ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್
ವೀರ ಮದಕರಿ ನಾಯಕ ಸಿನಿಮಾ ಕನ್ನಡ ಸಿನಿರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಅದರ ದರ್ಶನ್ ಸಿನಿಮಾ ಎಂಬುದು ಒಂದು ಕಾರಣವಾದರೆ ಐತಿಹಾಸಿಕ ಕತೆಯ ಹಿನ್ನೆಲೆಯುಳ್ಳ ಸಿನಿಮಾ ಎಂಬುದು ಮತ್ತೊಂದು ಕಾರಣ.
Recommended Video
ವೀರ ಮದಕರಿ ನಾಯಕ ಸಿನಿಮಾ ಸೆಟ್ಟೇರುವ ಮುನ್ನವೇ ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿತ್ತು. ಆ ಸಿನಿಮಾವನ್ನು ಸುದೀಪ್ ಅವರೇ ಮಾಡಬೇಕೆಂದು ಹಲವರು ಪಟ್ಟು ಹಿಡಿದಿದ್ದರು. ಕೆಲವ ಮಠದ ಸ್ವಾಮೀಜಿಗಳು ಸಹ ಇದಕ್ಕೆ ದನಿಗೂಡಿಸಿದ್ದರು.
ಆದರೆ ಕೊನೆಗೆ ಸುದೀಪ್ ಅವರೇ ಪಾತ್ರವನ್ನು ಯಾರಾದರೂ ಮಾಡಲಿ ಒಳ್ಳೆಯ ಸಿನಿಮಾ ಮೂಡಿಬರಬೇಕು ಅಷ್ಟೆ ಎಂದು ವಿವಾದಕ್ಕೆ ಅಂಕಿತ ಹಾಡಿದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಸಿನಿಮಾ ಸೆಟ್ಟೇರಿ ಮೊದಲ ಹಂತದ ಚಿತ್ರೀಕರಣ ಸಹ ಪೂರ್ಣಗೊಂಡಿತು. ಅಷ್ಟರಲ್ಲೇ ಕೊರೊನಾದಿಂದಾಗಿ ಲಾಕ್‌ಡೌನ್ ಆಗಿ ಚಿತ್ರೀಕರಣ ಸ್ಥಗಿತಗೊಂಡಿತು.

ಸಂದರ್ಶನದಲ್ಲಿ ಮಾತನಾಡಿದ ರಾಕ್‌ಲೈನ್
ವೀರ ಮದಕರಿ ನಾಯಕ ಸಿನಿಮಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರಾಕ್‌ಲೈನ್ ವೆಂಕಟೇಶ್, 'ಒಂದೊಮ್ಮೆ ಹೀಗೆ ಆಗುತ್ತದೆ ಎಂದು ಗೊತ್ತಿದ್ದರೆ ವೀರ ಮದಕರಿ ನಾಯಕ ಸಿನಿಮಾ ಮಾಡುತ್ತಲೇ ಇರಲಿಲ್ಲ' ಎಂದಿದ್ದಾರೆ. ಆದರೆ ಅವರಿಗೆ ಸಿಟ್ಟಿರುವುದು ಸಿನಿಮಾದ ನಾಯಕ ದರ್ಶನ್ ಮೇಲೋ, ನಿರ್ದೇಶಕರ ಮೇಲೋ ಅಲ್ಲ.

ರಾಕ್‌ಲೈನ್‌ಗೆ ಯಾರ ಮೇಲೂ ಸಿಟ್ಟಿಲ್ಲ
ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೇಸರವಾಗಿರುವುದು ಕೊರೊನಾ ಸೃಷ್ಟಿ ಮಾಡಿರುವ ಸ್ಥಿತಿಯ ಬಗ್ಗೆ. ಕೊರೊನಾ ಸಣ್ಣ ಬಜೆಟ್ ಸಿನಿಮಾಗಳು, ಭಾರಿ ಬಜೆಟ್ ಸಿನಿಮಾಗಳು ಎಲ್ಲದರ ಮೇಲೂ ಪರಿಣಾಮ ಬೀರಿದೆ. ನಿರ್ಮಾಪಕರು ತತ್ತರಿಸಿ ಹೋಗಿದ್ದಾರೆ. ಪರಿಸ್ಥಿತಿ ಹೀಗಾಗುತ್ತದೆ ಎಂದು ಗೊತ್ತಿದ್ದರೆ ವೀರ ಮದಕರಿ ನಾಯಕ ಸಿನಿಮಾ ಮಾಡುತ್ತಿರಲಿಲ್ಲ ಎಂದಿದ್ದಾರೆ ರಾಕ್‌ಲೈನ್.

ಮೊದಲ ಶೆಡ್ಯೂಲ್ ಚಿತ್ರೀಕರಣ ಆಗಿದೆ
ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಮಾಡಿರದೇ ಇದ್ದಿದ್ದರೆ ಖಂಡಿತ ಸಿನಿಮಾ ಮಾಡುತ್ತಲೇ ಇರಲಿಲ್ಲ. ಮುಂದಿನ ವರ್ಷವೋ ಅದರ ಮುಂದಿನ ವರ್ಷವೋ ನೋಡೋಣ ಎಂದು ಸುಮ್ಮನಾಗಿಬಿಡುತ್ತಿದ್ದೆ ಎಂದಿದ್ದಾರೆ ರಾಕ್‌ಲೈನ್ ವೆಂಕಟೇಶ್.

ಹಲವು ವಿಷಯಗಳ ಬಗ್ಗೆ ಮಾತನಾಡಿರುವ ರಾಕ್‌ಲೈನ್
ಸಂದರ್ಶನದಲ್ಲಿ ಒಟಿಟಿ ಬಗ್ಗೆಯೂ ಮಾತನಾಡಿರುವ ರಾಕ್‌ಲೈನ್ ವೆಂಕಟೇಶ್, ಒಟಿಟಿ ಸಿನಿಮಾ ಕ್ಕೆ ಅಥವಾ ಚಿತ್ರಮಂದಿರಗಳಿಗೆ ಸ್ಪರ್ಧೆ ಒಡ್ಡಲಾರದು. ಸಿನಿಮಾಮಂದರಿಗಳು ನೀಡುವ ಅನುಭವ ಪ್ರೇಕ್ಷಕನಿಗೆ ಇಷ್ಟ ಆತ ಸಿನಿಮಾಗಳಿಗಾಗಿ ಚಿತ್ರಮಂದಿರಕ್ಕೆ ಬಂದೇ ಬರುತ್ತಾನೆ ಎಂದಿದ್ದಾರೆ.


Click it and Unblock the Notifications











