For Quick Alerts
  ALLOW NOTIFICATIONS  
  For Daily Alerts

  ಅನಿತಕ್ಕನ ಕೈ ಹಿಡಿದು ಕರ್ಕೊಂಡು ಬಂದಿದ್ದೀನಿ, ಗಂಡಸ್ತನದ ಹೋರಾಟ ಮಾಡೋಣ: ರಾಕ್ ಲೈನ್ ಗರಂ

  By ಫಿಲ್ಮಿ ಬೀಟ್ ಡೆಸ್ಕ್
  |

  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ನಿರ್ಮಾಪಕ, ಅಂಬರೀಶ್ ಕುಟುಂಬದ ಅತ್ಯಾಪ್ತ ರಾಕ್ ಲೈನ್ ನಡುವಿನ ವಾಗ್ವಾದ ಮುಂದುವರೆದಿದೆ. ರೆಬಲ್ ಸ್ಟಾರ್ ಅಂಬರೀಶ್ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ಗರಂ ಆಗಿದ್ದಾರೆ. ಅಲ್ಲದೆ ತನ್ನ ಮತ್ತು ಸುಮಲತಾ ನಡುವೆ ಕೆಟ್ಟದಾಗಿ ಸಂಬಂಧ ಕಟ್ಟಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ರಾಕ್ ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದರು.

  ರಾಕ್ ಲೈನ್ ಹೇಳಿಕೆ ಬೆನ್ನಲ್ಲೇ ಈ ಬಗ್ಗೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ. ಅಲ್ಲದೆ ರಾಕ್ ಲೈನ್ ವೆಂಕಟೇಶ್ ಮತ್ತು ಸುಮಲತಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಇಂದು (ಜುಲೈ 12) ಮಾಧ್ಯಮದವರ ಜೊತೆ ಮಾತನಾಡಿದ ರಾಕ್ ಲೈನ್, ಅನಿತಕ್ಕನ ಜೊತೆಯೂ ನನ್ನ ಫೋಟೋಗಳಿವೆ, ಅವರ ಕೈ ಹಿಡಿದು ಕರ್ಕೊಂಡು ಬಂದಿದ್ದೀನಿ, ಇದನ್ನೆಲ್ಲ ಯಾವ ರೀತಿ ಕಲ್ಪನೆ ಮಾಡಿಕೊಳ್ಳುತ್ತೀರಿ ಎಂದು ರಾಕ್ ಲೈನ್ ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ..

  ನನ್ನ, ಸುಮಲತಾ ನಡುವೆ ಸಂಬಂಧ ಕಟ್ಟಲು HDK ಯತ್ನಿಸಿದ್ರು; ರಾಕ್ ಲೈನ್ ಗಂಭೀರ ಆರೋಪನನ್ನ, ಸುಮಲತಾ ನಡುವೆ ಸಂಬಂಧ ಕಟ್ಟಲು HDK ಯತ್ನಿಸಿದ್ರು; ರಾಕ್ ಲೈನ್ ಗಂಭೀರ ಆರೋಪ

  ಅನಿತಕ್ಕನ ಜೊತೆಯೂ ನನ್ನ ಫೋಟೋಗಳಿವೆ

  ಅನಿತಕ್ಕನ ಜೊತೆಯೂ ನನ್ನ ಫೋಟೋಗಳಿವೆ

  "ಕುಮಾರಸ್ವಾಮಿ ಸುದ್ದಿವಾಹಿನಿ ಮಾಡುವಾಗ, ನಾನು ತುಂಬಾ ಬ್ಯುಸಿ ಇರುತ್ತೇನೆ, ನಮ್ಮ ಮನೆಯವರು ಅನಿತಾ ಇರುತ್ತಾರೆ ಅಂತ ಹೇಳಿದ್ರು. ನಾನು ಅವರನ್ನು ಅನಿತಕ್ಕ ಅಂತಾನೇ ಕರೆಯೋದು. ಅವರ ಜೊತೆ ನಾವು ನೂರಾರು ಸರಿ ಮಾತನಾಡಿದ್ದೇವೆ. ಅವರ ಜೊತೆಗಿನ ಫೋಟೋಗಳು ಇವೆ. ಸಿಎಂ ಆದ ಬಳಿಕ ಇಬ್ಬರೇ ಮಾತನಾಡುತ್ತಿದ್ವಿ, ಇದಕ್ಕೆಲ್ಲ ತಪ್ಪಾಗಿ ಕಲ್ಪನೆ ಮೂಡಿಸಲು ಆಗುತ್ತಾ" ಎಂದು ರಾಕ್ ಲೈನ್ ಪ್ರಶ್ನೆ ಮಾಡಿದ್ದಾರೆ.

