದನ್ನು ಮರಿಬಾರ್ದು ನೀವು. ಮುಖ್ಯಮಂತ್ರಿ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದಾರೆ. ಒಂದು ಕೆಲಸ ಮಾಡಿದ್ದೀರಾ? ನಾವು ನಿಮ್ಮನ್ನು ಕೇಳಿದ್ವಾ, ನಿಮ್ಮ ಮನಸ್ಥಿತಿ ಏನು ಅಂತ ಗೊತ್ತು. ನಾವು ನಿಮ್ಮನ್ನ ಕೇಳಲ್ಲ" ಎಂದು ರಾಕ್ ಲೈನ್ ಆಕ್ರೋಶ ವ್ಯಕ್ತಪಡಿಸಿದ್ರು.
'ಅಂಬಿ
ಸ್ಮಾರಕ
ಮನವಿ
ಪತ್ರ
ಮುಖಕ್ಕೆ
ಎಸೆದು
ಅವಮಾನ
ಮಾಡಿದ್ರು'

ಸಾವಿನ ರಾಜಕಾರಣ ಯಾಕೆ ಮಾಡುತ್ತೀರಿ?
ಅಂಬರೀಶ್ ಸತ್ತಾಗ ನಾವು ಮಂಡ್ಯಗೆ ಕರೆದುಕೊಂಡು ಹೋಗಿದ್ದು ಅಂತ ಹೇಳಿದ್ದೀರಿ. ನನ್ನ ಬಳಿ ಸಕ್ಷಿ ಇದೆ. ಅಭಿ ಒತ್ತಾಯ ಮಾಡಿ ಮಂಡ್ಯಗೆ ಕರೆದುಕೊಂಡು ಹೋಗಬೇಕು ಎಂದು ಹೇಳುತ್ತಿದ್ದಾರೆ ಅಂತ ನೀವೆ ಹೇಳಿದ್ದೀರಿ. ನಾನು ಪಕ್ಕದಲ್ಲೇ ನಿಂತಿದ್ದೆ. ಸಾವಿನ ರಾಜಕಾರಣ ಯಾಕೆ ಮಾಡುತ್ತಿದ್ದೀರಿ? ನಿಮಗೆ ಒಳ್ಳೆಯ ಹೆಸರಿದೆ, ಅದನ್ನು ಯಾಕೆ ಕೆಡಿಸಿಕೊಳ್ಳುತ್ತೀರಿ" ಎಂದು ರಾಕ್ ಲೈನ್ ಗುಡುಗಿದ್ರು.

ದಾರಿಲಿ ಹೋಗೊ ದಾಸಪ್ಪ ಸಿಎಂ ಆಗಿದ್ದರು ಮಾಡುತ್ತಿದ್ರು
"ಸರ್ಕಾರಿ ಗೌರವಗಳೊಂದಿಗೆ ಕುಳುಹಿಸಿಸಲಾಗಿದೆ ಎನ್ನುತ್ತೀರಲ್ಲಾ.
ದಾರಿಯಲ್ಲಿ ಹೋಗುವ ದಾಸಪ್ಪ ಸಿಎಂ ಆಗಿದ್ದರು ಇಂಥ ಕೆಲಸ ಮಾಡೇ ಮಾಡುತ್ತಿದ್ರು. ಸಂಚಾರಿ ವಿಜಯ್ ಸತ್ತಾಗನೂ ಸರ್ಕಾರಿ ಗೌರವದಿಂದ ಕಳುಹಿಸಿದ್ದಾರೆ. ನಿಮ್ಮ ಸ್ವಂತ ದುಡ್ಡಿನಿಂದ ಏನು ಮಾಡಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Recommended Video

ಈ ರೀತಿ ಮಾತನಾಡಲು ಅಧಿಕಾರ ಕೊಟ್ಟಿದ್ದು ಯಾರು?
"ಅಂಬರೀಶ್ ಎಂದರೆ ನಮಗೆ ಪ್ರಾಣ. ಚಿತ್ರರಂಗದ ಮೇಲೆ, ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡುತ್ತಿದ್ದೀರಾ. ಅವರು ಹೋದಮೇಲೆ ಹೀಗೆಲ್ಲ ಮಾತನಾಡವುದು ಎಷ್ಟು ಸರಿ. ಆ ಯಮ್ಮನ ಗಂಡ ಮಿನಿಸ್ಟರ್ ಆಗಿದ್ದಾಗಾ ಏನೆಲ್ಲ ಮಾಡಿದ್ರು ಅಂತ ಜೊತೆಯಲ್ಲಿರೊರನ್ನ ಕೇಳಿ ಗೊತ್ತಾಗುತ್ತೆ ಅಂತೀರಿ, ಅದೆ ಸಮಯದಲ್ಲಿ ನನ್ನ ಸ್ನೇಹಿತ ಎನ್ನುತ್ತಾರೆ. ಇದರ ಅರ್ಥ ಗೊತ್ತಾಗುತ್ತಿಲ್ಲ. ಒಂದೆಡೆ ಬೈಯೋದು ಮತ್ತೊಂದೆಡೆ ಹೊಗಳೋದು. ಈ ರೀತಿ ಮಾತನಾಡಲು ಅಧಿಕಾರ ಕೊಟ್ಟಿದ್ದು ಯಾರು" ಎಂದು ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.