For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ 'ಕನ್ನಡಿಗ' ಸಿನಿಮಾದಲ್ಲಿ ರಾಕ್ ಲೈನ್ ವೆಂಕಟೇಶ್

  |

  ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ವೇಗವಾಗಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 80ರಷ್ಟು ಮುಕ್ತಾಯವಾಗಿದೆ. ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದು, ಕ್ರೇಜಿ ಸ್ಟಾರ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

  ವಿಶೇಷ ಎಂದರೆ ಚಿತ್ರದಲ್ಲಿ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಗೆಳೆಯನ ಪಾತ್ರಕ್ಕೆ ರಾಕ್ ಲೈನ್ ಬಣ್ಣ ಹಚ್ಚಿದ್ದಾರೆ. ರಾಕ್ ಲೈನ್ ಮತ್ತು ರವಿಚಂದ್ರನ್ ಇಬ್ಬರು ಚಿತ್ರೀಕರಣ ಸೆಟ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಜರ್ಮನ್ ಕನ್ನಡಿಗನನ್ನು ಭೇಟಿಯಾದ 'ಕನ್ನಡಿಗ' ರವಿಚಂದ್ರನ್

  ಈ ಮೊದಲು ರವಿಚಂದ್ರನ್ ಮತ್ತ ರಾಕ್ ಲೈನ್ ವೆಂಕಟೇಶ್ ಇಬ್ಬರು ರಸಿಕ ಮತ್ತು ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಕನ್ನಡಿಗ ಸಿನಿಮಾ ಮೂಲಕ ಒಟ್ಟಿಗೆ ತೆರೆಮೇಲೆ ಬರ್ತಿದ್ದಾರೆ. ಇನ್ನೂ ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಗುರುದತ್ ಸಹ ನಟಿಸುತ್ತಿದ್ದಾರೆ.

  ಇತ್ತೀಚಿಗಷ್ಟೆ ಜೇಮಿ ಆಲ್ಟರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಮೊದಲು ನಿಘಂಟು ಸಂಪಾದಿಸಿದ ರೆವರೆಂಡ್ ಫರ್ನಾಂಡಿಸ್ ಕಿಟ್ಟೆಲ್ ಪಾತ್ರದಲ್ಲಿ ಕೊಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜೇಮಿ ಆಲ್ಟರ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ಜೇಮಿ ಆಲ್ಟರ್ ಜೊತೆ ರವಿಚಂದ್ರನ್ ಇರುವ ಫೋಟೋ ವೈರಲ್ ಆಗಿತ್ತು.

  ಕನ್ನಡ , ತೆಲುಗು ಎರಡರಲ್ಲೂ ಮಿಂಚಲು ಹೊರಟ ಬಿಗ್ ಬಾಸ್ ದಿವಾಕರ್..!!

  ಅಂದಹಾಗೆ 'ಕನ್ನಡಿಗ' ನಿರ್ದೇಶಕ ಬಿ ಎಂ ಗಿರಿರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. 1858ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಆ ಕಾಲವನ್ನು ಮರುಸೃಷ್ಟಿ ಮಾಡಲಾಗಿದೆ. ಇಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾನಿ ಚಂದ್ರಶೇಖರ್ ಕಾಣಿಸಿಕೊಂಡಿದ್ದಾರೆ, ಇನ್ನು ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  English summary
  Kannada Famous Producer Rockline Venkatesh to play an important role in Ravichandran's Kannadiga Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X