'ರೌಡಿ ಫೆಲೋ' ಆದ ರಾಕ್ ಸ್ಟಾರ್ ರೋಹಿತ್ ಗೆ 'KGF' ನಿರ್ದೇಶಕ ಪ್ರಶಾಂತ್ ನೀಲ್ ಸಾಥ್
ಸ್ಯಾಂಡಲ್ ವುಡ್ ನಟ ರೋಹಿತ್ ಈಗ ರೌಡಿ ಫೆಲೋ ಆಗಿದ್ದಾರೆ. ರಾಕ್ ಸ್ಟಾರ್ ರೋಹಿತ್ ಅಂತನೆ ಖ್ಯಾತಿಗಳಿಸಿರುವ ರೋಹಿತ್ ರೌಡಿ ಆದ್ರ ಅಂತ ಅಂದ್ಕೋಬೇಡಿ, ಅವರು ರೌಡಿ ಫೆಲೋ ಆಗಿದ್ದು ಸಿನಿಮಾದಲ್ಲಿ. ಹೌದು, ರೋಹಿತ್ 'ರೌಡಿ ಫೆಲೋ' ಎನ್ನುವ ಹೊಸ ಸಿನಿಮಾ ಮೂಲಕ ಕನ್ನಡ ಚಿತ್ರಪ್ರಿಯರ ಮುಂದೆ ಸಜ್ಜಾಗುತ್ತಿದ್ದಾರೆ. ವಿಶೇಷ ಅಂದರೆ ರೋಹಿತ್ ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಹ ಸಾಥ್ ನೀಡಿದ್ದಾರೆ.
Recommended Video
ಇಂದು ರೋಹಿತ್ ಗೆ ಹುಟ್ಟುಹಬ್ಬದ ಸಂಭ್ರಮ. ಇದೆ ಖುಷಿಯಲ್ಲಿ ರೋಹಿತ್ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ರೋಹಿತ್ ಆಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ರೋಹಿತ್ ಈ ಮೊದಲು ಕರ್ವ ಮತ್ತು ಬಕಾಸುರ ಸಿನಿಮಾಗಳಲ್ಲಿ ಮಿಂಚಿದ್ದರು. ರೌಡಿ ಫೆಲೋ ರಾಕ್ ಸ್ಟಾರ್ ಅಭಿನಯದ ಮೂರನೆ ಸಿನಿಮಾವಾಗಿದೆ. ರೋಹಿತ್ ಗೆ ಇದು ತುಂಬಾ ವಿಶೇಷವಾದ ಸಿನಿಮಾವಾಗಿದೆ. ಕಾರಣ ರೋಹಿತ್ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದೆ ಮೊದಲ ಬಾರಿಗೆ ರೋಹಿತ್ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ.

ರೌಡಿ ಫೆಲೋ ಚಿತ್ರದ ಕಥೆ ಸಿದ್ಧಪಡಿಸಿಲು ನಿರ್ದೇಶಕ ಪ್ರಶಾಂತ್ ಸಾಥ್ ನೀಡಿದ್ದಾರೆ. ಪ್ರಶಾಂತ್ ನೀಲ್ ಕಥೆಗೆ ಗ್ರೀನ್ ಸಿಗ್ನಲ್ ನೀಡಿದ ನಂತರವೆ ರೌಡಿ ಫೆಲೋ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ. ಚಿತ್ರಕ್ಕೆ ಕರ್ವ, 6-5=2 ಮತ್ತು ದಿಯ ಸಿನಿಮಾ ನಿರ್ಮಾಣ ಮಾಡಿದ್ದ ಪದ್ಮಾವತಿ ಬ್ಯಾನರ್ ಬಂಡವಾಳ ಹೂಡಿದ್ದಾರೆ.
ರಾಮ ರಾಮಾ ರೇ ಮತ್ತು ಒಂದಲ್ಲ ಎರಡಲ್ಲ ಸಿನಿಮಾ ಖ್ಯಾತಿಯ ಛಾಯಾಗ್ರಾಹಕ ಲವಿತ್ ಕುಮಾರ್ ರೌಡಿ ಫೆಲೋ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರವಿ ಬಸ್ರೂರು ಅವರ ಬ್ಯಾಗ್ರೌಂಡ್ ಸ್ಕೋರ್ ಚಿತ್ರಕ್ಕೆ ಇರಲಿದೆ. ಇನ್ನೂ ರೋಹಿತ್ ಗೆ ನಾಯಕಿಯಾಗಿ ವಿದ್ಯಾ ಪ್ರದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಮತ್ತು ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿರುವ ರೌಡಿ ಫೆಲೋ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ.


Click it and Unblock the Notifications











