For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಡೈರೆಕ್ಟರ್ ಮಗನ ಚಿತ್ರದಲ್ಲಿ ಟಾಪ್ ಲೆಸ್ ಆದ ನಟಿ

  |

  ಸೋಮವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ಸಖತ್ ಸದ್ದು ಮಾಡಿದೆ. ಸ್ಟಾರ್ ಡೈರೆಕ್ಟರ್ ಮಗ ಟಾಪ್ ಲೆಸ್ ಆಗಿರುವ ನಟಿಯೊಬ್ಬರ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋ ಸಂಚಲನ ಸೃಷ್ಟಿಸಿದೆ.

  ಈ ಪೋಸ್ಟರ್ ನೋಡಿದ ಬಹುತೇಕ ಚಿತ್ರೋಧ್ಯಮಿಗಳು 'ಓಹ್ ಗಾಡ್...' ಎಂದು ಅಚ್ಚರಿಯಾಗಿದ್ದಾರೆ. ಈ ಲುಕ್ ನೋಡಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಥ್ರಿಲ್ ಆಗಿದ್ದು, ಇಬ್ಬರಿಗೂ ಶುಭಕೋರಿದ್ದಾರೆ.

  ಮನೆ ಮಾರಿ ಮಗನ ಸಿನಿಮಾ ಮಾಡಿದ 'ಸ್ಟಾರ್' ಡೈರೆಕ್ಟರ್.!ಮನೆ ಮಾರಿ ಮಗನ ಸಿನಿಮಾ ಮಾಡಿದ 'ಸ್ಟಾರ್' ಡೈರೆಕ್ಟರ್.!

  ಅಷ್ಟಕ್ಕೂ, ಈ ಪೋಸ್ಟರ್ ನಲ್ಲಿರುವ ಈ ಯುವ ಜೋಡಿಗಳು ಯಾರು? ಇದು ಯಾವ ಚಿತ್ರದ್ದು? ಆ ಸ್ಟಾರ್ ನಿರ್ದೇಶಕ ಯಾರು? ಮುಂದೆ ಓದಿ....

  ಪೂರಿ ಜಗನ್ನಾಥ್ ಮಗ

  ಪೂರಿ ಜಗನ್ನಾಥ್ ಮಗ

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪೂರಿ ನಟನೆಯ ಚಿತ್ರ ರೋಮ್ಯಾಂಟಿಕ್. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದು. ಈ ಹಿಂದೆ 'ಮೆಹಬೂಬ್' ಎಂಬ ಸಿನಿಮಾದಲ್ಲಿ ಆಕಾಶ್ ಪೂರಿ ನಾಯಕನಾಗಿ ಪ್ರವೇಶ ಮಾಡಿದ್ದರು. ಈಗ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದು, ಮೊದಲ ನೋಟದಿಂದಲೇ ಕಣ್ಣು ಕುಕ್ಕುತ್ತಿದ್ದಾರೆ.

  ಟಾಪ್ ಲೆಸ್ ನಟಿ ಯಾರು?

  ಟಾಪ್ ಲೆಸ್ ನಟಿ ಯಾರು?

  ಅಕಾಶ್ ಪೂರಿ ನಟನೆಯ ರೋಮ್ಯಾಂಟಿಕ್ ಚಿತ್ರದಲ್ಲಿ ಟಾಪ್ ಲೆಸ್ ಆಗಿರುವ ನಟಿ ಕೆತಿಕಾ ಶರ್ಮಾ. ಡಬ್ ಸ್ಮಾಶ್ ವಿಡಿಯೋಗಳ ಮೂಲಕ ಇಂಟರ್ ನೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಕೆತಿಕಾ ಶರ್ಮಾ ಪೂರಿ ಮಗನ ಜೊತೆ ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.

  ಕನ್ನಡದ ಖ್ಯಾತ ನಟನೊಂದಿಗೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ?ಕನ್ನಡದ ಖ್ಯಾತ ನಟನೊಂದಿಗೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ?

  ಥ್ರಿಲ್ ಆದ ಆರ್.ಜಿ.ವಿ

  ಥ್ರಿಲ್ ಆದ ಆರ್.ಜಿ.ವಿ

  'ರೋಮ್ಯಾಂಟಿಕ್' ಚಿತ್ರದ ಬೋಲ್ಡ್ ಆಗಿರುವ ಫಸ್ಟ್ ಲುಕ್ ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಫುಲ್ ಫಿದಾ ಆಗಿದ್ದಾರೆ. ಪೂರಿ ಜಗನ್ನಾಥ್ ಮಗ ಮತ್ತು ಕೆತಿಕಾ ಶರ್ಮಾ ಅವರ ಹಾಟ್ ಲುಕ್ ಗೆ ಆರ್.ಜಿ.ವಿ ಖುಷಿಯಾಗಿದ್ದು, ಚಿತ್ರತಂಡದ ಮೇಲೆ ಭರವಸೆ ಹೆಚ್ಚಿದೆ ಎಂದಿದ್ದಾರೆ.

  ಮತ್ತೊಮ್ಮೆ ಕನ್ನಡದ ನಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮಮತ್ತೊಮ್ಮೆ ಕನ್ನಡದ ನಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮ

  ಅನಿಲ್ ಪಡಾರಿ ಚೊಚ್ಚಲ ನಿರ್ದೇಶನ

  ಅನಿಲ್ ಪಡಾರಿ ಚೊಚ್ಚಲ ನಿರ್ದೇಶನ

  ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಅನಿಲ್ ಪಡಾರಿ. ಇದು ಇವರಿಗೆ ಚೊಚ್ಚಲ ಸಿನಿಮಾ. ಚಾರ್ಮಿ ಕೌರ್ ಮತ್ತು ಪೂರಿ ಜಗನ್ನಾಥ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

  English summary
  Telugu director Puri Jagannadh son Akash Puri and ketika sharma starrer romantic movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X