»   » ಮಾರ್ಚ್ 31 ರಂದು ತೆರೆಗೆ ಬರಲಿದ್ದಾನೆ 'ರೋಗ್'

ಮಾರ್ಚ್ 31 ರಂದು ತೆರೆಗೆ ಬರಲಿದ್ದಾನೆ 'ರೋಗ್'

Posted By:
Subscribe to Filmibeat Kannada

ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಕಟ್ ಹೇಳಿರುವ 'ರೋಗ್' ಸಿನಿಮಾ ಇದೇ ತಿಂಗಳು ನಿಮ್ಮ ಮುಂದೆ ಬರಲಿದೆ.

ಈಗಾಗಲೇ ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದಿರುವ 'ರೋಗ್' ಸಿನಿಮಾ ಮಾರ್ಚ್ 31 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ರೋಗ್' ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.[ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಟ್ರೈಲರ್ ಔಟ್]

'Rogue' to release on March 31st

ನಿರ್ಮಾಪಕ ಸಿ.ಆರ್.ಮನೋಹರ್ ರವರ ಸಹೋದರ ಸಂಬಂಧಿ ಇಶಾನ್ 'ರೋಗ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇಶಾನ್ ಗೆ 'ರೋಗ್' ಚಿತ್ರದಲ್ಲಿ ಮನ್ನಾರ ಛೋಪ್ರಾ ಹಾಗೂ ಏಂಜೆಲಾ ಎಂಬ ಇಬ್ಬರು ನಾಯಕಿಯರು.

'Rogue' to release on March 31st

ಸುನೀಲ್ ಕಶ್ಯಪ್ ಸಂಗೀತ ಸಂಯೋಜನೆ ಮುಖೇಶ್ ಛಾಯಾಗ್ರಹಣ ಹೊಂದಿರುವ 'ರೋಗ್' ಚಿತ್ರ ಮಾರ್ಚ್ 31 ರಂದು ನಿಮ್ಮ ಮುಂದೆ ಬರಲಿದೆ. ನೋಡಲು ನೀವು ರೆಡಿನಾ.?

English summary
Puri Jagannath Directorial 'Rogue' to release on March 31st

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada