For Quick Alerts
  ALLOW NOTIFICATIONS  
  For Daily Alerts

  'ರೂಮ್ ಬಾಯ್ಸ್'‌ಗೆ ಸಾಥ್ ಕೊಟ್ಟ ಡಾಲಿ ಧನಂಜಯ್!

  |

  ಡಾಲಿ ಧನಂಜಯ್ ಈಗ ಉದಯೋನ್ಮುಖ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲಾಗಿ ಡಾಲಿ ಧನಂಜಯ್ ಅಭಿನಯದ ಸಿನಿಮಾಗಳು ತೆರೆಕಾಣುತ್ತಿವೆ. ಎರಡನೇ ಲಾಕ್ ಡೌನ್ ಬಳಿಕ ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ಬಡವ ರಾಸ್ಕಲ್ ಸೇರಿದಂತೆ ಚಿಕ್ಕ ಪಾತ್ರವಾದ್ರು ಸಖತ್ ಆಗಿ ಟಾಕ್ ಕ್ರೀಯೇಟ್ ಮಾಡಿದ್ದ ಪುಷ್ಪ ಸಿನಿಮಾ ಕೂಡ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಸಾಕಷ್ಟು ಕಷ್ಟ ಪಟ್ಟು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಧನಂಜಯ್ ಕೈನಲ್ಲಿ ಸಾಕಷ್ಟು ಸಿನಿಮಾಗಳು ಕೂಡ ಇದೆ.

  ಇದರ ಬೆನ್ನಲ್ಲೆ ಹೊಸ ಪ್ರತಿಭೆಗಳಿಗೆ, ಹೊಸ ಸಿನಿಮಾ ತಂಡಗಳ ಬೆನ್ನುತ್ತಟ್ಟುವ ಮತ್ತು ಪ್ರೋತ್ಸಾಹ ನೀಡುವ ಕೆಲಸವನ್ನು ಡಾಲಿ ಧನಂಜಯ್ ಮಾಡುತ್ತಿದ್ದಾರೆ. ಹೌದು ರೂಮ್ ಬಾಯ್ ಅನ್ನುವಂತ ಸಿನಿಮಾ ಕನ್ನಡದಲ್ಲಿ ತಯಾರಾಗುತ್ತಿದ್ದು, ಈ ಸಿನಿಮಾದ ಬೆನ್ನೆಲುಬಾಗಿ ನಿಂತಿದ್ದಾರೆ ಧನಂಜಯ್. ಸಿನಿಮಾದ ಪ್ರತೀ ಹೆಜ್ಜೆಯಲ್ಲೂ ಜೋತೆಯಾಗುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅದನ್ನು ಡಾಲಿ ಧನಂಜಯ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.

  ರೂಮ್ ಬಾಯ್. ಈ ಹೆಸರಿನಲ್ಲೊಂದು ಸಿನಿಮಾ ಬರ್ತಿರೋದು ಗೊತ್ತಿರುವ ವಿಷ್ಯ.. ಒಂದಷ್ಟು ಪ್ರತಿಭಾನ್ವಿತರ ತಂಡದ ಪರಿಶ್ರಮದ ರೂಮ್ ಬಾಯ್ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ರೂಮ್ ಬಾಯ್ ಸಿನಿಮಾದ ಟೀಸರ್ ರಿಲೀಸ್ ಮಾಡಿ, ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಡಾಲಿ.

  ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ 10ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಚೊಚ್ಚಲ ಸಿನಿಮಾ ರೂಮ್ ಬಾಯ್. ಈ ಹಿಂದೆ ಅಪರೇಷನ್ ನಕ್ಷತ್ರ, ಲೈಫ್ ಸೂಪರ್, ಗ್ರಾಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿತ್ ಸೂರ್ಯ ಹೀರೋ ಆಗಿ ರೂಮ್ ಬಾಯ್ ಸಿನಿಮಾದಲ್ಲಿ ನಟಿಸಿದ್ದು, ಜೊತೆಗೆ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಲಿಖಿತ್ ಸೂರ್ಯಗೆ ಜೋಡಿಯಾಗಿ ರಕ್ಷಾ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಒಂದಷ್ಟು ತಾರಾಗಣ ಸಿನಿಮಾದಲ್ಲಿದೆ.

  ಸೈಕಾಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ರೂಮ್ ಬಾಯ್ ಸಿನಿಮಾದಲ್ಲಿ ಧನಪಾಲ್ ನಾಯಕ್ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್ ಮ್ಯೂಸಿಕ್ ಇದ್ದು, ಉಳಿದಂತೆ ಕಿಯೇಟಿವ್ ಹೆಡ್ ಆಗಿ ಹಿರಿಯ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ್ ಕೆಲಸ ನಿರ್ವಹಿಸಿದ್ದು, ಐ ಕಾನ್ ಪ್ರೊಡಕ್ಷನ್ ನಡಿ ಲಿಖಿತ್ ಸೂರ್ಯ ಸಿನಿಮಾಗೆ ಹಣ ಹಾಕಿದ್ದು, ಸದ್ಯ ಶೂಟಿಂಗ್ ಮುಗಿಸಿ ಎಪ್ರಿಲ್ ಅಥವಾ ಮೇನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ರೂಮ್ ಬಾಯ್ ತಂಡ.

  English summary
  Kannada film Room Boy teaser released by Daali Dhanajay recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X