ರಾಕ್ ಲೈನ್ ವೆಂಕಟೇಶ್ ಅವರಿಗೆ ದರ್ಶನ್ ಫ್ಯಾನ್ಸ್ ಹಿಂಸೆ ನೀಡುತ್ತಿದ್ದಾರಂತೆ
Recommended Video
''ದರ್ಶನ್ ಫ್ಯಾನ್ಸ್ ನನಗೆ ಹಿಂಸೆ ನೀಡುತ್ತಿದ್ದಾರೆ'' ಎಂದು ನಗುತ್ತಾ ಹೇಳಿದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ 'ಕುರುಕ್ಷೇತ್ರ' ಸಿನಿಮಾದ ವಿತರಣೆ ಮಾಡುತ್ತಿದ್ದಾರೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇದೆ. ಚಿತ್ರಕ್ಕೆ ಇರುವ ದೊಡ್ಡ ಕ್ರೇಜ್ ಅನ್ನು ಈ ರೀತಿ ತಮ್ಮ ಮಾತುಗಳ ಮೂಲಕ ರಾಕ್ ಲೈನ್ ವೆಂಕಟೇಶ್ ವಿವರಿಸಿದ್ದಾರೆ.
ದರ್ಶನ್ ಸಿನಿಮಾಗಳು ಎಂದ ಮೇಲೆ ಕ್ರೇಜ್ ಇದ್ದೇ ಇರುತ್ತದೆ, ಅದರಲ್ಲಿಯೂ 'ಕುರುಕ್ಷೇತ್ರ' ಸಿನಿಮಾಗೆ ಪ್ರದರ್ಶಕರಿಂದ ದೊಡ್ಡ ಡಿಮ್ಯಾಂಡ್ ಬಂದಿದೆಯಂತೆ. ಈ ಬಗ್ಗೆ ರಾಕ್ ಲೈನ್ ವೆಂಕಟೇಶ್ 'ಕುರುಕ್ಷೇತ್ರ' ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ.

ಟಿಕೆಟ್ ಬೇಕು ಎಂದು ಹಿಂಸೆ ನೀಡುತ್ತಿದ್ದಾರೆ
'ಕುರುಕ್ಷೇತ್ರ' ಸಿನಿಮಾದ ಬಿಡುಗಡೆ ದಿನ ಹತ್ತಿರ ಬರುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳಿಂದ ಟಿಕೆಟ್ ಗಾಗಿ ರಾಕ್ ಲೈನ್ ವೆಂಕಟೇಶ್ ರಿಗೆ ಒತ್ತಡ ಹಾಕುತ್ತಿದ್ದರಂತೆ. ಇದನ್ನು ಖುಷಿಯಿಂದಲೇ ಹೇಳಿಕೊಂಡ ರಾಕ್ ಲೈನ್ ''ನಮ್ಮ ಆಫೀಸ್ ಗೆ ಪ್ರತಿ ದಿನ ದರ್ಶನ್ ಅವರ ಅನೇಕ ಅಭಿಮಾನಿಗಳು ಬಂದು ಟಿಕೆಟ್ ನೀಡಿ ಎಂದು ಹಿಂಸೆ ನೀಡುತ್ತಿದ್ದರು. ಅದಕ್ಕೆ ಆನ್ ಲೈನ್ ಬುಕ್ಕಿಂಗ್ ಅನ್ನು ಅದಷ್ಟು ಬೇಗ ಶುರು ಮಾಡಲಾಗಿದೆ.'' ಎಂದು ತಿಳಿಸಿದ್ದಾರೆ.

ಅದಕ್ಕೆ ಆನ್ ಲೈನ್ ಬುಕ್ಕಿಂಗ್ ಬೇಗ ಶುರುವಾಯ್ತು
ಕಳೆದ ಶನಿವಾರ ರಾತ್ರಿಯಿಂದ 'ಕುರುಕ್ಷೇತ್ರ' ಚಿತ್ರದ ಟಿಕೆಟ್ ಬುಕ್ಕಿಂಗ್ ಆನ್ ಲೈನ್ ನಲ್ಲಿ ಶುರುವಾಗಿದೆ. ಸದ್ಯಕ್ಕೆ, ಬೆಂಗಳೂರಿನ ಊರ್ವಶಿ, ಲಕ್ಷ್ಮಿ, ಕಾವೇರಿ, ವೈಭವಿ ಸೇರಿದಂತೆ ಐದಾರು ಚಿತ್ರಮಂದಿರಗಳಲ್ಲಿ ಟಿಕೆಟ್ ನೀಡಲಾಗುತ್ತಿದೆ. ಇದರ ಜೊತೆಗೆ ಮೊದಲ ಹಂತದ ಚಿತ್ರಮಂದಿರಗಳ ಪಟ್ಟಿ ಕೂಡ ಹೊರ ಬಂದಿದೆ. ನರ್ತಕಿ 'ಕುರುಕ್ಷೇತ್ರ'ದ ಮುಖ್ಯ ಚಿತ್ರಮಂದಿರವಾಗಿದೆ.