  ನಿಮ್ಮ ಮರ್ಯಾದೆ ಹೋಗುತ್ತೆ ಅಷ್ಟೆ

  ನಿಮ್ಮ ಮರ್ಯಾದೆ ಹೋಗುತ್ತೆ ಅಷ್ಟೆ

  "ಸುಮಲತಾ ಜೊತೆ ಜೊತೆ ಯಾರಾದರೂ ಇದ್ದೇ ಇರುತ್ತೇವೆ. ಅವರಿಗೆ ಮೆಟ್ಟಿಲು ಇಳಿಯಲು ಆಗದೆ ಇರುವಾಗ ಕೈ ಹಿಡಿದು ಕರೆದುಕೊಂಡು ಬಂದಿದ್ದೇನೆ, ಫ್ಲೈಟ್‌ನಲ್ಲಿ ಮೆಟ್ಟಿಲು ಇಳಿಯಲು ಆಗಲ್ಲ ಆಗೆಲ್ಲ ಕೈ ಹಿಡಿದು ಕರೆದುಕೊಂಡು ಬಂದಿದ್ದೇನೆ. ಇದನ್ನೆಲ್ಲ ಕೆಟ್ಟ ಭಾವನೆ, ಕೆಟ್ಟ ವಿಷಯ ಅಂತ ಸಮಾಜಕ್ಕೆ ತಿಳಿಸಲು ಹೋದರೆ ಮರ್ಯಾದೆ ಹೋಗೋದು ನಿಮ್ಮದು" ಎಂದು ತಿವಿದಿದ್ದಾರೆ.

  ಅನಿತಕ್ಕನ ಕೈ ಹಿಡಿದು ಕರ್ಕೊಂಡು ಬಂದಿದ್ದೀನಿ

  ಅನಿತಕ್ಕನ ಕೈ ಹಿಡಿದು ಕರ್ಕೊಂಡು ಬಂದಿದ್ದೀನಿ

  "ಮೆಟ್ಟಿಲು ಇಳಿಯುವಾಗ ಅನಿತಾ ಕುಮಾರಸ್ವಾಮಿ ಅವರ ಕೈ ಹಿಡಿದು ಕರ್ಕೊಂಡು ಬಂದಿದ್ದೀನಿ. ಇದನ್ನೆಲ್ಲ ಯಾವ ರೀತಿ ಕಲ್ಪನೆ ಮಾಡಿಕೊಳ್ಳುತ್ತೀರಿ. ಗಂಡಸ್ತನದ ಹೋರಾಟ ಮಾಡೋಣ, ತಪ್ಪೇನಿಲ್ಲ. ರಾಜ್ಯದಲ್ಲಿ ಒಂದು ಡ್ಯಾಮ್ ಮತ್ತು ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸುಮಲತಾ ಧ್ವನಿ ಎತ್ತಿದ್ದಾರೆ. ಅದರ ವಿಚಾರವಾಗಿ ಕಿತ್ತಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಮಾತನಾಡಲಿ. ನಾನು ರಾಜಕೀಯ ಯಾವತ್ತು ಮಾತನಾಡಿಲ್ಲ" ಎಂದಿದ್ದಾರೆ.

  ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada
  ನಾನು ಯಾರ ವಿರುದ್ಧವು ಮಾತನಾಡಿಲ್ಲ

  ನಾನು ಯಾರ ವಿರುದ್ಧವು ಮಾತನಾಡಿಲ್ಲ

  "ಚುನಾವಣೆಯಿಂದ ತೆಗೆದುಕೊಳ್ಳಿ, ನಾನು ಯಾರ ವಿರುದ್ಧವಾಗಿಯೂ ಮಾತನಾಡಿಲ್ಲ. ಎಲ್ಲರೂ ನನಗೆ ಉತ್ತಮ ಸ್ನೇಹಿತರು. ಒಂದು ಸರಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ ಅಂದ್ರೆ ಅವರ ಋಣದಲ್ಲಿ ನಾವು ಇದ್ದಹಾಗೆ. ಆ ರೀತಿಯ ಭಾವನೆ ನನ್ನದು. ಬೈದರು ಹೋಗಲಿ ಎನ್ನುವವನು ನಾನು. ಇದನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ. ಇಬ್ಬರೇ ಕುಳಿತುಕೊಂಡು ಮಾತನಾಡಿ. ಜನರಿಗೆ ಅರ್ಥ ಆಗಲಿ. ಮುಕ್ತಾಯಕ್ಕೆ ನಾಂದಿ ಮಾಡಿ ಮುಗಿಯುತ್ತೆ. ಉಗುರಲ್ಲಿ ಹೋಗುವುದನ್ನು ಕೊಡಲಿ ಯಾಕೆ ತೆಗೆದುಕೊಳ್ಳುತ್ತೀರಿ" ಎಂದು ರಾಕ್ ಲೈನ್ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.

  English summary
  Producer Rockline Venkatesh reaction to photo with Sumalatha post goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X