'ಗಿರ್‌ಗಿಟ್' ಮೂಲಕ ಹಿಟ್ ಕೊಟ್ಟ ರೂಪೇಶ್‌ರ ಹೊಸ ಪ್ರಯತ್ನ 'ಸರ್ಕಸ್'

ತುಳು ಸಿನಿಮಾರಂಗದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿದ್ದು ತುಳುವಿನಲ್ಲಿ ಸಿನಿಮಾವನ್ನು ನಿರ್ದೇಶಿಸುವ ಮೂಲಕ ತುಳು ಸಿನಿ ಮಾರಂಗದಲ್ಲಿ 'ಗಿರಿಗಿಟ್' ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾದರು. ಈ ಮಧ್ಯೆ ಕನ್ನಡದಲ್ಲಿ 'ಗೋವಿಂದಾ ಗೋವಿಂದಾ' ಸಹಿತ ಎರಡು ಮೂರು ಸಿನಿಮಾದಲ್ಲೂ ನಟಿಸಿದ್ದರು.

ಕಳೆದ ವರ್ಷ ಲಾಕ್‌ಡೌನ್ ಸಂದರ್ಭ ಇದೇ ತಂಡದ ಪ್ರಯತ್ನದಿಂದ ತೆರೆಕಂಡ 'ಗಮ್ಜಾಲ್' ಕೂಡಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ರೂಪೇಶ್ ಶೆಟ್ಟಿ 'ಸರ್ಕಸ್' ಸಿನಿಮಾ ನಿರ್ಮಾಣದಲ್ಲಿ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರೈಸಿ ಮುಂದಿನ ಹಂತದ ಕೆಲಸ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ.

ಪ್ರತೀ ಚಿತ್ರದಲ್ಲೂ ಹೊಸತನ ಬಯಸುವ ರೂಪೇಶ್ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್‌ಗೆ ಸಂಭಾಷಣೆ ಬರೆದ ಪ್ರಸಣ್ಣ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ. ರೂಪೇಶ್ ಶೆಟ್ಟಿ ಅವರು ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಕೆಲಸಕಾರ್ಯಗಳು ಅವರು ಎಣಿಸಿದಂತೆ ಬಹು ಸುಲಭ ಆಗುತ್ತಿದೆ.

ಸಲಗ ಸಿನಿಮಾದ ವಿಲನ್‌, 'ಸರ್ಕಸ್‌'ನಲ್ಲಿ ನಟನೆ

ಸಲಗ ಸಿನಿಮಾದ ವಿಲನ್‌, 'ಸರ್ಕಸ್‌'ನಲ್ಲಿ ನಟನೆ

ರೂಪೇಶ್ ಈ ಬಾರಿ ತುಳುವಿಗೊಬ್ಬ ಹೊಸ ಖಳನಟನನ್ನು ಪರಿಚಯಿಸುತ್ತಿದ್ದಾರೆ. 'ಸಲಗ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ಯಶ್ ಶೆಟ್ಟಿ ಅವರು ವಿಲನ್‌ ಆಗಿ ತುಳು ಸಿನಿಮಾಕ್ಕೆ ಪರಿಚಯಿಸಲಾಗುತ್ತಿದೆ. ಯಶ್ ಈಗ 'ಸರ್ಕಸ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದೇ ರೀತಿ ರಚನಾ ರೈ ಎಂಬ ನಟಿಯನ್ನು ರೂಪೇಶ್ ತುಳುವಿಗೆ ಪರಿಚಯಿಸುತ್ತಿದ್ದಾರೆ. 'ಗಿರ್‌ಗಿಟ್' ತುಳು ಚಿತ್ರಗಳ ಪೈಕಿ ಅತ್ಯಂತ ಯಶಸ್ವಿ ಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ 'ಗಿರಿಗಿಟ್' ಸಿನಿಮಾ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅದೇ ತಂಡದವರು ಸರ್ಕಸ್ ಆರಂಭಿಸಿದ್ದಾರೆ.