ಬಿಡುಗಡೆಯ ಪ್ಲಾನಿಂಗ್ ಹೀಗಿದೆ
'ಕುರುಕ್ಷೇತ್ರ' ಸಿನಿಮಾಗೆ ಬೇರೆ ಭಾಷೆಯಿಂದ ಕೂಡ ಒಳ್ಳೆಯ ಬೇಡಿಕೆ ಬಂದಿದೆಯಂತೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲಕ್ಕೆ ಆಗಸ್ಟ್ 9 ರಂದು ಬಿಡುಗಡೆ ಆಗಲಿದೆ. ಒಂದು ವಾರದ ನಂತರ ಆಗಸ್ಟ್ 16 ರಂದು ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹಿಂದಿಯಲ್ಲಿ ಮೂರು ವಾರಗಳ ನಂತರ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧಾರಿಸಲಾಗಿದೆ.

ಮಕ್ಕಳು ನೋಡಿ ತುಂಬ ಇಷ್ಟ ಪಡುತ್ತಾರೆ
ರಾಮಾಯಣ, ಮಹಾಭಾರತವನ್ನು ನಾವು ಓದಿದ್ದೇವೆ. ಆದರೆ, ಮಕ್ಕಳು ಈ ಸಿನಿಮಾವನ್ನು ನೋಡಿದರೆ, ತುಂಬ ಖುಷಿ ಪಡುತ್ತಾರೆ. ಮಕ್ಕಳು ತ್ರೀಡಿ ಅನುಭವವನ್ನು ಇಷ್ಟ ಪಡುತ್ತಾರೆ. ಒಮ್ಮೆ ಸಿನಿಮಾ ನೋಡಿದರೆ, ಆ ಕಥೆ ಅವರ ಮನಸ್ಸಿನಲ್ಲಿ ಇರುತ್ತದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಮತ್ತೆ ನೋಡಬೇಕು ಎನಿಸುತ್ತದೆ. ನನಗೂ ಸಿನಿಮಾ ನೋಡಿ ಇನ್ನೊಂದು ಬಾರಿ ನೋಡಬೇಕು ಎನಿಸಿತ್ತು.''

ನಿರ್ಮಾಪಕರಿಗೆ ಎರಡು ಗುಂಡಿಗೆ ಇರಬೇಕು
''ಈ ಸಿನಿಮಾಗೆ ತಂತ್ರಜ್ಞರ ಶ್ರಮ ಬಹಳ ದೊಡ್ಡದಿದೆ. ಇದು ಕನ್ನಡದ ಹೆಮ್ಮೆಯ ಸಿನಿಮಾ. ಸಿನಿಮಾ ತಡ ಆಗಿರಬಹುದು ಆದರೆ, ಈ ಸಿನಿಮಾ ಮುನಿರತ್ನ ಅವರಿಂದಲೇ ಬೇಗ ಬರಲು ಸಾಧ್ಯ ಆಗಿದೆ. ಇಡೀ ಕರ್ನಾಟಕದ ಎಲ್ಲರೂ ಈ ಸಿನಿಮಾ ನೋಡಬೇಕು ಎನ್ನುವುದು ನನ್ನ ಆಸೆ. ಕುರುಕ್ಷೇತ್ರ ಎನ್ನುವುದು ಸಾಮಾನ್ಯ ಪ್ರಯತ್ನ ಅಲ್ಲ. ಈ ಚಿತ್ರದ ಮಾಡಿದ ನಿರ್ಮಾಪಕರಿಗೆ ಎರಡು ಗುಂಡಿಗೆ ಇರಬೇಕು.'' ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.


Click it and Unblock the Notifications











