ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾಗೆ ಗೇಟ್ ಪಾಸ್
Recommended Video
ಮಾಜಿ ಸಂಸದೆ, ನಟಿ ರಮ್ಯಾ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸ್ಥಾನದಿಂದ ತೆಗುದುಹಾಕಲಾಗಿದೆ. ಸದಾ ವಿವಾದಗಳನ್ನು ಮೈ ಮೇಲೆ ಎಳುದೊಕೊಳ್ಳುತ್ತಿದ್ದ ರಮ್ಯಾ ಈಗ ಸೋಷಿಯಲ್ ಮೀಡಿಯಾದಿಂದ ದೂರಸರಿದ್ದಾರೆ. ಈ ಕುರಿತು ಕಾಂಗ್ರೆಸ್ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಧಿಕೃತ ಹೇಳಿಕೆ ರಿಲೀಸ್ ಮಾಡಿದ್ದಾರೆ.
ರಮ್ಯಾ ಸ್ಥಾನಕ್ಕೀಗ ಗುಜರಾತ್ ನ ರೋಹನ್ ಗುಪ್ತ ಅವರನ್ನು ನೇಮಕ ಮಾಡಲಾಗಿದೆ. ಸೋನಿಯ ಗಾಂಧಿ ಅವರೆ ರೋಹನ್ ಗುಪ್ತ ಹೆಸರನ್ನು ಸೂಚಿಸಿರುವುದಾಗಿ ವೇಣುಗೋಪಾಲ್ ತಿಳಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿರುವ ರೋಹನ್ ಗುಪ್ತಾ ಗುಜರಾತಿನ ಅಹಮದಾಬಾದ್ ನವರಾಗಿದ್ದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜಕೀಯ ಉತ್ಸಾಹಿ, ಉದ್ಯಮಿ, ಪ್ರೇರಕ, ಟ್ವೀಟ್ ಗಳು ಕಟ್ಟುನಿಟ್ಟಾಗಿ ವೈಯಕ್ತಿಕವಾಗಿವೆ ಎಂದು ಬರೆದುಕೊಂಡಿದ್ದಾರೆ.
2013ರಲ್ಲಿ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ರಮ್ಯಾ ನಂತರ ರಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆ ನಂತರ ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಹುದ್ದೆ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡುತ್ತ, ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ರಮ್ಯಾ, ಕಳೆದ ಕೆಲವು ತಿಂಗಳಿಂದ ಅಂದ್ರೆ ಲೋಕಸಭಾ ಚುನಾವಣೆಯ ನಂತರ ಸೈಲೆಂಟ್ ಆಗಿದ್ದಾರೆ.

ರಮ್ಯಾ ಸೋಷಿಯಲ್ ಮಿಡಿಯಾದಿಂದ ಮಾತ್ರವವಲ್ಲದೆ, ರಾಜಕೀಯ ರಂಗದಿಂದನೂ ದೂರವಾಗಿದ್ದಾರೆ. ರಮ್ಯಾ ಈಗ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದ್ರೀಗ ಅವರ ಜಾಗಕ್ಕೆ ಮತ್ತೊಬ್ಬರನ್ನು ಕೂರಿಸಲಾಗಿದೆ. ಸೋಷಿಯಲ್ ಮೀಡಿಯಾದ ಜಂಟಿ ಸಂಯೋಜಕರಾಗಿ ಗುರು ಸಿಮ್ರಾನ್ ಸಿಂಗ್, ಬಾಬುರಾಮ್ ಮುಂಡೆ ಅವರನ್ನು ನೇಮಿಸಲಾಗಿದೆ.


Click it and Unblock the Notifications











