ರೂಪೇಶ್ ಶೆಟ್ಟಿಯ 'ಅಧಿಪತ್ರ' ಸಿನಿಮಾದಲ್ಲಿ ಕರಾವಳಿ ಸಂಸ್ಕೃತಿಯ ಝಲಕ್ ಹೇಗಿದೆ?

By ಅನಿತಾ ಬನಾರಿ

ನಟ ರೂಪೇಶ್ ಶೆಟ್ಟಿ ಅವರ ಹೊಸ ಚಿತ್ ಸಿನಿಮಾ 'ಅಧಿಪತ್ರ'ದಲ್ಲಿ ಕರಾವಳಿಯ ಸಂಸ್ಕೃತಿಯಾದ ಹುಲಿ ಕುಣಿತ,ಯಕ್ಷಗಾನ, ದೈವರಾಧನೆ ಸೇರಿದಂತೆ ಹಲವು ವಿಚಾರಗಳ ಝಲಕ್ ಇದೆ. ಅಂದ ಹಾಗೆ ನಟ ರೂಪೇಶ್ ಶೆಟ್ಟಿಯವರು ಇದೀಗ ಹೊಸ ಸಿನಿಮಾ 'ಅಧಿಪತ್ರ'ದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೂಪೇಶ್ ಶೆಟ್ಟಿಯವರಿಗೆ ನಾಯಕಿಯಾಗಿ ನ್ಯೂಸ್ ಆಂಕರ್ ಆಗಿ ಈಗ ನಟಿಯಾಗಿ ಬಡ್ತಿ ಪಡೆದಿರುವ ಜಾಹ್ನವಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಕರಾವಳಿ ಸಂಸ್ಕೃತಿ ಹಾಗೂ ದೈನಂದಿನ ಜೀವನದ ಸುತ್ತಮುತ್ತ ನಡೆಯುವ ಕಥೆಯ ಭಾಗವಾಗಿದೆ. ಗಗ್ಗರ ಬೆಟ್ಟದ ದೈವದ ವಿಚಾರವೂ ಈ ಸಿನಿಮಾದಲ್ಲಿ ಚರ್ಚೆಯಾಗಿದ್ದು, ಊರಿನಲ್ಲಿ ನಡೆಯುತ್ತಿರುವುದೆಲ್ಲದಕ್ಕೂ ದೈವವೇ ಕಾರಣ ಎಂಬ ಡೈಲಾಗ್ ಕೂಡ ಇದೆ.

Roopesh Shetty starrer Adhipatra movie has glimpse of coastal culture

ಸದ್ಯಕ್ಕೆ 'ಅಧಿಪತ್ರ' ಸಿನಿಮಾದ ಪ್ರೋಮೋ ರಿಲೀಸ್ ಆಗಿದೆ. ಸಿನಿಪ್ರಿಯರ ಮನ ಸೆಳೆದಿರುವ ಈ ಪ್ರೋಮೋಗೆ ಬಹಳಷ್ಟು ಪಾಸಿಟಿವ್ ಕಮೆಂಟ್‌ಗಳು ಕೇಳಿಬರುತ್ತಿದೆ. ಜೊತೆಗೆ ಈಗಾಗಲೇ ಪ್ರೋಮೋವನ್ನು ಸಿನಿಪ್ರಿಯರು ಮೆಚ್ಚಿಕೊಂಡಿರುವ ಕಾರಣ ಸಿನಿಮಾವೂ ಕೂಡಾ ಮೆಚ್ಚುಗೆ ಗಳಿಸಿಬಹುದು ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ಇನ್ನು ಪತ್ರಕರ್ತೆ ಜಾಹ್ನವಿ ಇದೇ ಮೊದಲ ಬಾರಿಗೆ ನಾಯಕಿಗಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಾಹ್ನವಿಯ ಅವರ ಅಭಿನಯದ ಮೊದಲ ಸಿನಿಮಾ ಇದಾಗಿದ್ದು, ಪ್ರೊಮೋ ದಲ್ಲಿ ಅವರದು ಒಂದಷ್ಟು ಸೀನ್ ಗಳು ಕಾಣಿಸಿಕೊಂಡಿದೆ.

Roopesh Shetty starrer Adhipatra movie has glimpse of coastal culture

ಅಂದಹಾಗೆ ನಟ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಗುರುತಿಸಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ. ಆದರೆ, ಕಿರುತೆರೆಗೂ ಬರುವ ಮೊದಲು ಅವರು ಹಿರಿತೆರೆಯಲ್ಲಿ ಮೋಡಿ ಮಾಡಿದ ಹ್ಯಾಂಡ್ಸಮ್ ಹುಡುಗ. ತುಳು ಸಿನಿಮಾಗಳ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದರು ರೂಪೇಶ್ ಶೆಟ್ಟಿ.

ಬಿಗ್ ಬಾಸ್‌ಗೆ ಬರುವುದಕ್ಕೂ ಮೊದಲು ಕನ್ನಡದ 'ಡೇಂಜರ್ ಜೋನ್', 'ಸ್ಮೈಲ್ ಪ್ಲೀಸ್', 'ನಿಶಬ್ದ-2', 'ಅನುಷ್ಕಾ', 'ಗೋವಿಂದ ಗೋವಿಂದ' ಇತ್ಯಾದಿ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಆಗಿ ಮತ್ತಷ್ಟು ಖ್ಯಾತಿಗಳಿಸಿದ ನಂತರ 'ಮಂಕು ಬಾಯ್ ಫಾಕ್ಸಿ ರಾಣಿ', 'ಸರ್ಕಸ್' ಎಂಬ ಸಿನಿಮಾಗಲ್ಲಿ ಕಾಣಿಸಿಕೊಂಡರು. ಇದೀಗ ಇವರ 'ಅಧಿಪತ್ರ' ಸಿನಿಮಾ ಬಹಳಷ್ಟು ಕುತೂಹಲ ಕೆರಳಿಸಿದ್ದು, ಯಾವ ರೀತಿ ಮೂಡಿ ಬರಲಿ ಎಂಬುದನ್ನು ಕಾದು ನೋಡಬೇಕಿದೆ. ಬಹಳಷ್ಟು ನುರಿತ ಕಲಾವಿದರನ್ನು ಒಳಗೊಂಡ ಈ ಸಿನಿಮಾ ಕರಾವಳಿಯ ಕಥೆಯನ್ನೇ ವಿಭಿನ್ನ ರೀತಿಯಲ್ಲಿ ಹೇಳಲು ಹೊರಟಿದೆ ಎಂದರೆ ತಪ್ಪಾಗಲ್ಲ.

More from Filmibeat

English summary
Roopesh Shetty will shine on screen as a police officer in Adhipatra movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X