For Quick Alerts
  ALLOW NOTIFICATIONS  
  For Daily Alerts

  ರಾಕ್ಲೈನ್ ವೆಂಕಟೇಶ್ 'ಮದಕರಿ ನಾಯಕ' ಚಿತ್ರ ಮಾಡಲು 'ಈ ವ್ಯಕ್ತಿ' ಪ್ರೇರಣೆ

  |
  ಮದಕರಿ ಚಿತ್ರ ಮಾಡಲು ಆ ಹಿರಿಯ ನಟ ಸ್ಪೂರ್ತಿ ಅಂತೆ.? | ROCKLINE VENKATESH | DARSHAN | MADAKARI | SUMALATHA

  ಕನ್ನಡದ ಶ್ರೀಮಂತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ರಾಕ್ ಲೈನ್ ಎಂಟರ್ಪ್ರೈಸ್‌ ಕೂಡ ಒಂದು. ಅಗ್ನಿ ಐಪಿಎಸ್, ದಿಗ್ಗಜರು, ಲಾಲಿ, ಪ್ರೀತ್ಸೆ, ಮೌರ್ಯ, ಜಂಗ್ಲಿ, ಸೂಪರ್, ಮನಸಾರೆ, ಪವರ್, ನಟಸಾರ್ವಭೌಮ, ಆದಿಲಕ್ಷ್ಮಿ ಪುರಾಣ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನ ರಾಕ್ಲೈನ್ ಸಂಸ್ಥೆ ನಿರ್ಮಿಸಿದೆ.

  ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿ ರಜನಿಕಾಂತ್ ಜೊತೆ ಲಿಂಗ, ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ಭಜರಂಗಿ ಭಾಯ್ ಜಾನ್ ಅಂತಹ ಚಿತ್ರ ನಿರ್ಮಿಸಿದ್ದಾರೆ.

  ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತ

  ರಾಕ್ಲೈನ್ ವೆಂಕಟೇಶ್ ಅವರಿಗೆ ಐತಿಹಾಸಿಕ ಅಥವಾ ಪೌರಾಣಿಕ ಚಿತ್ರವೊಂದನ್ನು ನಿರ್ಮಿಸಬೇಕು ಎಂಬ ಆಸೆ ಇತ್ತು. ಆ ಆಸೆ ಈಗ 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ನೆರವೇರುತ್ತಿದೆ.


  ಈ ಸಿನಿಮಾ ಮಾಡಲು ರಾಕ್ಲೈನ್ ಅವರಿಗೆ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ಅವರು ಪ್ರೇರಣೆಯಂತೆ. 'ಕನ್ನಡದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಹಾಕಿ, ಇಂತಹದೊಂದು ಸಿನಿಮಾ ಮಾಡಬಹುದು ಎಂದು ತೋರಿಸಿದ್ದು ಮುನಿರತ್ನ. ಅವರ 'ಕುರುಕ್ಷೇತ್ರ' ನೋಡಿ ಈಗ ಈ ಚಿತ್ರ ಮಾಡಬೇಕು ಎಂದು ಧೈರ್ಯ ಬಂತು' ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿಕೊಂಡಿದ್ದಾರೆ.

  ದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಲ್ಲಿ ಸಂಸದೆ ಸುಮಲತಾ?ದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಲ್ಲಿ ಸಂಸದೆ ಸುಮಲತಾ?

  ಅಂದ್ಹಾಗೆ, ಮುನಿರತ್ನ ಮತ್ತು ರಾಕ್ಲೈನ್ ವೆಂಕಟೇಶ್ ಸಂಬಂಧಿಕರು. ಇಬ್ಬರಲ್ಲಿ ಯಾರೇ ಸಿನಿಮಾ ಮಾಡಿದ್ರು ಮತ್ತೊಬ್ಬರು ಸಪೋರ್ಟ್ ಮಾಡ್ತಾರೆ. ಮುನಿರತ್ನ ನಿರ್ಮಿಸಿದ್ದ ಕುರುಕ್ಷೇತ್ರ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ಬಾಕ್ಸ್ ಆಫೀಸ್ನನಲ್ಲೂ ನೂರು ಕೋಟಿ ಗಳಿಸಿ ದಾಖಲೆ ಮಾಡಿದೆ.

  English summary
  Challenging Star Darshan starrer Rajaveera Madakari Nayaka movie has start officially.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X