ಕನ್ನಡದಲ್ಲಿ 'ಸರ್ಕಸ್' ಸಿನಿಮಾ ಬಂದಿದೆ

ಕನ್ನಡದಲ್ಲಿ 'ಸರ್ಕಸ್' ಸಿನಿಮಾ ಬಂದಿದೆ

'ಸರ್ಕಸ್' ಶೀರ್ಷಿಕೆ ಕನ್ನಡದಲ್ಲಿ ಈಗಾಗಲೇ ಯಶಸ್ವಿಯಾದ ಚಿತ್ರದ ಹೆಸರು. ಹಿಂದಿಯಲ್ಲೂ ಮುಂದಿನ ವರ್ಷ ಇದೇ ಹೆಸರಿನ ಚಿತ್ರವೊಂದು ತೆರೆ ಕಾಣಲಿದೆ. ತುಳು ಚಿತ್ರಗಳ ಸಾಮಾನ್ಯ ಪ್ರಕಾರವೇ ಹಾಸ್ಯ. 'ಸರ್ಕಸ್' ನಲ್ಲೂ ಅದೇ ಪ್ರಧಾನ ವಸ್ತು. ರೂಪೇಶ್ ಶೆಟ್ಟಿ ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಬಿಡುಗಡೆ ಆಗಿರುವ 'ಸರ್ಕಸ್' ಸಿನಿಮಾಕ್ಕೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿರುವ 'ಸರ್ಕಸ್' ಸಿನಿಮಾಕ್ಕೂ ಈ ತುಳು ಸಿನಿಮಾದ ಕತೆಯೊಂದಿಗೆ ಸಂಬಂಧವಿಲ್ಲ.

ತುಳು ಚಿತ್ರರಂಗದ ಘಟಾನುಘಟಿ ನಟರು ಇದ್ದಾರೆ

ತುಳು ಚಿತ್ರರಂಗದ ಘಟಾನುಘಟಿ ನಟರು ಇದ್ದಾರೆ

ಇಲ್ಲಿ ರಾಕೇಶ್ ಕದ್ರಿ ಕ್ರಿಯೆಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂ ಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್, ತಾರಾಗಣದಲ್ಲಿದ್ದಾರೆ. ಸದ್ಯ ಟಾಕಿಭಾಗದ ಚಿತ್ರೀಕರಣ ಮುಗಿದಿದೆ. ಬಳಿಕ ಹಾಡುಗಳ ಚಿತ್ರೀಕರಣ ನಡೆಯಲಿದೆ. ಒಟ್ಟು 25 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

ಆರ್‌ಎಸ್‌ ಸಿನಿಮಾ ಮತ್ತು ಶೂಲಿನ್ ಫಿಲ್ಮ್ ಲಾಂಛನ

ಆರ್‌ಎಸ್‌ ಸಿನಿಮಾ ಮತ್ತು ಶೂಲಿನ್ ಫಿಲ್ಮ್ ಲಾಂಛನ

ಆರ್‌ಎ ಸ್ ಸಿನಿಮಾ ಮತ್ತು ಶೂಲಿನ್ ಫಿಲ್ಮ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗುತ್ತಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾ ವರ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮಂಗಳೂರು, ಮರವೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀ ಕರಣ ನಡೆದಿದೆ. ಸಂಭಾಷಣೆ ಪ್ರಸಣ್ಣ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ ಈ ಚಿತ್ರಕ್ಕಿದೆ. ಕೋವಿಡ್ ಪರಿಸ್ಥಿತಿ ತಿಳಿ ಯಾಗಿ ನಿರ್ಬಂಧಗಳು ಸಡಿಲವಾದ ಬಳಿಕ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ. 'ಗಿರಿಗಿಟ್' ಬಳಿಕ ರೂಪೇಶ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.

More from Filmibeat

English summary
Actor, director Roopesh Shetty directing his second movie Circus. He previously directed movie 'Girgit' movie became hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X